ರಾಷ್ಟ್ರೀಯ ಯುವ ದಿನದ ಅಂಗವಾಗಿ ನಾಳೆ ವಿಕಸಿತ್ ಭಾರತ್ ಯುವ ನಾಯಕರ ಸಂವಾದದಲ್ಲಿ ಪ್ರಧಾನಿ ಮೋದಿ ಭಾಗಿ
30 ಲಕ್ಷಕ್ಕೂ ಹೆಚ್ಚು ಯುವಕ-ಯುವತಿಯರು ಭಾಗವಹಿಸುವುದರಿಂದ ಅರ್ಹತೆ ಆಧಾರಿತ, ಬಹು-ಹಂತದ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆಯಾದ 3000 ಯುವ ನಾಯಕರೊಂದಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. ಯುವಜನರು ತಮ್ಮ ಆಲೋಚನೆಗಳು, ಅನುಭವಗಳು ಮತ್ತು ಆಕಾಂಕ್ಷೆಗಳನ್ನು ಊಟದ ಸಮಯದಲ್ಲಿ ಪ್ರಧಾನಿಗೆ ನೇರವಾಗಿ ಹಂಚಿಕೊಳ್ಳಲು ಅವಕಾಶವನ್ನು ಪಡೆಯಲಿದ್ದಾರೆ.
ನವದೆಹಲಿ: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ಜನವರಿ 12ರಂದು ಆಚರಿಸಲಾಗುವ ರಾಷ್ಟ್ರೀಯ ಯುವ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನಾಳೆ (ಭಾನುವಾರ) ಬೆಳಿಗ್ಗೆ 10 ಗಂಟೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುವ ವಿಕಸಿತ್ ಭಾರತ್ ಯುವ ನಾಯಕರ ಸಂವಾದ 2025ರಲ್ಲಿ ಭಾಗವಹಿಸಲಿದ್ದಾರೆ. ಅವರು ಭಾರತದಾದ್ಯಂತದ 3,000 ಕ್ರಿಯಾಶೀಲ ಯುವ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ಇದಾದ ಬಳಿಕ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ವಿಕಸಿತ್ ಭಾರತ್ ಯುವ ನಾಯಕರ ಸಂವಾದವು ರಾಷ್ಟ್ರೀಯ ಯುವ ಉತ್ಸವವನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸುವ 25 ವರ್ಷಗಳ ಹಳೆಯ ಸಂಪ್ರದಾಯವನ್ನು ಮುರಿದು ಹೊಸ ರೀತಿಯಲ್ಲಿ ಆಚರಿಸುವ ಗುರಿಯನ್ನು ಹೊಂದಿದೆ. ಈ ಬಾರಿಯ ರಾಷ್ಟ್ರೀಯ ಯುವ ದಿನದಂದು ಪ್ರಧಾನ ಮಂತ್ರಿ ಮೋದಿ ದೇಶದ ಭವಿಷ್ಯದ ನಾಯಕರನ್ನು ಪ್ರೇರೇಪಿಸಲು ಮತ್ತು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಬಹು ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಭಾರತದ ಅಭಿವೃದ್ಧಿಗೆ ಪ್ರಮುಖವಾದ 10 ವಿಷಯಾಧಾರಿತ ಕ್ಷೇತ್ರಗಳನ್ನು ಪ್ರತಿನಿಧಿಸುವ ಯುವ ನಾಯಕರು 10 ಪವರ್‌ಪಾಯಿಂಟ್ ಪ್ರಸ್ತುತಿಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಮುಂದೆ ಮಂಡಿಸಲಿದ್ದಾರೆ.
A tribute to India’s Yuva Shakti!
Tomorrow, 12th January, is a very special day as it is the Jayanti of Swami Vivekananda. On this occasion, I will spend the entire day with my young friends at the Viksit Bharat Young Leaders Dialogue 2025. Over conversations and lunch, we will…
— Narendra Modi (@narendramodi) January 11, 2025
ಪ್ರಧಾನಿ ಮೋದಿ 10 ವಿಷಯಗಳ ಕುರಿತು ಭಾಗವಹಿಸುವವರು ಬರೆದ ಅತ್ಯುತ್ತಮ ಪ್ರಬಂಧಗಳ ಸಂಕಲನವನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಈ ವಿಷಯಗಳು ತಂತ್ರಜ್ಞಾನ, ಸುಸ್ಥಿರತೆ, ಮಹಿಳಾ ಸಬಲೀಕರಣ, ಉತ್ಪಾದನೆ ಮತ್ತು ಕೃಷಿಯಂತಹ ವೈವಿಧ್ಯಮಯ ಕ್ಷೇತ್ರಗಳನ್ನು ಒಳಗೊಂಡಿವೆ.
You would be happy to know about the extensive initiatives undertaken in the run-up to the #VBYLD2025. The Viksit Bharat Challenge drew lakhs of youngsters and included a quiz, essay competition and in-person interactions. The youth who I will be meeting have shown great passion…
— Narendra Modi (@narendramodi) January 11, 2025
ಇದನ್ನೂ ಓದಿ: ಶತಮಾನಗಳ ತ್ಯಾಗದ ಪ್ರತಿಫಲ; ರಾಮ ಮಂದಿರ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಕುರಿತು ಪ್ರಧಾನಿ ಮೋದಿ
ಇದೇ ವೇಳೆ ಪ್ರಧಾನಿ ಮೋದಿ ಯುವ ನಾಯಕರೊಂದಿಗೆ ಊಟ ಮಾಡಲಿದ್ದಾರೆ. ಊಟದ ವೇಳೆ ನಡೆಯುವ ವೈಯಕ್ತಿಕ ಸಂವಾದವು ಆಡಳಿತ ಮತ್ತು ಯುವ ಆಕಾಂಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ, ಭಾಗವಹಿಸುವವರಲ್ಲಿ ಆಳವಾದ ಮಾಲೀಕತ್ವ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುತ್ತದೆ ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ