‘ಕೆ ಕವಿತಾ ಎಎಪಿ ನಾಯಕರಿಗೆ ₹100 ಕೋಟಿ ಕೊಟ್ಟಿದ್ದಾರೆ’: ಜಾರಿ ನಿರ್ದೇಶನಾಲಯ

|

Updated on: Mar 18, 2024 | 8:32 PM

ಕವಿತಾ ಅವರು ಈ ಹಿಂದೆ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದು, ಬಿಜೆಪಿ ತೆಲಂಗಾಣಕ್ಕೆ "ಹಿಂಬಾಗಿಲ ಪ್ರವೇಶ" ಪಡೆಯಲು ಸಾಧ್ಯವಾಗದ ಕಾರಣ ಕೇಂದ್ರವು ಇಡಿಯನ್ನು "ಬಳಸುತ್ತಿದೆ" ಎಂದು ಆರೋಪಿಸಿದರು. ರಾಜಕೀಯ ಎದುರಾಳಿಗಳನ್ನು ಮುಗಿಸಲು ಬಿಜೆಪಿಯು ಇಡಿ ಮತ್ತು ಸಿಬಿಐ ಅನ್ನು ತನ್ನ ಗೂಂಡಾಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಎಎಪಿ ಆರೋಪಿಸಿದೆ.

‘ಕೆ ಕವಿತಾ ಎಎಪಿ ನಾಯಕರಿಗೆ ₹100 ಕೋಟಿ ಕೊಟ್ಟಿದ್ದಾರೆ’: ಜಾರಿ ನಿರ್ದೇಶನಾಲಯ
ಕೆ. ಕವಿತಾ
Follow us on

ದೆಹಲಿ ಮಾರ್ಚ್ 18: ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ.ಕವಿತಾ (K Kavitha) ಅವರು ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಉನ್ನತ ನಾಯಕರೊಂದಿಗೆ ಸಂಚು ರೂಪಿಸಿ ಆಮ್ ಆದ್ಮಿ ಪಕ್ಷದ (AAP) ನಾಯಕರಿಗೆ ₹ 100 ಕೋಟಿ ಪಾವತಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸೋಮವಾರ ಆರೋಪಿಸಿದೆ. ಇಡಿ ಹೇಳಿಕೆಯ ಪ್ರಕಾರ, “ಕವಿತಾ ಇತರರೊಂದಿಗೆ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಎಎಪಿಯ ಉನ್ನತ ನಾಯಕರೊಂದಿಗೆ ದೆಹಲಿ ಅಬಕಾರಿ ನೀತಿ-ರೂಪಿಸುವಿಕೆ ಮತ್ತು ಅನುಷ್ಠಾನದಲ್ಲಿ ಒಲವು ಪಡೆಯಲು ಪಿತೂರಿ ನಡೆಸಿದ್ದಾರೆ. ಈ ಅನುಕೂಲಗಳಿಗೆ ಪ್ರತಿಯಾಗಿ ಅವರು ಎಎಪಿ ನಾಯಕರಿಗೆ ₹ 100 ಕೋಟಿ ಪಾವತಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಇಡಿ ಹೇಳಿದೆ.

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿಯನ್ನು ಕಳೆದ ವಾರ ಇಡಿ ಬಂಧಿಸಿದ್ದು, ಪ್ರಸ್ತುತ ಮಾರ್ಚ್ 23 ರವರೆಗೆ ಅವರು ಏಜೆನ್ಸಿಯ ವಶದಲ್ಲಿರಲಿದ್ದಾರೆ. ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ “ಭ್ರಷ್ಟಾಚಾರ ಮತ್ತು ಪಿತೂರಿ” ಯ ಮೂಲಕ, “ಎಎಪಿಗೆ ಸಗಟು ವ್ಯಾಪಾರಿಗಳಿಂದ ಕಿಕ್‌ಬ್ಯಾಕ್ ರೂಪದಲ್ಲಿ ಅಕ್ರಮ ಹಣದ ನಿರಂತರ ಸ್ಟ್ರೀಮ್ ಅನ್ನು ರಚಿಸಲಾಗಿದೆ”ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಸಂಪೂರ್ಣ ಪಿತೂರಿಯಿಂದ ಮತ್ತಷ್ಟು ಲಾಭ/ಅಪರಾಧದ ಆದಾಯವನ್ನು ಗಳಿಸಲು 45 ವರ್ಷದ ಬಿಆರ್​​ಎಸ್ ನಾಯಕಿ ಮತ್ತು ಸಹಾಯಕರು ಎಎಪಿಗೆ ಮುಂಗಡವಾಗಿ ಪಾವತಿಸಿದ ಅಪರಾಧದ ಆದಾಯವನ್ನು ವಸೂಲಿ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ.

ಕವಿತಾ ಪ್ರಮುಖ ಸಂಚುಕೋರ: ಇಡಿ

ವಿಶೇಷ ಮನಿ ಲಾಂಡರಿಂಗ್ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯದಲ್ಲಿ ಬಿಆರ್‌ಎಸ್ ಎಂಎಲ್‌ಸಿಯ ರಿಮಾಂಡ್ ಕೋರಿದ ಇಡಿ, ಕವಿತಾ “ದಿಲ್ಲಿ ಅಬಕಾರಿ ನೀತಿ ಹಗರಣದ ಪ್ರಮುಖ ಸಂಚುಕೋರ ಮತ್ತು ಫಲಾನುಭವಿಗಳಲ್ಲಿ ಒಬ್ಬರು ಎಂದು ಹೇಳಿದೆ.

ಕವಿತಾ ಅವರು ಈ ಹಿಂದೆ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದು, ಬಿಜೆಪಿ ತೆಲಂಗಾಣಕ್ಕೆ “ಹಿಂಬಾಗಿಲ ಪ್ರವೇಶ” ಪಡೆಯಲು ಸಾಧ್ಯವಾಗದ ಕಾರಣ ಕೇಂದ್ರವು ಇಡಿಯನ್ನು “ಬಳಸುತ್ತಿದೆ” ಎಂದು ಆರೋಪಿಸಿದರು. ರಾಜಕೀಯ ಎದುರಾಳಿಗಳನ್ನು ಮುಗಿಸಲು ಬಿಜೆಪಿಯು ಇಡಿ ಮತ್ತು ಸಿಬಿಐ ಅನ್ನು ತನ್ನ ಗೂಂಡಾಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಎಎಪಿ ಆರೋಪಿಸಿದೆ.

ಇದನ್ನೂ ಓದಿ:ರಾಹುಲ್ ಗಾಂಧಿಯ ‘ಶಕ್ತಿ’ ಹೇಳಿಕೆ ವಿವಾದ; ಬಿಜೆಪಿಗೆ ಪ್ರತಿಯೊಬ್ಬ ಮಹಿಳೆ ಶಕ್ತಿಯ ಸಂಕೇತ ಎಂದ ಮೋದಿ

2022ರಲ್ಲಿ ಪ್ರಕರಣ ದಾಖಲಾದ ನಂತರ ದೇಶಾದ್ಯಂತ 245 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ, ಆಪ್ ನಾಯಕ ಸಂಜಯ್ ಸಿಂಗ್ ಮತ್ತು ಕೆಲವು ಮದ್ಯ ಉದ್ಯಮಿಗಳು ಸೇರಿದಂತೆ 15 ಜನರನ್ನು ಬಂಧಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.  ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ಆರು ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದ್ದು ₹128 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:30 pm, Mon, 18 March 24