AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ: ಬಿಜೆಪಿ 17, ಜೆಡಿಯು16, ಚಿರಾಗ್ ಪಾಸ್ವಾನ್ ಪಕ್ಷ 5 ಸ್ಥಾನಗಳಲ್ಲಿ ಸ್ಪರ್ಧೆ

ಬಿಹಾರದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಹಾರದಲ್ಲಿ ಈ ಹಿಂದೆ ಮೈತ್ರಿಕೂಟದಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಅದೇ ವೇಳೆ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ: ಬಿಜೆಪಿ 17, ಜೆಡಿಯು16, ಚಿರಾಗ್ ಪಾಸ್ವಾನ್ ಪಕ್ಷ 5 ಸ್ಥಾನಗಳಲ್ಲಿ ಸ್ಪರ್ಧೆ
ಮೋದಿ ಜತೆ ನಿತೀಶ್ ಕುಮಾರ್
ರಶ್ಮಿ ಕಲ್ಲಕಟ್ಟ
|

Updated on:Mar 18, 2024 | 6:55 PM

Share

ದೆಹಲಿ ಮಾರ್ಚ್ 18: ಬಿಹಾರದಲ್ಲಿ (Bihar) ಎನ್‌ಡಿಎ (NDA) ತನ್ನ ಸೀಟು ಹಂಚಿಕೆ ಸೂತ್ರವನ್ನು ಔಪಚಾರಿಕವಾಗಿ ಪ್ರಕಟಿಸಿದ್ದು, ರಾಜ್ಯದಲ್ಲಿ ಬಿಜೆಪಿ (BJP) 17 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಹಾರದಲ್ಲಿ ಈ ಹಿಂದೆ ಮೈತ್ರಿಕೂಟದಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹಾ ಅವರ ಆರ್‌ಎಲ್‌ಎಂ ತಲಾ ಒಂದು ಸ್ಥಾನದಲ್ಲಿ ಕಣಕ್ಕಿಳಿಯಲಿದೆ.

ಚಿರಾಗ್ ಪಾಸ್ವಾನ್ ಅವರ ಚಿಕ್ಕಪ್ಪ ಪಶುಪತಿ ಪರಾಸ್ ನೇತೃತ್ವದ ಎಲ್‌ಜೆಪಿ ಬಣ ಎನ್‌ಡಿಎ ಭಾಗವಾಗಿಲ್ಲ. ಚಿರಾಗ್ ಪಾಸ್ವಾನ್ ಅವರ ಘಟಕವು ಪಾಸ್ವಾನ್ ಮತದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ ಎಂದು ಸ್ಪಷ್ಟವಾದ ನಂತರ ಪರಾಸ್ ಬಣವನ್ನು ಕೈಬಿಡಲಾಯಿತು. ಸಮುದಾಯವು ಮತದಾನದ ಜನಸಂಖ್ಯೆಯ 6 ಪ್ರತಿಶತವನ್ನು ಒಳಗೊಂಡಿದೆ.

ಎಲ್‌ಜೆಪಿಯ ಭದ್ರಕೋಟೆಯಾದ ನಾವಡಾದಲ್ಲಿ ಬಿಜೆಪಿ ಸ್ಪರ್ಧಿಸಲಿದೆ.  ಗಯಾ ಮತ್ತು ಕರಕಟ್‌ನ ಜಾಗದಲ್ಲಿ ನಿತೀಶ್ ಕುಮಾರ್‌ನ ಜೆಡಿಯುಗೆ ಶಿಯೋಹರ್ ಅನ್ನು ನೀಡಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸೋತಿದ್ದ ಕಿಶನ್‌ಗಂಜ್‌ ಕೂಡ ಜೆಡಿಯು ಪಾಲಾಗಿದೆ.

ಮೂಲಗಳ ಪ್ರಕಾರ ನಿತೀಶ್ ಕುಮಾರ್ ಅವರು ಶಿಯೋಹರ್ ಸ್ಥಾನವನ್ನು ಪಡೆಯಲು ತೀವ್ರ ಲಾಬಿ ನಡೆಸಿದ್ದಾರೆ, ಅಲ್ಲಿಂದ ಇಂದು ಸಂಜೆ ಪಕ್ಷಕ್ಕೆ ಸೇರ್ಪಡೆಗೊಂಡ ಲವ್ಲಿ ಆನಂದ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಲವ್ಲಿ ಆನಂದ್ ಅವರು ಮಾಜಿ ಸಂಸದ ಆನಂದ್ ಮೋಹನ್ ಅವರ ಪತ್ನಿ ಮತ್ತು ಚೇತನ್ ಆನಂದ್ ಅವರ ತಾಯಿ. ಆಗ ಆರ್​​ಜೆಡಿ  ಶಾಸಕರಾಗಿದ್ದ ಅವರು ವಿಶ್ವಾಸ ಮತದ ಸಮಯದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಬಹಿರಂಗವಾಗಿ ನಿಂತಿದ್ದರು.

ಇದನ್ನೂ ಓದಿ: ಲಾಟರಿ ಕಿಂಗ್ ಮೂಲಕ ಶೇ.77 ರಷ್ಟು ಹಣ ಪಡೆದ ಮಿತ್ರ ಪಕ್ಷ ಡಿಎಂಕೆ ಬಗ್ಗೆ ರಾಹುಲ್ ಗಾಂಧಿ ಟೀಕಿಸುತ್ತಾರೆಯೇ?: ಲಹರ್ ಸಿಂಗ್

ಮಹಾಮೈತ್ರಿಕೂಟವನ್ನು ಎರಡನೇ ಬಾರಿಗೆ ಮುರಿದು ಈ ವರ್ಷದ ಆರಂಭದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿರುವ ಕುಮಾರ್ ಅವರ ಜೆಡಿಯು ಅದರ ಸ್ಥಾನಮಾನದ ಬದಲಾವಣೆಯ ಬಗ್ಗೆ ಬೇಸರ ತೋರಿತು. “ಎನ್‌ಡಿಎ ಎಲ್ಲಾ 40 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಮಗೆ ವಿಶ್ವಾಸವಿದೆ” ಎಂದು ಜನತಾ ದಳ ಯುನೈಟೆಡ್‌ನ ಸಂಜಯ್ ಝಾ ಇಂದು ಹೇಳಿದ್ದಾರೆ.

2019 ರಲ್ಲಿ ಸಹ, ಎರಡು ಪಕ್ಷಗಳು, ಮೌನ ಮತ್ತು  ಮುಖಾಮುಖಿಯ ನಂತರ, 50:50 ಸೂತ್ರವನ್ನು ನಿರ್ಧರಿಸಿ ಸಮಾನ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.

ಆಗ ಬಿಜೆಪಿ ಮತ್ತು  ಕುಮಾರ್ ಅವರ ಜನತಾ ದಳ ಯುನೈಟೆಡ್‌ಗೆ ತಲಾ 17 ಸ್ಥಾನಗಳು ಮತ್ತು ನಂತರ ಚಿರಾಗ್ ಪಾಸ್ವಾನ್ ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ ಆರು ಸ್ಥಾನಗಳನ್ನು ನೀಡಲಾಗಿತ್ತು. ಇಂಡಿಯಾ ಬಣದಲ್ಲಿನ ಹಲವಾರು ಸಮಸ್ಯೆಗಳಿಂದ ಅಸಮಾಧಾನಗೊಂಡ ನಂತರ ಬಣ ಬದಲಾಯಿಸಿದ ಶ ಕುಮಾರ್, ಈಗ “ಶಾಶ್ವತವಾಗಿ” NDA ಯೊಂದಿಗೆ ಇರುವುದಾಗಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Mon, 18 March 24

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ