ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಗಲೇ ಅಪಸ್ವರ, ಬಿಜೆಪಿ ಧೋರಣೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ!

ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಗಲೇ ಅಪಸ್ವರ, ಬಿಜೆಪಿ ಧೋರಣೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 18, 2024 | 6:25 PM

ಸೀಟು ಹೊಂದಾಣಿಕೆ ಬಗ್ಗೆ ಮಾತುಕತೆಗೆ ಕೂತಾಗ ತಾವು ಬೇಡಿಕೆ ಇಟ್ಟಿದ್ದು ಕೇವಲ 3-4 ಸೀಟುಗಳಿಗೆ ಮಾತ್ರ. ತಮ್ಮ ಸಾಮರ್ಥ್ಯದ ಬಗ್ಗೆ ಸಂಪೂರ್ಣ ಅರಿವಿದೆ ಮತ್ತು ಬಿಜೆಪಿಗೂ ಅದು ಗೊತ್ತಿದೆ. ಹಾಸನ ಮತ್ತು ಮಂಡ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಿದರೂ ಗೆಲ್ಲುತ್ತದೆ. ಕೇವಲ ಎರಡು ಸೀಟುಗಳಿಗಾಗಿ ತಾನು ಇಷ್ಟೆಲ್ಲ ಪ್ರಯತ್ನ, ಹೋರಾಟ ಮಾಡಬೇಕಿತ್ತೇ? ಎಂದು ಕುಮಾರಸ್ವಾಮಿ ಬೇಸರದಲ್ಲಿ ಪ್ರಶ್ನಿಸಿದರು.

ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಬಿಜೆಪಿ ಜೊತೆ ಲೋಕಸಭಾ ಚುನಾವಣೆಗಾಗಿ ಮಾಡಿಕೊಂಡಿರುವ ಮೈತ್ರಿಯಲ್ಲಿ ಅಪಸ್ವರಗಳು ಕೇಳಲಾರಂಭಿಸಿವೆ. ಇಂದು ಜೆಡಿಎಸ್ ಕೋರ್ ಕಮಿಟಿಯ ಸಭೆ (JDS Core committee Meeting) ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಕುಮಾರಸ್ವಾಮಿಯರ ಮಾತುಗಳಲ್ಲಿ ಅಸಮಾಧಾನ ಮತ್ತು ಅಸಹನೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕೋಲಾರ ಕ್ಷೇತ್ರವನ್ನು (Kolar constituency) ಜೆಡಿಎಸ್ ಗೆ ಬಿಟ್ಟಿಕೊಡಲು ಬಿಜೆಪಿ ವರಿಷ್ಠರು ಹಿಂದೇಟು ಹಾಕುತ್ತಿದ್ದಾರೆ. ಸೀಟು ಹೊಂದಾಣಿಕೆ ಬಗ್ಗೆ ಮಾತುಕತೆಗೆ ಕೂತಾಗ ತಾವು ಬೇಡಿಕೆ ಇಟ್ಟಿದ್ದು ಕೇವಲ 3-4 ಸೀಟುಗಳಿಗೆ ಮಾತ್ರ. ತಮ್ಮ ಸಾಮರ್ಥ್ಯದ ಬಗ್ಗೆ ಸಂಪೂರ್ಣ ಅರಿವಿದೆ ಮತ್ತು ಬಿಜೆಪಿಗೂ ಅದು ಗೊತ್ತಿದೆ. ಹಾಸನ ಮತ್ತು ಮಂಡ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಿದರೂ ಗೆಲ್ಲುತ್ತದೆ. ಕೇವಲ ಎರಡು ಸೀಟುಗಳಿಗಾಗಿ ತಾನು ಇಷ್ಟೆಲ್ಲ ಪ್ರಯತ್ನ, ಹೋರಾಟ ಮಾಡಬೇಕಿತ್ತೇ? ಎಂದು ಕುಮಾರಸ್ವಾಮಿ ಬೇಸರದಲ್ಲಿ ಪ್ರಶ್ನಿಸಿದರು. ಕರ್ನಾಟಕದ ರಾಜಕಾರಣವೇ ಬೇರೆ ಭಾರತದ ಉಳಿದ ಭಾಗಗಳಲ್ಲಿನ ರಾಜಕೀಯ ಚಿತ್ರಣವೇ ಬೇರೆ, ರಾಜ್ಯದ 18 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಕಾರ್ಯಕರ್ತರ ಶ್ರಮವೇ ಬಿಜೆಪಿಗೆ ನೆರವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದರಲ್ಲಿ ಸಲಹೆಗಿಂತ ಎಚ್ಚರಿಕೆ ಜಾಸ್ತಿಯಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲೋಕಸಭಾ ಚುನಾವಣೆ ದಿನಾಂಕ ಘೋಷಣೆ: ಜಿಲ್ಲಾವಾರು ಮತದಾರರ ವಿವರ ನೀಡಿದ ಜಿಲ್ಲಾಧಿಕಾರಿಗಳು