Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಬೆಂಬಲ, ಪ್ರೀತಿ ಮತ್ತು ಉತ್ಸಾಹ ನೋಡುತ್ತಿದ್ದರೆ ಕರ್ನಾಟಕದಲ್ಲಿ ಬಿಜೆಪಿಗೆ ಈಗಾಗಲೇ ಸಮರ್ಥನೆ ಸಿಕ್ಕಿದೆ: ಪ್ರಧಾನಿ ನರೇಂದ್ರ ಮೋದಿ

ನಿಮ್ಮ ಬೆಂಬಲ, ಪ್ರೀತಿ ಮತ್ತು ಉತ್ಸಾಹ ನೋಡುತ್ತಿದ್ದರೆ ಕರ್ನಾಟಕದಲ್ಲಿ ಬಿಜೆಪಿಗೆ ಈಗಾಗಲೇ ಸಮರ್ಥನೆ ಸಿಕ್ಕಿದೆ: ಪ್ರಧಾನಿ ನರೇಂದ್ರ ಮೋದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 18, 2024 | 4:40 PM

ನೆರೆದಿರುವ ಜನರ ಪ್ರೀತಿ, ಅವರ ಆಶೀರ್ವಾದ ಮತ್ತು ಬೆಂಬಲವನ್ನು ಗಮನಿಸಿದರೆ ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿಗೆ ಜನರ ಸಮರ್ಥನೆ ಸಿಕ್ಕಿರುವುದದು ದೃಢವಾಗುತ್ತದೆ ಎಂದು ಮೋದಿ ಹೇಳಿದರು. ಇಡೀ ಮೈದಾನ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ತುಳುಕುತ್ತಿರುವುದನ್ನು ತಾವು ಗಮನಿಸುತ್ತಿರುವುದಾಗಿ ಅವರು ಹೇಳಿದರು.

ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಇಂದು ಮೋದಿನಾಡು ಆಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ವಿಶೇಷ ವಿಮಾನವೊಂದರಲ್ಲಿ ಶಿವಮೊಗ್ಗೆಗೆ (Shivamogga) ಮಧ್ಯಾಹ್ನ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಸ್ವಾಗತಿಸಲು ಉರಿಬಿಸಿಲನ್ನು ಲೆಕ್ಕಿಸದೆ ಲಕ್ಷಾಂತರ ಜನ ನೆರೆದಿದ್ದರು. ನಗರದ ಅಲ್ಲಮ ಪ್ರಭು ಫ್ರೀಡಂಪಾರ್ಕ್ ನಲ್ಲಿ (Allamaprabhu Freedom Park) ಆಯೋಜಿಸಿದ ಬಿಜೆಪಿ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ಮೋದಿ ಕಲಬುರಗಿಯಂತೆ ಕನ್ನಡಲ್ಲೇ ಭಾಷಣ ಆರಂಭಿಸಿದರು ಮತ್ತು ಶಕ್ತಿ ಸ್ವರೂಪಿಣಿ ಸಿಗಂದೂರು ಚೌಡೇಶ್ವರು ದೇವಿಗೆ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ಶ್ರದ್ಧಾಪೂರ್ವಕವಾಗಿ ನಮಿಸಿದರು. ನೆರೆದಿರುವ ಜನರ ಪ್ರೀತಿ, ಅವರ ಆಶೀರ್ವಾದ ಮತ್ತು ಬೆಂಬಲವನ್ನು ಗಮನಿಸಿದರೆ ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿಗೆ ಜನರ ಸಮರ್ಥನೆ ಸಿಕ್ಕಿರುವುದದು ದೃಢವಾಗುತ್ತದೆ ಎಂದು ಮೋದಿ ಹೇಳಿದರು. ಇಡೀ ಮೈದಾನ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ತುಳುಕುತ್ತಿರುವುದನ್ನು ತಾವು ಗಮನಿಸುತ್ತಿರುವುದಾಗಿ ಹೇಳಿದ ಪ್ರಧಾನಿ ಮೋದಿ, ಮತ್ತೊಂದೆಡೆ ಭ್ರಷ್ಟಾಚಾರ ಮತ್ತು ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿರುವ ಇಂಡಿ ಮೈತ್ರಿಕೂಟದ ನಿದ್ರೆ ಹಾರಿಹೋಗಿರುವುದು ಸಷ್ಟವಾಗುತ್ತಿದೆ ಎಂದರು. ವಿಶ್ವದ ಅತಿದೊಡ್ಡ ಪಕ್ಷವಾಗಿ ಬೆಳೆದಿರುವ ಬಿಜೆಪಿಯ ಜನಸಂಘದ ದಿನಗಳಲ್ಲಿ ಅದರ ನಾಯಕರನ್ನು ಯಾರೂ ಗುರುತಿಸದಂಥ ಸ್ಥಿತಿ ಇತ್ತು ಎಂದು ಪ್ರಧಾನಿ ಮೋದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಹಾತ್ಮಾ ಗಾಂಧಿ ಕರ್ಮಭೂಮಿ ಸಬರಮತಿ ಆಶ್ರಮವನ್ನು ನವೀಕರಿಸುವ ಸಂಕಲ್ಪ ತೊಟ್ಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ