ಕಲಬುರಗಿ ಬಿಜೆಪಿ ಸಂಕಲ್ಪ ಸಮಾವೇಶದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನಡುವೆ ಆಪ್ತ ಮಾತುಕತೆ!

ರೋಡ್ ಶೋ ಮೂಲಕ ನಗರದ ಎನ್ ವಿ ಮೈದಾನಕ್ಕೆ ಆಗಮಿಸಿ ಭಾಷಣ ಮಾಡಿ ಅಲ್ಲಿಂದ ತೆರಳುವ ಮುನ್ನ ಪ್ರಧಾನಿ ಮೋದಿ ರಾಜ್ಯದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರರೊಂದಿಗೆ ಕೆಲ ಕ್ಷಣಗಳ ಕಾಲ ಗಹನವಾದ ಚರ್ಚೆ ನಡೆಸಿದರು. ರಾಜ್ಯ ಬಿಜೆಪಿ ಸಾರಥ್ಯವನ್ನು ತಮ್ಮ ಮಗ ಬಿವೈ ವಿಜಯೇಂದ್ರಗೆ ಪಕ್ಷದ ವರಿಷ್ಠರು ವಹಿಸಿಕೊಟ್ಟ ಬಳಿಕ ಯಡಿಯೂರಪ್ಪ ಮತ್ತೇ ಗೆಲುವಾಗಿದ್ದಾರೆ.

ಕಲಬುರಗಿ ಬಿಜೆಪಿ ಸಂಕಲ್ಪ ಸಮಾವೇಶದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನಡುವೆ ಆಪ್ತ ಮಾತುಕತೆ!
|

Updated on: Mar 16, 2024 | 5:39 PM

ಕಲಬುರಗಿ: ಬಿಸಿಲು ನಾಡು ಕಲಬುರಗಿಯಲ್ಲಿ (Kalaburagi) ಇವತ್ತು ಮೋದಿ ಹವಾ! ನಗರದ ಉಷ್ಣಾಂಶ ಇವತ್ತು 42 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದರೂ ಜನರಲ್ಲಿ ಬತ್ತದ ಉತ್ಸಾಹ. ಕಳೆದ ಬಾರಿಯ ಲೋಕಭಾ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಕರ್ನಾಟಕದಲ್ಲಿ ಪ್ರಚಾರದ ಅಭಿಯಾನವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ (Mallikarjun Kharge) ಕರ್ಮಭೂಮಿ ಕಲಬುರಗಿಯಿಂದಲೇ ಆರಂಭಿಸಿ ರಾಜ್ಯದ 28 ಕ್ಷೇತ್ರಗಳಲ್ಲಿ 25 ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದರು. ಹಾಗಾಗಿ, ಕಲಬುರಗಿಯನ್ನು ಅವರು ಶುಭ ಶಕುನವೆಂದು ಭಾವಿಸುತ್ತಾರೆ. ರೋಡ್ ಶೋ ಮೂಲಕ ನಗರದ ಎನ್ ವಿ ಮೈದಾನಕ್ಕೆ ಆಗಮಿಸಿ ಭಾಷಣ ಮಾಡಿ ಅಲ್ಲಿಂದ ತೆರಳುವ ಮುನ್ನ ಪ್ರಧಾನಿ ಮೋದಿ ರಾಜ್ಯದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರರೊಂದಿಗೆ ಕೆಲ ಕ್ಷಣಗಳ ಕಾಲ ಗಹನವಾದ ಚರ್ಚೆ ನಡೆಸಿದರು. ರಾಜ್ಯ ಬಿಜೆಪಿ ಸಾರಥ್ಯವನ್ನು ತಮ್ಮ ಮಗ ಬಿವೈ ವಿಜಯೇಂದ್ರಗೆ ಪಕ್ಷದ ವರಿಷ್ಠರು ವಹಿಸಿಕೊಟ್ಟ ಬಳಿಕ ಯಡಿಯೂರಪ್ಪ ಮತ್ತೇ ಗೆಲುವಾಗಿದ್ದಾರೆ. ಪ್ರಧಾನಿಯೊಂದಿಗೆ ಅವರು ಅತ್ಯಂತ ಸಂತಸದಿಂದ ಮಾತಾಡುವುದನ್ನು ಇಲ್ಲಿ ಗಮನಿಸಬಹುದು. ವೇದಿಕೆಯ ಮೇಲೆ ಪ್ರಲ್ಹಾದ್ ಜೋಶಿ, ಬಸವರಾಜ ಬೊಮ್ಮಾಯಿ, ಭಗವಂತ ಖೂಬಾ, ಆರ್ ಅಶೋಕ, ನರಸಿಂಹ ನಾಯಕ್, ಮಾಲೀಕಯ್ಯ ಗುತ್ತೇದಾರ್ ಮೊದಲಾದವರನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ಮತ್ತೊಮ್ಮೆ ಮೋದಿ 2024’ ಗೋಡೆ ಬರಹ ಅಭಿಯಾನಕ್ಕೆ ಬಿಎಸ್ ಯಡಿಯೂರಪ್ಪ ಚಾಲನೆ

Follow us