AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆ ಚುನಾವಣೆ: ಕರ್ನಾಟಕದ 28 ಕ್ಷೇತ್ರಗಳ ಅಂಕಿಸಂಖ್ಯೆ ಬಿಚ್ಚಿಟ್ಟ ರಾಜ್ಯ ಚುನಾವಣಾಧಿಕಾರಿ

Lok Sabha Elections: ಲೋಕಸಭೆ ಚುನಾವಣಾ ದಿನ ದಿನಕ್ಕೂ ರಂಗೇರುತ್ತಿದೆ. ಚುನಾವಣೆಯಲ್ಲಿ ಸೆಣೆಸಾಸುವುದಕ್ಕೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಇವೆಲ್ಲದರ ಮಧ್ಯೆ ಇಂದು ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಇತ್ತ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿ ಮಾಡಿ ಕರ್ನಾಟಕದಲ್ಲಿರುವ ಮತದಾರರ ಅಂಕಿ ಅಂಶಗಳನ್ನು ನೀಡಿದ್ದಾರೆ.

ಲೋಕಸಭೆ ಚುನಾವಣೆ: ಕರ್ನಾಟಕದ 28 ಕ್ಷೇತ್ರಗಳ ಅಂಕಿಸಂಖ್ಯೆ ಬಿಚ್ಚಿಟ್ಟ ರಾಜ್ಯ ಚುನಾವಣಾಧಿಕಾರಿ
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 16, 2024 | 6:04 PM

Share

ಬೆಂಗಳೂರು, ಮಾರ್ಚ್​​ 16: 2024ರ ಲೋಕಸಭಾ ಚುನಾವಣೆ (Lok Sabha Elections) ವೇಳಾಪಟ್ಟಿ ಪ್ರಕಟ ಹಿನ್ನೆಲೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿ ಮಾಡಿದ್ದು, ಕರ್ನಾಟಕದಲ್ಲಿ ಒಟ್ಟು 5,42,8,088 ಮತದಾರರು ಇದ್ದಾರೆ. 2,71,21,407 ಪುರುಷ ಮತದಾರರು, 2,70,81,748 ಮಹಿಳಾ ಮತದಾರರು ಕರ್ನಾಟಕದಲ್ಲಿ 4,933 ತೃತೀಯ ಲಿಂಗ ಮತದಾರರಿದ್ದಾರೆ. ರಾಜ್ಯದಲ್ಲಿ 18-19 ವರ್ಷದೊಳಗಿನ 11,24,622 ಯುವ ಮತದಾರರಿದ್ದಾರೆ. ರಾಜ್ಯದಲ್ಲಿ 5 ಎಸ್​ಸಿ ಮೀಸಲು ಕ್ಷೇತ್ರ, 2 ಎಸ್​ಟಿ ಮೀಸಲು ಕ್ಷೇತ್ರಗಳಿವೆ. ಮೂರನೇ ಹಂತದ ಚುನಾವಣೆಯಲ್ಲಿ ಸುರಪುರ ಕ್ಷೇತ್ರದ ಬೈ ಎಲೆಕ್ಷನ್ ನಡೆಯಲ್ಲಿದೆ ಎಂದು ಮಾಹಿತಿ ನೀಡಿದರು.

  • ಕರ್ನಾಟಕದಲ್ಲಿ 85 ವರ್ಷ ಮೇಲ್ಪಟ್ಟ 5,70,168 ಮತದಾರರಿದ್ದಾರೆ
  • ದಿವ್ಯಾಂಗ ಮತದಾರರು-6,12,154, ಬುಡಕಟ್ಟು ಮತದಾರರು-38,794
  • ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 31,74,098 ಮತದಾರು.
  • ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 15,72,958 ಮತದಾರರು.
  • ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 7,33,313 ಮತದಾರರು.
  • ಚಿಕ್ಕಮಗಳೂರಿನ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 1,68,084 ಮತದಾರರು.
  • ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಒಟ್ಟು ಮತಗಟ್ಟೆಗಳ ಸಂಖ್ಯೆ-58,834
  • ಕರ್ನಾಟಕದಲ್ಲಿ ನಗರ ಪ್ರದೇಶಗಳಲ್ಲಿರುವ ಮತಗಟ್ಟೆಗಳ ಸಂಖ್ಯೆ -21,595
  • ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಮತಗಟ್ಟೆಗಳ ಸಂಖ್ಯೆ-37,239

ನಮ್ಮ ರಾಜ್ಯದ ಸುತ್ತ ಆರು ರಾಜ್ಯಗಳ ಗಡಿ ಇದೆ. ಹಾಗಾಗಿ ಚೆಕ್ ಪೋಸ್ಟ್​ಗಳನ್ನ ರಚಿಸಲಾಗಿದೆ. 29 ಜಿಲ್ಲೆಗಳ ಜೊತೆ ಬಾರ್ಡರ್ ಬರಲಿದೆ. ಎಲ್ಲಾ ಕಡೆ ಚೆಕ್ ಪಾಯಿಂಟ್ ಹಾಕಿದ್ದೇವೆ. ಕಳೆದ ಆರು ತಿಂಗಳಿಂದ ವಿಜಿಲೆನ್ಸ್ ಸ್ಟಾರ್ಟ್ ಮಾಡಿದ್ದೇವೆ.

ಇದನ್ನೂ ಓದಿ: Assembly Election 2024: ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

532 ಕೋಟಿ ರೂ. ಹಣವನ್ನ ಸೀಜ್ ಮಾಡಲಾಗಿದೆ. ಆಗಸ್ಟ್​ನಿಂದ ಮಾರ್ಚ್​ವರೆಗೆ ಸೀಜ್ ಮಾಡಲಾಗಿದೆ. 42 ಕೋಟಿ ರೂ. ಲಿಕ್ಕರ್, 26 ಕೋಟಿ ರೂ. ಮೌಲ್ಯದ ಡ್ರಗ್ಸ್, 71 ಕೋಟಿ ರೂ. ಮೌಲ್ಯದ ಗೋಲ್ಡ್ ಸೀಜ್ ಮಾಡಿದ್ದೇವೆ. ಇಲ್ಲಿಯವರೆಗೆ 531 ಕೋಟಿ ರೂ. ಸೀಜ್ ಮಾಡಿದ್ದೇವೆ ಎಂದರು.

ಅವ್ಯವಹಾರ ನಡೆಯುತ್ತಿದ್ದರೆ ಗಮನಕ್ಕೆ ತರಬಹುದು. ಸುವಿದಾ ಆ್ಯಪ್ ಕ್ಯಾಂಡಿಡೇಟ್ಸ್​ಗೆ ನೀಡಲಾಗಿದೆ. ಅವರಿಗೆ ಯಾವುದಕ್ಕೆ ಅನುಮತಿ ಬೇಕು, ಅದಕ್ಕೆ ನಾವು ಅನುಮತಿ ಕೊಡುತ್ತೇವೆ. ರ್‍ಯಾಲಿ, ಲ್ಯಾಂಡಿಂಗ್, ವೆಹಿಕಲ್​​ಗೆ ಅನುಮತಿ ಪಡೆಯಬೇಕು. ಸುವಿದಾ ಆ್ಯಪ್ ಮೂಲಕವೇ ಅರ್ಜಿ ಹಾಕಬೇಕು. ಇದು ಪಕ್ಷ, ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ, ಬೆಂಗಳೂರಿನಲ್ಲಿ ಅಲರ್ಟ್: ಮಾದರಿ ನೀತಿಸಂಹಿತೆ ಜಾರಿಗೆ ತುಷಾರ್ ಗಿರಿನಾಥ್ ಆದೇಶ

ಇವಿಎಂ, ವಿವಿಪ್ಯಾಟ್ ಬಗ್ಗೆ ಎರಡು ದೂರಗಳನ್ನ ಸುಪ್ರೀಂ ವಜಾಗೊಳಿಸಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಇವಿಎಂ, ವಿವಿಪ್ಯಾಟ್​ಗಳ ಬಗ್ಗೆ ಡೌಟ್ ಬೇಡ. ಎಲ್ಲಾ ಬೂತ್​ಗಳಲ್ಲಿ ವಿವಿಪ್ಯಾಟ್ ಇರಲಿದೆ ಎಂದರು. ಹಣ ವ್ಯವಹಾರ ಮಾಡುತ್ತಾರೆ. ಕಿಂಗ್ ಪಿನ್ ಯಾರು ಅದರ ಮೇಲೆ ನಿಗಾ ಇರಿಸಿದ್ದೇವೆ. ಇಂದಿನಿಂದ ಬಾರ್ಡರ್​​ಗಳಲ್ಲಿ ನಿಗಾ ವಹಿಸುತ್ತೇವೆ. ಅಭ್ಯರ್ಥಿಗಳ ಹಣದ ಖರ್ಚು ವೆಚ್ಚ ಅರಿಯುತ್ತೇವೆ. ಸಾಗರೋತ್ತರ ಮತದಾರರು ತಮ್ಮ ಮತ ಇರುವಲ್ಲೇ ಮತ ಹಾಕಬೇಕು ಎಂದರು.

1808 ಥೀಮ್ ಬೇಸ್ಡ್ ಮತಗಟ್ಟೆ

ಈ ವರ್ಷವೂ ಯೂಥ್ಸ್ ಮತ್ತು ಮಹಿಳಾ ಮತಗಟ್ಟೆ ಇರಲಿದೆ. 1808 ಥೀಮ್ ಬೇಸ್ಡ್ ಮತಗಟ್ಟೆ ಇರಲಿದೆ. ಜನವರಿಯಿಂದ 13982 ದೂರು ನಮಗೆ ಬಂದಿದ್ದು, ಪರಿಹರಿಸುವ ಕೆಲಸ ಮಾಡಿದ್ದೇವೆ. ಮಾಡಲ್ ಪೂಲಿಂಗ್ ಸ್ಟೇಷನ್ ಮಾಡುತ್ತೇವೆ. 1120 ಸಖಿ ಬೂತ್​​ಗಳು ಮತ್ತು ಟ್ರೈಬ್ಸ್​ಗಾಗಿ ಪ್ರತ್ಯೇಕ ಬೂತ್ ರಚನೆ ಮಾಡುತ್ತೇವೆ ಎಂದಿದ್ದಾರೆ.

ಮತದಾನ ಮಾಡುವಂತೆ ಜನತೆಗ ಮನವಿ ಮಾಡಿದ ಮನೋಜ್ ಕುಮಾರ್ ಮೀನಾ

ನಾಮಿನೇಷನ್ ಕೊನೆಯ 10 ದಿನದವರೆಗೆ ಹೆಸರು ಸೇರಿಸಬಹುದು. ಮತದಾರರ ಹೆಸರಲ್ಲಿ ಇಲ್ಲದಿದ್ದರೆ ಮಾರ್ಚ್ ಒಳಗೆ 18 ವರ್ಷ ಆಗುತ್ತೆ ಎನ್ನುವುದಾರೆ ಫಾರಂ 8 ರಲ್ಲಿ ತಮ್ಮ ಹೆಸರನ್ನ ಮತದಾರರ ಪಟ್ಟಿಗೆ ಸೇರಿಸಬಹುದು ಎಂದಿದ್ದಾರೆ. ಕಳೆದ ಬಾರಿ ಕೆಲಕಡೆ ಮತ ಪ್ರಮಾಣ ಕಡಿಮೆಯಾಗಿತ್ತು.  ಈ‌ ಬಾರಿ ವೋಟು ಹೆಚ್ಚಳಕ್ಕೆ ವಿಶೇಷ ಪ್ರಯತ್ನ ಮಾಡುತ್ತೇವೆ. ಏಪ್ರಿಲ್ 26 ಮತ್ತು ಮೇ 7 ರಂದು ಹೆಚ್ಚಿನ ಮತದಾನ ಮಾಡಿ ನಮ್ಮ ರಾಜ್ಯಕ್ಕೆ ಗೌರವ ತಂದು ಕೊಡಿ ಎಂದು ರಾಜ್ಯದ ಜನರಿಗೆ ಮನೋಜ್ ಕುಮಾರ್ ಮೀನಾ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?