AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಟರಿ ಕಿಂಗ್ ಮೂಲಕ ಶೇ.77 ರಷ್ಟು ಹಣ ಪಡೆದ ಮಿತ್ರ ಪಕ್ಷ ಡಿಎಂಕೆ ಬಗ್ಗೆ ರಾಹುಲ್ ಗಾಂಧಿ ಟೀಕಿಸುತ್ತಾರೆಯೇ?: ಲಹರ್ ಸಿಂಗ್

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ದೇಶದ ರಾಜಕಾರಣದಲ್ಲಿ ಚುನಾವಣಾ ಬಾಂಡ್​ ಸುದ್ದಿ ಜೋರಾಗಿದೆ. ಬಾಂಡ್‌ಗಳ ಮೂಲಕ ನೀಡಲಾದ ನಿಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಅಥವಾ ಶೇ57 ಬಿಜೆಪಿಗೆ ಹೋಗಿದೆ ಎನ್ನುವ ವಿಚಾರದ ಬಗ್ಗೆ ಕಾಂಗ್ರೆಸ್ ಟೀಕಿಸುತ್ತಿದೆ. ಈ ನಡುವೆ, ಲಾಟರಿ ಕಿಂಗ್ ಮೂಲಕ ಶೇ.77 ರಷ್ಟು ಹಣ ಪಡೆದ ಮಿತ್ರ ಪಕ್ಷ ಡಿಎಂಕೆ ಕುರಿತು ರಾಹುಲ್ ಗಾಂಧಿ ಟೀಕಿಸುತ್ತಾರೆಯೇ ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯ ಪ್ರಶ್ನಿಸಿದ್ದಾರೆ.

ಲಾಟರಿ ಕಿಂಗ್ ಮೂಲಕ ಶೇ.77 ರಷ್ಟು ಹಣ ಪಡೆದ ಮಿತ್ರ ಪಕ್ಷ ಡಿಎಂಕೆ ಬಗ್ಗೆ ರಾಹುಲ್ ಗಾಂಧಿ ಟೀಕಿಸುತ್ತಾರೆಯೇ?: ಲಹರ್ ಸಿಂಗ್
ಲಾಟರಿ ಕಿಂಗ್ ಮೂಲಕ ಶೇ.77 ರಷ್ಟು ಹಣ ಪಡೆದ ಮಿತ್ರ ಪಕ್ಷ ಡಿಎಂಕೆ ಬಗ್ಗೆ ರಾಹುಲ್ ಗಾಂಧಿ ಟೀಕಿಸುತ್ತಾರೆಯೇ? ಎಂದು ಪ್ರಶ್ನಿಸಿದ ಲಹರ್ ಸಿಂಗ್ ಸಿರೋಯ
Rakesh Nayak Manchi
|

Updated on: Mar 18, 2024 | 6:09 PM

Share

ನವದೆಹಲಿ, ಮಾ.18: ಚುನಾವಣಾ ಬಾಂಡ್‌ಗಳ ಯೋಜನೆಯನ್ನು (Electoral Bonds Scheme ) ಪರಿಚಯಿಸಿದ ಆರು ವರ್ಷಗಳಲ್ಲಿ, ಬಾಂಡ್‌ಗಳ ಮೂಲಕ ನೀಡಲಾದ ನಿಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಅಥವಾ ಶೇ57 ಬಿಜೆಪಿಗೆ ಹೋಗಿದೆ. ಈ ಬಗ್ಗೆ ವಿಪಕ್ಷ ಕಾಂಗ್ರೆಸ್ ಪಕ್ಷವು ಆಡಳಿತ ಪಕ್ಷ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ. ಈ ನಡುವೆ, ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯ (Lehar Singh Siroya) ಅವರು, ಲಾಟರಿ ಕಿಂಗ್ ಮೂಲಕ ಶೇ.77 ರಷ್ಟು ಹಣ ಪಡೆದ ಮಿತ್ರ ಪಕ್ಷ ಡಿಎಂಕೆ ಕುರಿತು ರಾಹುಲ್ ಗಾಂಧಿ ಟೀಕಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

“ಚುನಾವಣಾ ಬಾಂಡ್​ಗಳ ಡೇಟಾಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮತ್ತು ಅವರ ಉದಾರವಾದಿ ಸ್ನೇಹಿತರು ನಮ್ಮನ್ನು ಹೆಸರಿಸುತ್ತಿದ್ದಾರೆ. ಅವರು ತಮ್ಮ ಸುಮಾರು 77% ಹಣವನ್ನು ಲಾಟರಿ ಕಿಂಗ್​ನಿಂದ ಪಡೆದ ಡಿಎಂಕೆಯ ಅರಿವಲಯಂ ಅವರಂತಹ ತಮ್ಮ ಸ್ನೇಹಿತರ ವಿರುದ್ಧ ಅದೇ ನಿಂದನೆಯ ಮೂಲಕ ಟೀಕಿಸುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.

“ಕಾಂಗ್ರೆಸ್​ಗೆ ಅಂತಹ ತತ್ವ ಸಿದ್ಧಾಂತ ಇದ್ದಿದ್ದರೆ, ಚುನಾವಣಾ ಬಾಂಡ್ ಮೂಲಕ ಹಣ ಸ್ವೀಕರಿಸಿದ್ದೇಕೆ? (ಈಗಲಾದರೂ) ದೇಣಿಗೆ ಬಂದ ಹಣವನ್ನು ಅವರು ದಾನ ಮಾಡುತ್ತಾರೆಯೇ ಅಥವಾ ಹಿಂದಿರುಗಿಸುತ್ತಾರೆಯೇ? ಇಂತಹ ಉದಾತ್ತವಾದ ನೈತಿಕ ಮೌಲ್ಯಗಳನ್ನು ಪಾಲಿಸುವುದು ಕಾಂಗ್ರೆಸ್ ಹಾಗೂ ಅವರ 2ಜಿ ಪಾಲುದಾರರ ವ್ಯಕ್ತಿತ್ವಕ್ಕೆ ಎಂದಿಗೂ ಸರಿ ಹೊಂದುವುದಿಲ್ಲ.” ಎಂದು ಲಹರ್ ಸಿಂಗ್ ಸಿರೋಯ ಹೇಳಿದ್ದಾರೆ.

ಇದನ್ನೂ ಓದಿ: ಚುನಾವಣಾ ಬಾಂಡ್​ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಬಹಿರಂಗಪಡಿಸುವಂತೆ ಎಸ್​ಬಿಐಗೆ ಸುಪ್ರೀಂ ಗಡುವು

ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪರಿಚಯಿಸಿದ ಆರು ವರ್ಷಗಳಲ್ಲಿ, ಬಾಂಡ್‌ಗಳ ಮೂಲಕ ನೀಡಲಾದ ನಿಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಅಥವಾ ಶೇಕಡಾ 57 ಬಿಜೆಪಿಗೆ ಹೋಗಿದೆ. ಚುನಾವಣಾ ಆಯೋಗಕ್ಕೆ ನೀಡಿದ ಘೋಷಣೆಗಳ ಪ್ರಕಾರ, ಬಿಜೆಪಿ 2017-2022ರ ಅವಧಿಯಲ್ಲಿ ಬಾಂಡ್‌ಗಳ ಮೂಲಕ 5,271.97 ಕೋಟಿ ರೂ. ಸಂಗ್ರಹಿಸಿದೆ. ಅದೇ ವೇಳೆ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು 952.29 ಕೋಟಿ ರೂ ಸಂಗ್ರಹಿಸಿದೆ. 2022-2023ರ ಹಣಕಾಸು ವರ್ಷಕ್ಕೆ ಪಕ್ಷಗಳ ವಾರ್ಷಿಕ ವರದಿಗಳನ್ನು ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ.

ಲಹರ್ ಸಿಂಗ್ ಸಿರೋಯ ಎಕ್ಸ್ ಪೋಸ್ಟ್

ರಾಜಕೀಯ ಪಕ್ಷಗಳಿಗೆ ಅನಾಮಧೇಯ ನಿಧಿಯನ್ನು ಅನುಮತಿಸುವ ಕೇಂದ್ರದ ಯೋಜನೆಯ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಸರ್ವಾನುಮತದ ತೀರ್ಪಿನಲ್ಲಿ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಹೇಳಿತ್ತು. ಆರ್‌ಟಿಐ ಮೂಲಕ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪಡೆದ ಮಾಹಿತಿಯ ಪ್ರಕಾರ 2017-2018 ಮತ್ತು 2021-2022 ರ ನಡುವಿನ ಅವಧಿಯಲ್ಲಿ, 9,208.23 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ