ರಾಜ್ಯದಲ್ಲಿ ಭಾಗಶಃ ಲಾಕ್ಡೌನ್ ಹೇರಲು ಕೇಂದ್ರದ ಅನುಮತಿ ಪಡೆಯುವ ಕುರಿತು ಯೋಚಿಸಲಾಗುತ್ತಿದ್ದು ರಾಜ್ಯ, ಕೇಂದ್ರ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ದುಪ್ಪಟ್ಟು ಶ್ರಮ ವಹಿಸುತ್ತಿವೆ. ಆದರೆ, ದೀಪಾವಳಿಯ ಸಂದರ್ಭ ಸಾಕಷ್ಟು ಜನರು ಮಾಸ್ಕ್ ಧರಿಸದೆ ಓಡಾಡಿರುವುದು, ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿರುವುದು ಕೊರೊನಾ ಹಬ್ಬಲು ಕಾರಣವಾಗಿದೆ. ಒಂದು ವೇಳೆ ಜನರು ಸರಿಯಾಗಿ ನಿಯಮಗಳನ್ನು ಪಾಲಿಸಿದರೆ ಲಾಕ್ಡೌನ್ ಅವಶ್ಯಕತೆ ಎದುರಾಗುತ್ತಿರಲಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿರುವ ಕೇಜ್ರಿವಾಲ್, ‘ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ನಮಗೆ ಅಗತ್ಯ ಸಹಕಾರ ನೀಡಿದೆ. ದೆಹಲಿಗೆ 750 ಐಸಿಯು ಒದಗಿಸುವ ಭರವಸೆ ನೀಡಿದೆ. ಈಗಾಗಲೇ ಇರುವ ಬೆಡ್ಗಳು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಿದೆ. ಆದರೆ, ಜನರು ದಯವಿಟ್ಟು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಯಮಗಳನ್ನು ಉಲ್ಲಂಘಿಸಬಾರದು, ಇದು ನಿಮ್ಮ ಹಾಗೂ ನಿಮ್ಮ ಕುಟುಂಬದ ಒಳಿತಿಗಾಗಿ ನಮ್ಮ ಪ್ರಾರ್ಥನೆ,’ ಎಂದು ವಿನಂತಿಸಿಕೊಂಡಿದ್ದಾರೆ.
ಆದರೆ, ಸೋಮವಾರ ದೆಹಲಿಯ ಆರೋಗ್ಯ ಮಂತ್ರಿ ಸತ್ಯೇಂದರ್ ಜೈನ್ ಕೊರೊನಾ ಮೂರನೇ ಅಲೆಯ ಕುರಿತು ಮಾತನಾಡಿದ್ದು, ದೆಹಲಿಯಲ್ಲಿ ಈಗಾಗಲೇ ಮೂರನೇ ಅಲೆ ಇಳಿಮುಖಗೊಂಡಿದೆ, ಹಾಗಾಗಿ ಲಾಕ್ಡೌನ್ ಮಾಡುವ ಸಂದರ್ಭ ಉದ್ಭವಿಸುವುದಿಲ್ಲ. ವೈರಸ್ ನಿಯಂತ್ರಿಸಲು ಜನ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಪರಿಹಾರವೇ ಹೊರತು ಲಾಕ್ಡೌನ್ ಅಲ್ಲ ಎಂದು ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ.