30 ವರ್ಷಗಳ ಹಿಂದೆ 4 ಕೋಟಿ ರಣಹದ್ದುಗಳಿದ್ದವು.. ಈಗ?

30 ವರ್ಷಗಳ ಹಿಂದೆ 4 ಕೋಟಿ ರಣಹದ್ದುಗಳಿದ್ದವು.. ಈಗ?

ಭಾರತದಲ್ಲಿ 1990ರ ದಶಕದ ನಂತರದ ಪಕ್ಷಿ ಸಂಕುಲದ ಸಂಖ್ಯೆಯನ್ನು ಗಮನಿಸಿದರೆ ತೀವ್ರ ಕುಸಿತದ ಹಾದಿಯಲ್ಲಿದೆ. ಅದರಲ್ಲಿಯೂ, ರಣಹದ್ದುಗಳು ಕಾಣಸಿಗುವುದು ಅಲ್ಲೋ ಇಲ್ಲೋ ಒಂದೊಂದು ಮಾತ್ರ. ಮೂರು ದಶಕಗಳ ಹಿಂದೆ 4 ಕೋಟಿ ರಣಹದ್ದುಗಳಿದ್ದವು. ಈಗ 19,000ಕ್ಕೆ ಇಳಿಕೆಯಾಗಿದೆ. ಇವುಗಳ ಪ್ರಭೇದಗಳಲ್ಲಿ ಶೇಕಡಾ 90ರಷ್ಟು ಕುಸಿತ ಉಂಟಾಗಿದೆ. ದೇಶದಲ್ಲಿ 2006ರಿಂದ ರಣಹದ್ದುಗಳ ಸಂರಕ್ಷಣಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿನ ರಣಹದ್ದುಗಳ ಸಂಖ್ಯೆ ಕಡಿಮೆಗೊಳ್ಳಲು ಕಾರಣಗಳನ್ನು ಪರಿಶೀಲಿಸುತ್ತಿದೆ. ಮತ್ತು ಪಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸಲು ಬೇಕಾದ ಯೋಜನೆಗಳನ್ನು ಹಾಗೂ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಭಾರತದಲ್ಲಿ, […]

sadhu srinath

|

Nov 17, 2020 | 5:13 PM

ಭಾರತದಲ್ಲಿ 1990ರ ದಶಕದ ನಂತರದ ಪಕ್ಷಿ ಸಂಕುಲದ ಸಂಖ್ಯೆಯನ್ನು ಗಮನಿಸಿದರೆ ತೀವ್ರ ಕುಸಿತದ ಹಾದಿಯಲ್ಲಿದೆ. ಅದರಲ್ಲಿಯೂ, ರಣಹದ್ದುಗಳು ಕಾಣಸಿಗುವುದು ಅಲ್ಲೋ ಇಲ್ಲೋ ಒಂದೊಂದು ಮಾತ್ರ. ಮೂರು ದಶಕಗಳ ಹಿಂದೆ 4 ಕೋಟಿ ರಣಹದ್ದುಗಳಿದ್ದವು. ಈಗ 19,000ಕ್ಕೆ ಇಳಿಕೆಯಾಗಿದೆ. ಇವುಗಳ ಪ್ರಭೇದಗಳಲ್ಲಿ ಶೇಕಡಾ 90ರಷ್ಟು ಕುಸಿತ ಉಂಟಾಗಿದೆ.

ದೇಶದಲ್ಲಿ 2006ರಿಂದ ರಣಹದ್ದುಗಳ ಸಂರಕ್ಷಣಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿನ ರಣಹದ್ದುಗಳ ಸಂಖ್ಯೆ ಕಡಿಮೆಗೊಳ್ಳಲು ಕಾರಣಗಳನ್ನು ಪರಿಶೀಲಿಸುತ್ತಿದೆ. ಮತ್ತು ಪಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸಲು ಬೇಕಾದ ಯೋಜನೆಗಳನ್ನು ಹಾಗೂ ಕ್ರಮಗಳನ್ನು ಕೈಗೆತ್ತಿಕೊಂಡಿದೆ.

ಭಾರತದಲ್ಲಿ, ಓರಿಯಂಟಲ್ ವೈಟ್ ಬ್ಯಾಕ್ಡ್, ಲಾಂಗ್ ಬಿಲ್ಡ್, ಸ್ಲೆಂಡರ್ ಬಿಲ್ಡ್, ಹಿಮಾಲಯನ್, ರೆಡ್ ಹೆಡೆಡ್, ಬಿಯರ್ಡೆಡ್, ಸಿನೇರಿಯಸ್ ಮತ್ತು ಯುರೇಷಿಯನ್ ಗ್ರಿಫನ್ ಸೇರಿದಂತೆ ಒಟ್ಟು 9 ಜಾತಿಯ ಪ್ರಭೇದಗಳನ್ನು ನಾವು ಕಾಣಬಹುದು. ಇವುಗಳಲ್ಲಿ 1990-2007ರ ಸಂಶೋಧನೆಯ ಪ್ರಕಾರ ಓರಿಯಂಟಲ್ ವೈಟ್ ಬ್ಯಾಕ್ಡ್, ಲಾಂಗ್ ಬಿಲ್ ಹಾಗೂ ಸ್ಲೆಂಡರ್ ಬಿಲ್ ಜಾತಿಯ ರಣಹದ್ದುಗಳು ಅಳಿವಿನಂಚಿನಲ್ಲಿವೆ. ಶೇಕಡಾ 91 ಕೆಂಪು ತಲೆಯ ರಣಹದ್ದುಗಳು (ರೆಡ್ ಹೆಡೆಡ್) ದೇಶದಲ್ಲಿ ಕಡಿಮೆಯಾಗಿರುವುದು ವಿಪರ್ಯಾಸ.

ಕೇಂದ್ರ ಮೃಗಾಲಯ ಅಧಿಕಾರ (CJZ )ಮತ್ತು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ರಣಹದ್ದು ಸಂರಕ್ಷಣಾ ತಳಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇದರ ಮೂಲಕವಾಗಿ 396 ರಣಹದ್ದುಗಳ ಪ್ರಭೇದಗಳನ್ನು ಸಂರಕ್ಷಿಸಿದವು.

(NSAID) ನಾನ್ಸ್ಟೆರೊಯ್ಡೆಲ್ ಆ್ಯಂಟಿ ಇನ್ಫ್ಲಮೇಟರಿ ಡ್ರಗ್ ಎಂಬ ನೋವು ಮತ್ತು ಉರಿಯೂತದ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು, 2004ರಲ್ಲಿ ಡೈಕ್ಲೊಫೆನಾಕ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಆದರೆ, ಪಕ್ಷಿಗಳ ಸಾವಿನ ಸಂಖ್ಯೆ ಹೆಚ್ಚಳವಾಗಲು ಕಾರಣವೇ ಡೈಕ್ಲೋಫೆನಾಕ್ ಔಷಧಿಯ ಸೇವನೆ. ಇದು ರಣಹದ್ದುಗಳ ಪಾಲಿಗೆ ಮಾರಣಾಂತಿಕ ಔಷಧ. 2006ರಲ್ಲಿ ಸರ್ಕಾರ ಈ ಔಷಧವನ್ನು ಪಶುಗಳಿಗೆ ಬಳಸುವುದರ ಮೇಲೆ ನಿಷೇಧ ಹೇರಿತ್ತು. ಆದರೆ ಮನುಷ್ಯನಿಗೆ ನೀಡುವ ಡೈಕ್ಲೊಫೆನಾಕ್ ಪ್ರಮಾಣವನ್ನು ಅಕ್ರಮವಾಗಿ ಪಶುಗಳಿಗೆ ನೀಡಲಾಗುತ್ತಿದೆ. ಇದರಿಂದ ರಣಹದ್ದುಗಳು ವಿಷಕ್ಕೆ ಬಲಿಯಾಗುತ್ತಿವೆ.

ರಣಹದ್ದುಗಳ ಸಂರಕ್ಷಣೆಗಾಗಿ ದೇಶವು ಹಲವು ರೀತಿಯ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಇದೆ. ಬಹಳಷ್ಟು ಸಂಸ್ಥೆಗಳನ್ನು ವನ್ಯಜೀವಿ ಸಂರಕ್ಷಣೆಗಾಗಿ ಸ್ಥಾಪಿಸಿದೆ. ಆದರೂ ಭಾರತದಲ್ಲಿ ಮೊದಲಿದ್ದ ವಿವಿಧ ಬಗೆಯ ಪಕ್ಷಿಗಳು ನಶಿಸುತ್ತಿರುವುದು ನಿಜವಾಗಿಯೂ ವಿಪರ್ಯಾಸ.

ರಣಹದ್ದುಗಳ ಸಂಖ್ಯೆ ಕಡಿಮೆಯಾಗಲು ಕಾರಣ: ಆಹಾರದ ಕೊರತೆ: ಎಲ್ಲಾ ಪಕ್ಷಿಗಳಿಗೂ ಆಹಾರದ ಅವಶ್ಯಕತೆ ಬಹುಮುಖ್ಯ. ತಮಗೆ ಬೇಕಾದ ಆಹಾರ ಸಿಗದೇ ಇದ್ದಾಗ ಪಕ್ಷಿಗಳು ವಲಸೆ ಹೋಗುತ್ತವೆ. ಹಾಗೆಯೇ ರಣಹದ್ದುಗಳೂ ಕೂಡ ತಮಗೆ ಅಗತ್ಯ ಆಹಾರದ ಕೊರತೆ ಉಂಟಾದಾಗ ಬೇರೆ ಕಡೆಗೆ ವಲಸೆ ಹೋಗುತ್ತವೆ.

ಸಂಗಾತಿ ಇಲ್ಲದಿದ್ದರೆ ಸಾಯುತ್ತವೆ: ಪಕ್ಷಿಗಳಿಗೆ ಸಂಗಾತಿಯ ಅವಶ್ಯಕತೆ ಇದೆ. ಯಾವತ್ತೂ ಪಕ್ಷಿಗಳು ಒಂಟಿಯಾಗಿ ಹಾರಾಡುವುದಿಲ್ಲ. ಜೋಡಿ ಹಕ್ಕಿಗಳಲ್ಲಿ ಒಂದು ಸಾವನ್ನಪ್ಪಿದರೂ ಮತ್ತೊಂದು ಪಕ್ಷಿ ಬದುಕುಳಿಯುವುದಿಲ್ಲ.

ಅರಣ್ಯದ ನಾಶ: ಹದ್ದುಗಳು ಆಹಾರಕ್ಕಾಗಿ ಸಂಚರಿಸುತ್ತವೆ. ಮರಗಳು, ಕಾಡು, ಅರಣ್ಯಗಳಲ್ಲಿ ವಾಸಿಸುವುದು ಹೆಚ್ಚು. ಈಗಿನ ಕೈಗಾರೀಕರಣದಿಂದ ಅರಣ್ಯಗಳು ನಾಶವಾಗುತ್ತಿವೆ. ಇವು ಹದ್ದುಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣಗಳಲ್ಲೊಂದು.

ವಿಷಪೂರಿತ ಆಹಾರ: ಮಾನವ ನಿರ್ಮಿತ ರಾಸಾಯನಿಕಗಳಿಂದ ಆಹಾರ ವಿಷಪೂರಿತಗೊಳ್ಳುತ್ತದೆ. ಮಾನವರು ಬಿಸಾಡುವ ಆಹಾರ ಪದಾರ್ಥಗಳನ್ನು ತಿಂದು ಬದುಕುವುದರಿಂದ ಹದ್ದುಗಳು ಸಾವನ್ನಪ್ಪುತ್ತಿವೆ. ಹಾಗೂ ಇಲೆಕ್ಟ್ರಿಕ್ ಕಂಬಗಳು, ತಂತಿಗಳಿಂದ ವಿದ್ಯುತ್ತಗಲಿ ಹಲವಾರು ರಣಹದ್ದುಗಳು ನಶಿಸಿವೆ.

ಛಾಯಾ ಚಿತ್ರಗ್ರಹಣ: ಛಾಯಾ ಚಿತ್ರಗಳ ಸಂಖ್ಯೆ ಜಾಸ್ತಿ ಆಗಿವೆ. ಅದರಲ್ಲಿಯೂ ಪಕ್ಷಿ ಹವ್ಯಾಸಿ ಛಾಯಾಚಿತ್ರಗಾರರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಇವರು ತಮ್ಮ ಹವ್ಯಾಸಕ್ಕಾಗಿ ಪಕ್ಷಿಗಳ ಹತ್ತಿರಕ್ಕೆ ಹೋಗಿ ಚಿತ್ರ ಸೆರೆ ಹಿಡಿಯುವುದರಿಂದ ಪಕ್ಷಿಗಳು ವಲಸೆ ಹೋಗುತ್ತವೆ. ಮತ್ತು ತಮಗೆ ತೊಂದರೆಯಾಗುವ ಸ್ಥಳಗಳಲ್ಲಿ ಪಕ್ಷಿಗಳು ಹೆಚ್ಚು ವಾಸಿಸುವುದಿಲ್ಲ.

ಕೈಗಾರೀಕರಣದಿಂದ ರಣಹದ್ದುಗಳ ಸಂಖ್ಯೆ ನಶಿಸುತ್ತಿವೆ. ಇವರಿಂದ ರಣಹದ್ದುಗಳು ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ವಲಸೆ ಹೋಗುತ್ತಿವೆ. ನೈಸರ್ಗಿಕವಾಗಿದ್ದ ಪರಿಸರ ಸಂಪೂರ್ಣವಾಗಿ ಮಾನವ ನಿರ್ಮಿತವಾಗಿದೆ. ಪಕ್ಷಿಗಳಿಗೆ ಬೇಕಾದ ಆಹಾರ, ಅರಣ್ಯಗಳು ಸಿಗದ ಕಾರಣ ವಿವಿಧ ಜಾತಿಯ ಪಕ್ಷಿಗಳನ್ನು ನಾವು ಕಳೆದುಕೊಳ್ಳುತ್ತಿರುವುದು ವಿಷಾದನೀಯ -ರಜನಿ ದಾಂಡೇಲಿ ಪಕ್ಷಿತಜ್ಞೆ

Follow us on

Related Stories

Most Read Stories

Click on your DTH Provider to Add TV9 Kannada