ಜೋ ಬೈಡನ್‌ಗೆ ಕರೆ ಮಾಡಿದ ಪ್ರಧಾನಿ ಮೋದಿ ಏನು ಮಾತಾನಾಡಿದ್ರು ಗೊತ್ತಾ?

ಜೋ ಬೈಡನ್‌ಗೆ ಕರೆ ಮಾಡಿದ ಪ್ರಧಾನಿ ಮೋದಿ ಏನು ಮಾತಾನಾಡಿದ್ರು ಗೊತ್ತಾ?

ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್‌ಗೆ ಕರೆ ಮಾಡಿದ ಪ್ರಧಾನಿ ಮೋದಿ ಬೈಡನ್​ಗೆ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಬೈಡನ್ ಜತೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಚರ್ಚೆ ಸಹ ನೆಡೆಸಿದ್ದಾರೆ. ಉಭಯ ದೇಶಗಳ ಸಂಬಂಧ ಗಟ್ಟಿಗೊಳಿಸಲು ನೆರವಿನ ಭರವಸೆ ನೀಡಿರುವ ಮೋದಿ ಕೊವಿಡ್-19, ಹವಾಮಾನ ವೈಪರೀತ್ಯ ಕುರಿತು ಮಾತುಕತೆ ನೆಡೆಸಿದ್ದಾರೆ. ಅಲ್ಲದೆ ಇಂಡೋ-ಫೆಸಿಪಿಕ್ ವಲಯದಲ್ಲಿ ಸಹಕಾರದ ಕುರಿತು ಚರ್ಚೆ ಮಾಡಿರುವ ಮೋದಿ ಕಮಲಾ ಹ್ಯಾರಿಸ್​ಗೂ ಕೂಡ ಶುಭಾಶಯ ತಿಳಿಸಿದ್ದಾರೆ. ಕಮಲಾ ಹ್ಯಾರಿಸ್ ಗೆಲುವು ಇಂಡೋ-ಅಮೆರಿಕನ್ನರ ಗೆಲುವು […]

pruthvi Shankar

|

Nov 18, 2020 | 8:16 AM

ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್‌ಗೆ ಕರೆ ಮಾಡಿದ ಪ್ರಧಾನಿ ಮೋದಿ ಬೈಡನ್​ಗೆ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಬೈಡನ್ ಜತೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಚರ್ಚೆ ಸಹ ನೆಡೆಸಿದ್ದಾರೆ.

ಉಭಯ ದೇಶಗಳ ಸಂಬಂಧ ಗಟ್ಟಿಗೊಳಿಸಲು ನೆರವಿನ ಭರವಸೆ ನೀಡಿರುವ ಮೋದಿ ಕೊವಿಡ್-19, ಹವಾಮಾನ ವೈಪರೀತ್ಯ ಕುರಿತು ಮಾತುಕತೆ ನೆಡೆಸಿದ್ದಾರೆ. ಅಲ್ಲದೆ ಇಂಡೋ-ಫೆಸಿಪಿಕ್ ವಲಯದಲ್ಲಿ ಸಹಕಾರದ ಕುರಿತು ಚರ್ಚೆ ಮಾಡಿರುವ ಮೋದಿ ಕಮಲಾ ಹ್ಯಾರಿಸ್​ಗೂ ಕೂಡ ಶುಭಾಶಯ ತಿಳಿಸಿದ್ದಾರೆ.

ಕಮಲಾ ಹ್ಯಾರಿಸ್ ಗೆಲುವು ಇಂಡೋ-ಅಮೆರಿಕನ್ನರ ಗೆಲುವು ಎಂದಿದ್ದಾರೆ. ಜೊತೆಗೆ ಕೊವಿಡ್​ಗೆ ಲಸಿಕೆ ಕಂಡು ಹಿಡಿಯಲು ಜಂಟಿ ಪ್ರಯತ್ನಕ್ಕೆ ಒತ್ತು ನೀಡಬೇಕೆಂದು ಮನವಿ ಮಾಡಿದ್ದಾರೆ. ಜೋ ಬೈಡನ್​ಗೆ ಕರೆ ಮಾಡಿದ ಬಳಿಕ ಈ ವಿಚಾರವನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿ ಟ್ವೀಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada