Kannada News » National » Actress khushboo has a miraculous escape after tanker collides with her car
BJP ನಾಯಕಿ ಖುಷ್ಬೂ ಕಾರು ಅಪಘಾತ: ‘ಗಂಡ ಮುರುಗನ ಆರಾಧಕ; ಅವನೇ ನನ್ನನ್ನು ಕಾಪಾಡಿದ’
ಚೆನ್ನೈ: ತಮಿಳುನಾಡಿನ ಕಡಲೂರಿಗೆ ಹೋಗುತ್ತಿದ್ದ ವೇಳೆ ನಟಿ ಖುಷ್ಬೂ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ನಟಿ ಹಾಗೂ BJP ನಾಯಕಿ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅವಘಡದಲ್ಲಿ ನಟಿ ಕಾರಿನ ಬಾಗಿಲು ಸಂಪೂರ್ಣ ನಜ್ಜುಗುಜ್ಜಾಗಿದೆ. ಖುಷ್ಬೂ ಬಳಿಕ ಬೇರೆ ಕಾರಿನಲ್ಲಿ ಕಡಲೂರಿಗೆ ಪ್ರಯಾಣ ಮುಂದುವರಿಸಿದರು. ನಟಿ ಬಿಜೆಪಿ ವೇಲ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ, ಟ್ಯಾಂಕರ್ನ ಡ್ರೈವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು, ಘಟನೆ ಬಗ್ಗೆ ಮಾತಾಡಿರುವ ನಟಿ […]
ಚೆನ್ನೈ: ತಮಿಳುನಾಡಿನ ಕಡಲೂರಿಗೆ ಹೋಗುತ್ತಿದ್ದ ವೇಳೆ ನಟಿ ಖುಷ್ಬೂ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ನಟಿ ಹಾಗೂ BJP ನಾಯಕಿ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ, ಅವಘಡದಲ್ಲಿ ನಟಿ ಕಾರಿನ ಬಾಗಿಲು ಸಂಪೂರ್ಣ ನಜ್ಜುಗುಜ್ಜಾಗಿದೆ. ಖುಷ್ಬೂ ಬಳಿಕ ಬೇರೆ ಕಾರಿನಲ್ಲಿ ಕಡಲೂರಿಗೆ ಪ್ರಯಾಣ ಮುಂದುವರಿಸಿದರು. ನಟಿ ಬಿಜೆಪಿ ವೇಲ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ, ಟ್ಯಾಂಕರ್ನ ಡ್ರೈವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು, ಘಟನೆ ಬಗ್ಗೆ ಮಾತಾಡಿರುವ ನಟಿ ಖುಷ್ಬೂ.. ನನ್ನ ಪತಿ ಸುಬ್ರಹ್ಮಣ್ಯ ಸ್ವಾಮಿಯ ಆರಾಧಕ. ಅವನೇ ನನ್ನನ್ನು ರಕ್ಷಸಿದ್ದಾನೆ ಎಂದು ಹೇಳಿದ್ದಾರೆ.