ಪರಸ್ಪರ ವ್ಯಾಪಾರ ಸಂಬಂಧಗಳನ್ನು ಬಲಪಡಿಸಲು ಭಾರತ-ಕೆನಡಾ ಒತ್ತು | India-Canada for improving bilateral ties in Covid-19 era
ಕೊವಿಡ್-19 ಶಕೆ ಹಿನ್ನೆಲೆಯಲ್ಲಿ ಭಾರತ ಮತ್ತು ಕೆನಡಾ ದ್ವಿಪಕ್ಷೀಯ ಸಂಬಂಧಗಳು ಮತ್ತು ಬಹುಪಕ್ಷೀಯ ಕ್ರಮಗಳಿಗೆ ಸಂಬಂಧಿಸಿದಂತೆ ಇಂದು ನಡೆದ ವರ್ಚ್ಯುಯಲ್ ಕಾರ್ಯಕ್ರಮದಲ್ಲಿ ವಿಚಾರಗಳನ್ನು ವಿನಿಮಯ ಮಾಡಿಕೊಂಡ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಪರಸ್ಪರ ವಾಣಿಜ್ಯ ಸಂಬಂಧಗಳನ್ನು ಉತ್ತಮಪಡಿಸುವ ಮತ್ತು ಕೊವಿಡ್ ಪಿಡುಗು ಸೃಷ್ಟಿರುವ ಭಯಾನಕ ಸ್ಥಿತಿಯಲ್ಲಿ ಪರಸ್ಪರ ಸಹಕಾರ ವಿನಿಮಯ ಮಾಡಿಕೊಳ್ಳುವುದಕ್ಕೆ ಒತ್ತು ನೀಡಿದರು. ಸದರಿ ಕಾರ್ಯಕ್ರಮವನ್ನು ಒಂಟಾರಿಯೊ ಮೂಲದ ಸೆಂಟರ್ ಫಾರ್ ಇಂಟರ್ನ್ಯಾಶನಲ್ ಗವರ್ನನ್ಸ್ ಮತ್ತು ಜಾಗತಿಕ ಸಂಬಂಧಗಳ ಭಾರತೀಯ ಕೌನ್ಸಿಲ್: ಗೇಟ್ವೇ ಹೌಸ್ ಜಂಟಿಯಾಗಿ […]
ಕೊವಿಡ್-19 ಶಕೆ ಹಿನ್ನೆಲೆಯಲ್ಲಿ ಭಾರತ ಮತ್ತು ಕೆನಡಾ ದ್ವಿಪಕ್ಷೀಯ ಸಂಬಂಧಗಳು ಮತ್ತು ಬಹುಪಕ್ಷೀಯ ಕ್ರಮಗಳಿಗೆ ಸಂಬಂಧಿಸಿದಂತೆ ಇಂದು ನಡೆದ ವರ್ಚ್ಯುಯಲ್ ಕಾರ್ಯಕ್ರಮದಲ್ಲಿ ವಿಚಾರಗಳನ್ನು ವಿನಿಮಯ ಮಾಡಿಕೊಂಡ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಪರಸ್ಪರ ವಾಣಿಜ್ಯ ಸಂಬಂಧಗಳನ್ನು ಉತ್ತಮಪಡಿಸುವ ಮತ್ತು ಕೊವಿಡ್ ಪಿಡುಗು ಸೃಷ್ಟಿರುವ ಭಯಾನಕ ಸ್ಥಿತಿಯಲ್ಲಿ ಪರಸ್ಪರ ಸಹಕಾರ ವಿನಿಮಯ ಮಾಡಿಕೊಳ್ಳುವುದಕ್ಕೆ ಒತ್ತು ನೀಡಿದರು. ಸದರಿ ಕಾರ್ಯಕ್ರಮವನ್ನು ಒಂಟಾರಿಯೊ ಮೂಲದ ಸೆಂಟರ್ ಫಾರ್ ಇಂಟರ್ನ್ಯಾಶನಲ್ ಗವರ್ನನ್ಸ್ ಮತ್ತು ಜಾಗತಿಕ ಸಂಬಂಧಗಳ ಭಾರತೀಯ ಕೌನ್ಸಿಲ್: ಗೇಟ್ವೇ ಹೌಸ್ ಜಂಟಿಯಾಗಿ ಆಯೋಜಿಸಿದ್ದವು.
ಕೆನಡಾ–ಇಂಡಿಯಾ ಟ್ರ್ಯಾಕ್ 1.5 ಮಾತುಕತೆಯಲ್ಲಿ ಭಾಗವಹಿಸಿದ ನಂತರ ಟ್ವೀಟ್ ಮಾಡಿರುವ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ‘ಈ ಕಾರ್ಯಕ್ರಮದ ಮೂರನೇ ಆವತ್ತಿಯಲ್ಲಿ ಕೆನಡಾದ ವಿದೇಶಾಂಗ ಸಚಿವ ಫ್ರಾಂಕಾಯಿಸ್–ಫಿಲಿಪ್ ಶಾಂಪೇನ್ ಜೊತೆ ಬಾಗವಹಿಸಿದ್ದು ನನಗೆ ಬಹಳ ಸಂತೋಷ ನೀಡಿದೆ, ದ್ವೀಪಕ್ಷೀಯ ಸಂಬಂಧಗಳು ಮತ್ತಷ್ಟು ಪ್ರಗತಿ ಸಾಧಿಸುವ, ಬೆಳೆಯುವ ಕುರಿತು ನಾವು ಚರ್ಚೆ ಮಾಡಿದೆವು. ಜಾಗತಿಕ ಸಂಬಂಧಗಳ ವಿಷಯದಲ್ಲಿ ಭಾರತ ಮತ್ತು ಕೆನಡಾ ಬಹಳ ನಿಕಟವಾಗಿ ಸಹಕರಿಸುತ್ತಿವೆ ಎಂಬುದನ್ನು ಉಭಯ ರಾಷ್ಟ್ರಗಳು ನೆನಪು ಮಾಡಿಕೊಂಡೆವು ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಉತ್ತರವಾಗಿ, ತಮ್ಮ ಟ್ವೀಟ್ನಲ್ಲಿ ಶಾಂಪೇನ್, ‘ನಮ್ಮ ಸದೃಢ ವಾಣಿಜ್ಯ ವಿನಿಮಯ ಮತ್ತು ಹೂಡಿಕೆಯ ಸಂಬಂಧದ ಬಗ್ಗೆ ನಾವು ಚರ್ಚೆ ಮಾಡಿದೆವು. ಎರಡು ರಾಷ್ಟ್ರಗಳ ನಡುವೆ 2019ರಲ್ಲಿ 10ಬಿಲಿಯನ್ ಡಾಲರ್ಗಳಷ್ಟು ವ್ಯಾಪಾರ ವಿನಿಮಯವಾಗಿದೆ. ಜೊತೆಯಾಗಿ ಕೆಲಸ ಮಾಡುವುದನ್ನು ನಾವು ಮುಂದುವರಿಸಲಿದ್ದೇವೆ ಮತ್ತು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದ್ದೇವೆ,’ ಎಂದು ಹೇಳಿದ್ದಾರೆ.
ಕೊವಿಡ್-19 ಪ್ಯಾಂಡೆಮಿಕ್ ಎಲ್ಲೆಡೆ ಅಬ್ಬರಿಸಿಸುತ್ತಿರುವ ಪ್ರಸ್ತುತ ವಿದ್ಯಮಾನಗಳಲ್ಲಿ ಭಾರತ ಹಲವಾರು ರಾಷ್ಟ್ರಗಳಿಗೆ ಔಷಧಿಯನ್ನು ಸರಬರಾಜು ಮಾಡುತ್ತಾ ಪಿಡುಗನ್ನು ತಡೆಯಲು ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ಶಾಂಪೇನ್ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.