ಬಜರಂಗ್ ಪುನಿಯಾ, ವಿನೇಶ್ ಫೋಗಟ್​​ಗೆ ಏಷ್ಯನ್ ಗೇಮ್ಸ್‌ನಲ್ಲಿ ನೇರ ಅರ್ಹತೆ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

|

Updated on: Jul 22, 2023 | 7:07 PM

ಕುಸ್ತಿಪಟುಗಳಾದ ಆಂಟಿಮ್ ಪಂಘಲ್ ಮತ್ತು ಸುಜೀತ್ ಕಲ್ಕಲ್ ಅವರು ಪುನಿಯಾ ಮತ್ತು ಫೋಗಟ್ ಅವರಿಗೆ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು.

ಬಜರಂಗ್ ಪುನಿಯಾ, ವಿನೇಶ್ ಫೋಗಟ್​​ಗೆ ಏಷ್ಯನ್ ಗೇಮ್ಸ್‌ನಲ್ಲಿ ನೇರ ಅರ್ಹತೆ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್
ಬಜರಂಗ್ ಪೂನಿಯಾ-ವಿನೇಶ್ ಫೋಗಟ್
Follow us on

ದೆಹಲಿ ಜುಲೈ 22:  ಕುಸ್ತಿಪಟುಗಳಾದ ಬಜರಂಗ್ ಪುನಿಯಾ (Bajrang Punia )ಮತ್ತು ವಿನೇಶ್ ಫೋಗಟ್ (Vinesh Phogat) ಅವರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಟ್ರಯಲ್ಸ್‌ಗೆ ಹೋಗದೆ ನೇರವಾಗಿ ಭಾರತವನ್ನು ಪ್ರತಿನಿಧಿಸಲು ಅವಕಾಶ ನೀಡುವ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (Indian Olympic Associations) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ. ಕುಸ್ತಿಪಟುಗಳಾದ ಆಂಟಿಮ್ ಪಂಘಲ್ ಮತ್ತು ಸುಜೀತ್ ಕಲ್ಕಲ್ ಅವರು ಪುನಿಯಾ ಮತ್ತು ಫೋಗಟ್ ಅವರಿಗೆ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿದ್ದರು.

ಬುಧವಾರ ಕುಸ್ತಿಪಟು ಆಂಟಿಮ್ ಪಂಘಲ್ ಅವರು ವಿಡಿಯೊ ಕರೆ ಮೂಲಕ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರು ಏಷ್ಯನ್ ಗೇಮ್ಸ್ 2023 ಗೆ ನೇರವಾಗಿ ಪ್ರವೇಶಿಸಲು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅವಕಾಶ ನೀಡಿರುವುದನ್ನು ಇವರು ಪ್ರಶ್ನಿಸಿದ್ದಾರೆ.

ವಿಡಿಯೊ ಸಂವಹನದಲ್ಲಿ ಮಾತನಾಡಿದ ಕುಸ್ತಿಪಟು ಸುಜೀತ್ ಕಲ್ಕಲ್, ಯಾವುದೇ ಟ್ರಯಲ್ಸ್ ನಲ್ಲಿ ಭಾಗವಹಿಸದೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಬಜರಂಗ್ ಪುನಿಯಾಗೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. 19 ವರ್ಷದ ಪಂಘಲ್ ಮತ್ತು 21 ವರ್ಷದ ಸುಜೀತ್ ಇಬ್ಬರೂ ಕುಸ್ತಿಪಟುಗಳಿಗೆ ಯಾವುದೇ ವಿನಾಯಿತಿಗಳನ್ನು ನೀಡುವುದನ್ನು ವಿರೋಧಿಸಿದ್ದು ಎಲ್ಲರಿಗೂ ನ್ಯಾಯಯುತ ಮತ್ತು ಸಮಾನ ರೀತಿಯಲ್ಲಿ ಟ್ರಯಲ್ಸ್ ನಡೆಸುವ ಮಹತ್ವವನ್ನು ಒತ್ತಿ ಹೇಳಿದರು. ಪಾರದರ್ಶಕತೆಗಾಗಿ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೊದಲ್ಲಿ ದಾಖಲಿಸಬೇಕು ಎಂದು ಅವರು ಸೂಚಿಸಿದರು.

ಇದನ್ನೂ ಓದಿ: Manipur violence: ‘ಮಣಿಪುರ ಫೈಲ್ಸ್’ ಹೆಸರಿನ ಸಿನಿಮಾ ಮಾಡಬೇಕು: ಶಿವಸೇನೆ

ಈ ವಿಷಯಕ್ಕೆ ಸಂಬಂಧಿಸಿದಂತೆ ಕುಸ್ತಿಪಟು ವಿಶಾಲ್ ಕಾಳಿರಾಮನ್, ನಾನು ಕೂಡ 65 ಕೆಜಿಯೊಳಗಿನ ವಿಭಾಗದಲ್ಲಿ ಆಡುತ್ತೇನೆ. ಏಷ್ಯನ್ ಗೇಮ್ಸ್‌ಗೆ  ಪುನಿಯಾಗೆ ಯಾವುದೇ ಟ್ರಯಲ್ಸ್ ಇಲ್ಲದೇ ನೇರ ಪ್ರವೇಶ ನೀಡಲಾಗಿದೆ. ಅವರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ, ನಾವು ಅಭ್ಯಾಸ ಮಾಡುತ್ತಿದ್ದೆವು. ನಾವು ಟ್ರಯಲ್ಸ್​​ಗಾಗಿ ಮನವಿ ಮಾಡುತ್ತೇವೆ.ಟ್ರಯಲ್ಸ್ ಮಾಡಬೇಕು , ಇಲ್ಲವಾದರೆ  ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ. 15 ವರ್ಷಗಳಿಂದ ನಾವು ಅಭ್ಯಾಸ ಮಾಡುತ್ತಿದ್ದೇವೆ. ಬಜರಂಗ್ ಪುನಿಯಾ ಅವರು ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ ಎಂದು ನಿರಾಕರಿಸಿದರೆ ಮಾತ್ರ ಬೇರೆಯವರಿಗೆ ಅವಕಾಶ ಸಿಗುತ್ತದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Sat, 22 July 23