ನವದೆಹಲಿ: ದೆಹಲಿಯ ಜಾಮಾ ಮಸೀದಿಗೆ (Jama Masjid) ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ವಿಷಯದ ಕುರಿತು ದೆಹಲಿ ಮಹಿಳಾ ಆಯೋಗವು (Delhi Woman Commission) ಮಸೀದಿಯ ಇಮಾಮ್‌ಗೆ ನೋಟಿಸ್ ನೀಡಲು ನಿರ್ಧರಿಸಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲಾ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ತಡೆಯುವ ನಿರ್ಧಾರ ಸಂಪೂರ್ಣವಾಗಿ ತಪ್ಪು. ಪುರುಷನಿಗೆ ಪ್ರಾರ್ಥನೆ ಮಾಡುವ ಹಕ್ಕು ಎಷ್ಟು ಇದೆಯೋ ಅಷ್ಟೇ ಹಕ್ಕು ಮಹಿಳೆಗೂ ಇದೆ. ನಾನು ಜಾಮಾ ಮಸೀದಿಯ ಇಮಾಮ್‌ಗೆ ನೋಟಿಸ್ ನೀಡುತ್ತಿದ್ದೇನೆ. ಈ ರೀತಿ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ಹಕ್ಕು ಯಾರಿಗೂ ಇಲ್ಲ.’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಜಾಮಾ ಮಸೀದಿಯ ಎಲ್ಲಾ 3 ಪ್ರವೇಶ ದ್ವಾರಗಳ ಮೇಲೆ ಸೂಚನಾ ಫಲಕವನ್ನು ಹಾಕಲಾಗಿದೆ. ಅದರಲ್ಲಿ ‘ಜಾಮಾ ಮಸೀದಿಗೆ ಹುಡುಗಿಯರು ಅಥವಾ ಮಹಿಳೆಯರು ಏಕಾಂಗಿಯಾಗಿ ಬರುವಂತಿಲ್ಲ’ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಮತ್ತೆ ಮುನ್ನೆಲೆಗೆ: ಹೈಕೋರ್ಟ್ಗೆ ಬಜರಂಗಸೇನೆ ಕಾರ್ಯಕರ್ತರಿಂದ ಪಿಐಎಲ್ ಸಲ್ಲಿಕೆ
ಮಾಧ್ಯಮ ವರದಿಗಳ ಪ್ರಕಾರ, ಯುವತಿಯರು ತಮ್ಮ ಗೆಳೆಯರೊಂದಿಗೆ ಮಸೀದಿಗೆ ಬರುತ್ತಾರೆ ಎಂಬ ದೂರುಗಳು ಬರುತ್ತಿವೆ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಹೇಳುತ್ತಾರೆ. ಈ ಕಾರಣಕ್ಕಾಗಿ ಅಂತಹ ಮಹಿಳೆಯರು ಒಂಟಿಯಾಗಿ ಬರುವುದಕ್ಕೆ ನಿರ್ಬಂಧ ಹೇರಲಾಗಿದೆ. ಒಂದುವೇಳೆ ಮಹಿಳೆ ಜಾಮಾ ಮಸೀದಿಗೆ ಬರಲು ಬಯಸಿದರೆ ಆಕೆ ತನ್ನ ಕುಟುಂಬ ಅಥವಾ ಪತಿಯೊಂದಿಗೆ ಮಾತ್ರ ಬರಬೇಕು ಎಂದು ಶಾಹಿ ಇಮಾಮ್ ಹೇಳಿದ್ದಾರೆ. ಆದರೆ, ನಮಾಜ್ ಮಾಡಲು ಬರುವ ಮಹಿಳೆಯನ್ನು ನಾವು ತಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
#WATCH| Delhi|Women’s entry not banned. When women come alone-improper acts done, videos shot,ban is to stop this. No restrictions on families/married couples.Making it a meeting point inapt for religious places:Sabiullah Khan,Jama Masjid PRO on entry of women coming alone banned pic.twitter.com/HiOebKaiGr
— ANI (@ANI) November 24, 2022
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಹ ಈ ಆದೇಶವನ್ನು ಖಂಡಿಸಿತ್ತು. ಇದನ್ನು ಮಹಿಳಾ ವಿರೋಧಿ ಕೃತ್ಯ ಎಂದು ಬಣ್ಣಿಸಿತ್ತು. ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗವನ್ನು ವಿಎಚ್‌ಪಿ ಒತ್ತಾಯಿಸಿತ್ತು.