ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಮತ್ತೆ ಮುನ್ನೆಲೆಗೆ: ಹೈಕೋರ್ಟ್​​ಗೆ ಬಜರಂಗಸೇನೆ ಕಾರ್ಯಕರ್ತರಿಂದ ಪಿಐಎಲ್​ ಸಲ್ಲಿಕೆ

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಸಂಬಂಧ ವಕೀಲ ರವಿಶಂಕರ್ ಮೂಲಕ ಭಜರಂಗ ಸೇನೆ ನೇತೃತ್ವದಲ್ಲಿ 108 ಹನುಮ ಭಕ್ತರು ಹೈಕೋರ್ಟ್‌‌ಗೆ ದಾವೆ ಹೂಡಿದ್ದಾರೆ.

ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಮತ್ತೆ ಮುನ್ನೆಲೆಗೆ: ಹೈಕೋರ್ಟ್​​ಗೆ ಬಜರಂಗಸೇನೆ ಕಾರ್ಯಕರ್ತರಿಂದ ಪಿಐಎಲ್​ ಸಲ್ಲಿಕೆ
ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ
Follow us
TV9 Web
| Updated By: ಆಯೇಷಾ ಬಾನು

Updated on:Nov 17, 2022 | 11:30 AM

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ(Srirangapatna Jamia Masjid) ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಬಜರಂಗ ಸೇನೆ ಕಾರ್ಯಕರ್ತರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಬಜರಂಗಸೇನೆ ಕಾರ್ಯಕರ್ತರು ಹೈಕೋರ್ಟ್​​ಗೆ(High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)​ ಸಲ್ಲಿಸಿದ್ದಾರೆ.

ಟಿಪ್ಪು ಆಡಳಿತದ ವೇಳೆ ಕೋಟೆ ಆಂಜನೇಯ ದೇವಾಲಯವನ್ನ ಮಸೀದಿ ಮಾಡಲಾಗಿದೆ. ಜಾಮಿಯಾ ಮಸೀದಿಯಲ್ಲಿ ಹಿಂದೂ ದೇವರ ಕುರುಹುಗಳಿವೆ. ಹಾಗಾಗಿ ಕೂಡಲೇ ಜಾಮಿಯಾ ಮಸೀದಿಯನ್ನ ತೆರವುಗೊಳಿಸಬೇಕು. ಪವಿತ್ರ ಕಲ್ಯಾಣಿಯಲ್ಲಿ ತೀರ್ಥ ಸ್ನಾನಕ್ಕೆ ಅವಕಾಶ ಕಲ್ಪಿಸಬೇಕು. ಹನುಮನ ಪೂಜೆಗೆ ಅನುವು ಮಾಡಿ ಕೊಡಬೇಕೆಂದು ಬಜರಂಗಸೇನೆ ಕಾರ್ಯಕರ್ತರು ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಶಿಖರ ಮತ್ತ ಗುಂಬಜ್ ಗಳ ನಡುವೆ ವ್ಯತ್ಯಾಸವಿದೆ ಆದರೆ ಎರಡಕ್ಕೂ ಧಾರ್ಮಿಕ ವೈಶಿಷ್ಟ್ಯತೆಗಳಿವೆ: ಸೆಲ್ವಪಿಳ್ಳೆ ಅಯ್ಯಂಗಾರ್, ಇತಿಹಾಸಜ್ಞ

108 ಹನುಮ ಭಕ್ತರಿಂದ ಹೈಕೋರ್ಟ್‌‌ಗೆ ದಾವೆ

ವಕೀಲ ರವಿಶಂಕರ್ ಮೂಲಕ ಭಜರಂಗ ಸೇನೆ ನೇತೃತ್ವದಲ್ಲಿ 108 ಹನುಮ ಭಕ್ತರು ಹೈಕೋರ್ಟ್‌‌ಗೆ ದಾವೆ ಹೂಡಿದ್ದಾರೆ. ಬಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್‌ ದಾಖಲೆ ಸಮೇತ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಂದೂಗಳ ಮಂಗಳಕರ ಸಂಖ್ಯೆ ಎಂಬ ಕಾರಣಕ್ಕೆ 108 PIL ಸಲ್ಲಿಸಲಾಗಿದೆ. ಹನುಮಂತನನ್ನೇ ಪ್ರತಿವಾದಿ ಮಾಡಿ ಮಂದಿರಕ್ಕಾಗಿ ಹೋರಾಟ ನಡೆಸಲಾಗುತ್ತಿದೆ.

ಮೈಸೂರು ಗೆಜೆಟಿಯರ್, ಮಸೀದಿಯಲ್ಲಿನ ಹಿಂದೂ ವಾಸ್ತುಶಿಲ್ಪ, ಮೂರ್ತಿ ಕೆತ್ತನೆ, ಕಂಬಗಳ ಮೇಲಿನ ದೇವರ ಚಿತ್ರಕಲೆ, ಕಲ್ಯಾಣಿ ಸೇರಿದಂತೆ ಕೆಲ‌ ಬ್ರಿಟಿಷ್ ಅಧಿಕಾರಿಗಳು ಉಲ್ಲೇಖಿಸಿರುವ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಹಿಂದೂ ಸಂಘಟನೆಗಳು 5 ತಿಂಗಳ ಹಿಂದೆ ಹನುಮ ಮಂದಿರ ಕೆಡವಿ ಟಿಪ್ಪು ಮಸೀದಿ ಕಟ್ಟಿರುವುದಾಗಿ ಆರೋಪಿಸಿ ಹೋರಾಟ ನಡೆಸಿದ್ದರು. ಮಸೀದಿ ಜಾಗ ಹಿಂದೂಗಳಿಗೆ ಮರಳಿ ನೀಡಲು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದ್ರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಕೋರ್ಟ್ ಮೊರೆ ಹೋಗಿದ್ದಾರೆ. ಅಯೋಧ್ಯೆ ಶ್ರೀರಾಮ‌‌ ಮಂದಿರ ರೀತಿ ಹನುಮಾನ್​ಗಾಗಿ ನ್ಯಾಯಾಂಗ ಹೋರಾಟ ನಡೆಸಲಾಗುತ್ತಿದೆ.

Published On - 9:34 am, Thu, 17 November 22