ದೆಹಲಿ ಆಗಸ್ಟ್ 13: ಗುರುವಾರ ದೆಹಲಿ ಸರ್ಕಾರದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (VK Saxena), ದೆಹಲಿ ಗೃಹ ಸಚಿವ ಕೈಲಾಶ್ ಗಹ್ಲೋಟ್ (Kailash Gahlot) ಅವರನ್ನು ಆಯ್ಕೆ ಮಾಡಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಆಪಾದಿತ ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿ ಜೈಲಿನಲ್ಲಿರುವ ಕಾರಣ ಗಹ್ಲೋಟ್ ಧ್ವಜಾರೋಹಣ ಕಾರ್ಯ ನಿರ್ವಹಿಸಲಿದ್ದಾರೆ. ಆದಾಗ್ಯೂ ಗಹ್ಲೋಟ್ ಅವರ ಆಯ್ಕೆಯು ಸಕ್ಸೇನಾ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ ನಡುವಿನ ಸಂಘರ್ಷವನ್ನುಂಟು ಮಾಡಿದೆ. ತಮ್ಮ ಅನುಪಸ್ಥಿತಿಯಲ್ಲಿ ಶಿಕ್ಷಣ ಸಚಿವೆ ಅತಿಶಿ ಅವರಿಗೆ ಧ್ವಜಾರೋಹಣ ಮಾಡಲು ಅವಕಾಶ ನೀಡಬೇಕು ಎಂದು ದೆಹಲಿ ಎಲ್ಜಿಗೆ ಅರವಿಂದ ಕೇಜ್ರಿವಾಲ್ ಪತ್ರ ಬರೆದಿದ್ದರು. ಆದರೆ ಸಕ್ಸೇನಾ ಅವರು ತಕ್ಷಣವೇ ಕೇಜ್ರಿವಾಲ್ ಅವರ ನಿರ್ದೇಶನವನ್ನು “ಅಸಿಂಧು” ಎಂದು ಘೋಷಿಸಿದರು.
ಮಂಗಳವಾರ ಸಂಜೆ ನೀಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ಸಕ್ಸೇನಾ ಅವರ ಕಚೇರಿಯು ಗಹ್ಲೋಟ್ ಅವರು ಧ್ವಜಾರೋಹಣ ಮಾಡಲಿದ್ದು ದೆಹಲಿ ಪೊಲೀಸರು ವಿಧ್ಯುಕ್ತವಾದ ಮಾರ್ಚ್-ಪಾಸ್ಟ್ ಪರೇಡ್ ಮಾಡುತ್ತಾರೆ. ಪೊಲೀಸರಿಗೆ ಸಂಬಂಧಿಸಿದ ವಿಷಯಗಳನ್ನು ಗೃಹ ಇಲಾಖೆಗೆ ನಿಯೋಜಿಸಲಾಗಿದೆ ಎಂದಿದೆ.
“ಮೇಲಿನ ದೃಷ್ಟಿಯಿಂದ, ಲೆಫ್ಟಿನೆಂಟ್ ಗವರ್ನರ್ ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಗೃಹ ಸಚಿವ ಕೈಲಾಶ್ ಗಹ್ಲೋಟ್ ಅವರನ್ನು ನಾಮನಿರ್ದೇಶನ ಮಾಡಿರುವುದಾಗಿ ಸಕ್ಸೇನಾ ಹೇಳಿದ್ದಾರೆ.
ಇದನ್ನೂ ಓದಿ: ಅದಾನಿ-ಹಿಂಡೆನ್‌ಬರ್ಗ್ ವಿವಾದ: ಆಗಸ್ಟ್ 22 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ಕರೆ
ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದರು, ಆದರೆ ಅವರ ಕಚೇರಿ ಅವರು ಯಾವುದೇ ಸಂವಹನವನ್ನು ಸ್ವೀಕರಿಸಲಿಲ್ಲ ಎಂದು ಹೇಳಿದೆ. ತಿಹಾರ್ ಜೈಲು ಅಧಿಕಾರಿಗಳು ನಂತರ ಕೇಜ್ರಿವಾಲ್ ಅವರಿಗೆ ತಮ್ಮ ಪತ್ರವು ದೆಹಲಿ ಜೈಲು ನಿಯಮಗಳ ಅಡಿಯಲ್ಲಿ ಅವರಿಗೆ ನೀಡಲಾದ “ಸವಲತ್ತುಗಳ ದುರುಪಯೋಗ”. ಆ ಪತ್ರವನ್ನು ಸಕ್ಸೇನಾ ಅವರಿಗೆ ಕಳುಹಿಸಲಾಗಿಲ್ಲ ಎಂದು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Tue, 13 August 24