Coal Crisis ಕಲ್ಲಿದ್ದಲು ಕೊರತೆ ಪರಿಹರಿಸದಿದ್ದರೆ ದೆಹಲಿಯಲ್ಲಿ ವಿದ್ಯುತ್ ಕಡಿತ ಎದುರಾಗಬಹುದು: ಮನೀಶ್ ಸಿಸೋಡಿಯಾ

| Updated By: ರಶ್ಮಿ ಕಲ್ಲಕಟ್ಟ

Updated on: Oct 10, 2021 | 6:42 PM

Manish Sisodia ಬಿಜೆಪಿ ದೇಶವನ್ನು ಆಳುವಲ್ಲಿ ವಿಫಲವಾಗಿದೆ ಮತ್ತು ಅವರು ಜವಾಬ್ದಾರಿಗಳಿಂದ ಓಡಿಹೋಗುತ್ತಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಆಮ್ಲಜನಕದ ಬಿಕ್ಕಟ್ಟಿನ ವಿರುದ್ಧ ಎಚ್ಚರಿಕೆ ನೀಡಿದ್ದವು , ಆಗ ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಗಳನ್ನು ತಪ್ಪಿಸಿತು ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.

Coal Crisis ಕಲ್ಲಿದ್ದಲು ಕೊರತೆ ಪರಿಹರಿಸದಿದ್ದರೆ ದೆಹಲಿಯಲ್ಲಿ ವಿದ್ಯುತ್ ಕಡಿತ ಎದುರಾಗಬಹುದು: ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ
Follow us on

ದೆಹಲಿ: ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆಯು ಮುಂದುವರಿದರೆ ದೆಹಲಿಯಲ್ಲಿ ವಿದ್ಯುತ್ ಕಡಿತ ಎದುರಾಗಬಹುದು ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಭಾನುವಾರ ಹೇಳಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಕೊವಿಡ್ -19 ಸಾಂಕ್ರಾಮಿಕದ ಎರಡನೇ ತರಂಗದ ಸಮಯದಲ್ಲಿ ಆಮ್ಲಜನಕದ ಬಿಕ್ಕಟ್ಟಿನ ಉದಾಹರಣೆಯನ್ನು ಉಲ್ಲೇಖಿಸಿದ ಸಿಸೋಡಿಯಾ ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಕೇಂದ್ರ ಸರ್ಕಾರ ಕಲ್ಲಿದ್ದಲು ಕೊರತೆ ಇಲ್ಲ ಎಂದು ಹೇಳುತ್ತಿರುವುದನ್ನು ಟೀಕಿಸಿದ್ದಾರೆ.

“24 ಗಂಟೆಗಳಲ್ಲಿ ಸ್ಟಾಕ್‌ಗಳನ್ನು ಮರುಪೂರಣ ಮಾಡದಿದ್ದರೆ ನಾವು ದೆಹಲಿಯಲ್ಲಿ ವಿದ್ಯುತ್ ಕಡಿತದ ಯೋಜನೆಯನ್ನು ಪರಿಗಣಿಸಬೇಕಾಗುತ್ತದೆ. ಹಲವಾರು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಪ್ರಮುಖ ಬಿಕ್ಕಟ್ಟು ಇದೆ. ಈ ಕೊರತೆಯನ್ನು ಕೇಂದ್ರ ಸಚಿವರು ತಳ್ಳಿಹಾಕಿದ್ದಾರೆ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ಮೋದಿಗೆ ಬರೆದಿರುವ ವಿಷಯವನ್ನು ಟೀಕಿಸಿದ್ದಾರೆ ಎಂದು ಸಿಸೋಡಿಯಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

“ಬಿಜೆಪಿ ದೇಶವನ್ನು ಆಳುವಲ್ಲಿ ವಿಫಲವಾಗಿದೆ ಮತ್ತು ಅವರು ಜವಾಬ್ದಾರಿಗಳಿಂದ ಓಡಿಹೋಗುತ್ತಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಆಮ್ಲಜನಕದ ಬಿಕ್ಕಟ್ಟಿನ ವಿರುದ್ಧ ಎಚ್ಚರಿಕೆ ನೀಡಿದ್ದವು, ಆಗ ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಗಳನ್ನು ತಪ್ಪಿಸಿತು. ಈಗ ಕಲ್ಲಿದ್ದಲು ಕೊರತೆಯ ಸಮಸ್ಯೆಯು ವಿದ್ಯುತ್ ಬಿಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಬಹುದು ”ಎಂದು ಅವರು ಹೇಳಿದರು.


“ವಿದ್ಯುತ್ ಬಿಕ್ಕಟ್ಟು ದೇಶವನ್ನು ಕತ್ತಲೆಯ ಕೂಪಕ್ಕೆ ತಳ್ಳುವುದಕ್ಕೆ ಸಮಾನವಾಗಿದೆ. ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿ ಸರ್ಕಾರಗಳು ಕೇಂದ್ರ ಸರ್ಕಾರದಿಂದ ಸಹಾಯವನ್ನು ಕೋರಿವೆ ಆದರೆ ಇದುವರೆಗೂ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ರಾಜ್ಯಗಳು ವಿದ್ಯುತ್ ಕೊರತೆಯ ಮೌಲ್ಯಮಾಪನದಲ್ಲಿ ತಪ್ಪು ಎಂದು ಸಾಬೀತುಪಡಿಸಲು ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಸರ್ಕಾರಗಳು ಸಹಕಾರದ ಮೂಲಕ ಕಾರ್ಯನಿರ್ವಹಿಸುತ್ತವೆ. ನಾವು ಕೇಂದ್ರ ಸರ್ಕಾರವು ಹೆಚ್ಚು ಸಹಕರಿಸುವಂತೆ ಒತ್ತಾಯಿಸುತ್ತೇವೆ ಎಂದು ಸಿಸೋಡಿಯಾ ಹೇಳಿದರು.

ಕೇಂದ್ರ ಸರ್ಕಾರ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ಕೊರತೆಯನ್ನು ತ್ವರಿತವಾಗಿ ಪರಿಹರಿಸದಿದ್ದರೆ ದೆಹಲಿ ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ. ಪತ್ರದಲ್ಲಿ ಬಿಕ್ಕಟ್ಟನ್ನು ಪರಿಹರಿಸಲು ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಕೋರಿದರು. ಪೂರೈಕೆ ಅಡಚಣೆಯು ಆಸ್ಪತ್ರೆಗಳು, ಕೊವಿಡ್ -19 ಲಸಿಕೆಗಳ ಕೋಲ್ಡ್ ಚೈನ್‌ಗಳು ಮತ್ತು ಕೊವಿಡ್ ಕೇರ್ ಸೆಂಟರ್‌ಗಳಂತಹ ಕಾರ್ಯತಂತ್ರದ ಸಂಸ್ಥೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಬರೆದಿದ್ದಾರೆ.

ದೆಹಲಿಗೆ ಪ್ರತಿದಿನ ಸುಮಾರು 1,971MW ವಿದ್ಯುತ್ ಪೂರೈಸುವ ಐದು ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ, ಕನಿಷ್ಠ ಒಂದು ಸ್ಟಾಕ್ ಖಾಲಿಯಾಗಿದೆ ಎಂದು ಕೇಜ್ರಿವಾಲ್ ಪತ್ರದಲ್ಲಿ ಬರೆದಿದ್ದಾರೆ. ಅವರು ಪಶ್ಚಿಮ ಬಂಗಾಳದ ಮೆಜಿಯಾ ಥರ್ಮಲ್ ವಿದ್ಯುತ್ ಕೇಂದ್ರವನ್ನು ಉಲ್ಲೇಖಿಸುತ್ತಿದ್ದು,ಇದು ದೆಹಲಿಗೆ 100MW ವಿದ್ಯುತ್ ಒದಗಿಸುತ್ತದೆ.   ಸ್ಥಾವರಗಳಲ್ಲಿ  ಒಂದು ದಿನಕ್ಕೆ  ಬೇಕಾದಷ್ಟು ವಿದ್ಯುತ್ ಉತ್ಪಾದಿಸಲು ಹೆಚ್ಚು  ಕಲ್ಲಿದ್ದಲು ನಿಕ್ಷೇಪವಿಲ್ಲ ಎಂದು ಪತ್ರದಲ್ಲಿ ಸೂಚಿಸಲಾಗಿದೆ. ಉಳಿದ ನಾಲ್ಕರ ಪೈಕಿ ಮೂರರಲ್ಲಿ ಕೇವಲ ಒಂದು ದಿನ ಕಲ್ಲಿದ್ದಲು ದಾಸ್ತಾನು ಹೊಂದಿದ್ದರೆ, ನಾಲ್ಕನೆಯದರಲ್ಲಿ ನಾಲ್ಕು ದಿನಗಳಿಗಾಗುವಷ್ಟು ಮಾತ್ರ ಬಾಕಿ ಇದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Coal Crisis: ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆ ಕೇಂದ್ರ ಇಂಧನ ಸಚಿವರ ಸಭೆ; ದೆಹಲಿ ಪರಿಸ್ಥಿತಿ ಅವಲೋಕನ

ಇದನ್ನೂ ಓದಿ: Coal Crisis: ‘ಕಲ್ಲಿದ್ದಲು ಅಭಾವ..ವಿದ್ಯುತ್​ ಪೂರೈಕೆ ವ್ಯತ್ಯಯಗಳೆಲ್ಲ ತಪ್ಪು ಕಲ್ಪನೆ, ಆತಂಕ ಬೇಡ’-ಕೇಂದ್ರ ಸರ್ಕಾರ