Coal Crisis: ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆ ಕೇಂದ್ರ ಇಂಧನ ಸಚಿವರ ಸಭೆ; ದೆಹಲಿ ಪರಿಸ್ಥಿತಿ ಅವಲೋಕನ
Coal Crisis: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಕೂಡ ದೆಹಲಿಯಲ್ಲಿ ವಿದ್ಯುತ್ ಬಿಕ್ಕಟ್ಟು ಉಂಟಾಗಬಹುದು ಎಂದು ಹೇಳಿಕೆ ನೀಡಿದ್ದರು. ನಾನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇನೆ. ನಾವು ಈ ಸ್ಥಿತಿಯನ್ನು ತಡೆಯಲು ಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದರು.
ದೆಹಲಿ: ಕಲ್ಲಿದ್ದಲು ಕೊರತೆ ಕಾರಣದಿಂದ ವಿದ್ಯುತ್ ಪೂರೈಕೆ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೆಹಲಿ ಇಂಧನ ಸಚಿವಾಲಯ, ಬಿಎಸ್ಇಎಸ್ ಮತ್ತು ಟಾಟಾ ಪವರ್ ಅಧಿಕಾರಿಗಳು ಕೇಂದ್ರ ಇಂಧನ ಸಚಿವ ಆರ್ಕೆ ಸಿಂಗ್ ನಿವಾಸದತ್ತ ಭಾನುವಾರ ದೌಡಾಯಿಸಿದ್ದಾರೆ. ಅವರು ಪವರ್ ಪ್ಲಾಂಟ್ಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿರುವ ಕುರಿತು ಸಭೆ ನಡೆಸಲಿದ್ದಾರೆ.
ದೇಶದ ರಾಜಧಾನಿ ದೆಹಲಿಗೆ ವಿದ್ಯುತ್ ಸರಬರಾಜು ಮಾಡುವ ಪವರ್ ಪ್ಲಾಂಟ್ಗಳಿಗೆ ಕೂಡಲೇ ಕಲ್ಲಿದ್ದಲು ಪೂರೈಕೆ ಆಗದಿದ್ದರೆ ಇನ್ನೆರಡು ದಿನದಲ್ಲಿ ದೆಹಲಿಯಲ್ಲಿ ಸಂಪೂರ್ಣ ವಿದ್ಯುತ್ ಸರಬರಾಜು ವ್ಯತ್ಯಯ ಆಗಬಹುದು ಎಂದು ದೆಹಲಿ ಇಂಧನ ಸಚಿವ ಸತ್ಯೇಂದರ್ ಜೈನ್ ನಿನ್ನೆ ಹೇಳಿಕೆ ನೀಡಿದ್ದರು. ಈ ಬಿಕ್ಕಟ್ಟು ಸರಿಪಡಿಸಲು ದೆಹಲಿ ಸರ್ಕಾರ ದುಂದುವೆಚ್ಚ ಮಾಡಲು ಕೂಡ ಸದ್ಯ ಸಿದ್ಧವಾಗಿದೆ ಎಂದು ಅವರು ಹೇಳಿದ್ದರು.
ಇಂದು (ಅಕ್ಟೋಬರ್ 10) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಕೂಡ ದೆಹಲಿಯಲ್ಲಿ ವಿದ್ಯುತ್ ಬಿಕ್ಕಟ್ಟು ಉಂಟಾಗಬಹುದು ಎಂದು ಹೇಳಿಕೆ ನೀಡಿದ್ದರು. ನಾನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇನೆ. ನಾವು ಈ ಸ್ಥಿತಿಯನ್ನು ತಡೆಯಲು ಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ಟ್ವೀಟ್ ಮಾಡಿದ್ದರು.
New Delhi: Officials of Power Ministry, BSES, and Tata Power reach the residence of Union Power Minister RK Singh for a meeting over coal shortage at power plants pic.twitter.com/pPQY3i6vTs
— ANI (@ANI) October 10, 2021
ಅರವಿಂದ್ ಕೇಜ್ರೀವಾಲ್ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಶನಿವಾರ ಪತ್ರ ಬರೆದಿದ್ದರು. ಇಲ್ಲಿ ಕಲ್ಲಿದ್ದಲು ಬಿಕ್ಕಟ್ಟಿನಿಂದ ಸಮಸ್ಯೆ ಉಂಟಾಗಿದೆ. ಅದರಿಂದ ದೆಹಲಿಗೆ ವಿದ್ಯುತ್ ಸರಬರಾಜಿಗೆ ಕೂಡ ತೊಡಕು ಉಂಟಾಗಿದೆ. ಈ ಬಗ್ಗೆ ಮಧ್ಯಪ್ರವೇಶಿಸಿ ಗಮನ ಹರಿಸಬೇಕು ಎಂದು ಮೋದಿಗೆ ಬರೆದ ಪತ್ರದಲ್ಲಿ ಕೇಳಿಕೊಂಡಿದ್ದರು.
ಇದನ್ನೂ ಓದಿ: Coal Crisis: ‘ಕಲ್ಲಿದ್ದಲು ಅಭಾವ..ವಿದ್ಯುತ್ ಪೂರೈಕೆ ವ್ಯತ್ಯಯಗಳೆಲ್ಲ ತಪ್ಪು ಕಲ್ಪನೆ, ಆತಂಕ ಬೇಡ’-ಕೇಂದ್ರ ಸರ್ಕಾರ
ಇದನ್ನೂ ಓದಿ: Coal Crisis: ‘ಕಲ್ಲಿದ್ದಲು ಕೊರತೆಯಾಗಿಲ್ಲ’ ಎಂದು ಅಚ್ಚರಿಯ ಹೇಳಿಕೆ ನೀಡಿದ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್!