Telangana: ರಾತ್ರಿ ಮಲಗಿ ನಿದ್ರಿಸುತ್ತಿದ್ದವರ ಮೇಲೆ ಕುಸಿದ ಗೋಡೆ; 3 ಮಕ್ಕಳು ಸೇರಿ ಐವರ ದುರ್ಮರಣ
ಕುಟುಂಬದಲ್ಲಿ ಒಟ್ಟು 7 ಮಂದಿ ಇದ್ದು, ಎಲ್ಲರೂ ರಾತ್ರಿ ಮಲಗಿ ನಿದ್ರಿಸುತ್ತಿದ್ದರು. ಮಧ್ಯರಾತ್ರಿ ಹೊತ್ತಿಗೆ ಮನೆಯ ಒಂದು ಭಾಗ ಕುಸಿದುಬಿದ್ದಿದೆ. ಐವರೂ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಐವರು ಮೃತಪಟ್ಟ ದುರ್ಘಟನೆ ತೆಲಂಗಾಣದ ಜೋಗುಳಾಂಬಾ ಗಡ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ಹಾಗೇ, ಈ ಕುಟುಂಬದ ಇನ್ನಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಹೀಗೆ ಮರಣಹೊಂದಿದವರು ಪತಿ-ಪತ್ನಿ ಮತ್ತು ಅವರ ಮೂವರ ಮಕ್ಕಳಾಗಿದ್ದಾರೆ. ನಿನ್ನೆ ಮಧ್ಯರಾತ್ರಿ ಘಟನೆ ನಡೆದಿದ್ದು, ಸುತ್ತಲಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕುಟುಂಬದಲ್ಲಿ ಒಟ್ಟು 7 ಮಂದಿ ಇದ್ದು, ಎಲ್ಲರೂ ರಾತ್ರಿ ಮಲಗಿ ನಿದ್ರಿಸುತ್ತಿದ್ದರು. ಮಧ್ಯರಾತ್ರಿ ಹೊತ್ತಿಗೆ ಮನೆಯ ಒಂದು ಭಾಗ ಕುಸಿದುಬಿದ್ದಿದೆ. ಐವರೂ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಬದುಕುಳಿದ ಇಬ್ಬರು ಮಕ್ಕಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ತೆಲಂಗಾಣ ಮತ್ತು ಹೈದರಾಬಾದ್ನಲ್ಲಿ ಭಯಂಕ ಮಳೆ ಸುರಿಯುತ್ತಿದ್ದು, ಮಳೆಯಿಂದಲೇ ಗೋಡೆ ಕುಸಿದಿದೆಯಾ ಎಂದು ಪೊಲೀಸ್ ಅಧಿಕಾರಿಯನ್ನು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ಮಳೆಯಿಂದಲೂ ಆಗಿರಬಹುದು. ಆದರೆ ಮನೆಯ ಗೋಡೆ ಅದಾಗಲೇ ಶಿಥಿಲಾವಸ್ಥೆಯಲ್ಲಿ ಇತ್ತು ಎಂದು ತಿಳಿಸಿದ್ದಾರೆ.
ಪರಿಹಾರ ಘೋಷಿಸಿದ ಸಿಎಂ ಇನ್ನು ಘಟನೆ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೇ, ಇದೀಗ ಮೃತಪಟ್ಟ ಕುಟುಂಬದಲ್ಲಿ ಬದುಕುಳಿದ ಇಬ್ಬರೂ ಮಕ್ಕಳಿಗೆ ತಲಾ 5 ಲಕ್ಷ ರೂ.ಕೊಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ನಮಗೆ ಓದಿನಲ್ಲಿ ಆಸಕ್ತಿಯಿಲ್ಲ, ಸ್ಪೋರ್ಟ್ಸ್ನಲ್ಲಿ ಆಸಕ್ತಿಯಿದೆ ಎಂದು ಪತ್ರ ಬರೆದು ನಾಪತ್ತೆಯಾದ 7 ಮಕ್ಕಳು; ಪೊಲೀಸರಿಂದ ಶೋಧ
100 ಸಿಸಿ ಬೈಕ್ನಲ್ಲಿ ಕಾಶ್ಮೀರಕ್ಕೆ ರೈಡ್; ಧಾರವಾಡದ ಯುವಕನಿಂದ ಕೊರೊನಾ ಜಾಗೃತಿ ಅಭಿಯಾನ