ದೆಹಲಿ: ಗೃಹ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ

|

Updated on: Apr 16, 2024 | 12:49 PM

ದೆಹಲಿಯ ಭದ್ರ ಪ್ರದೇಶಗಳಲ್ಲಿ ಒಂದಾದ ರೈಸಿನಾ ಹಿಲ್ಸ್​ ಪ್ರದೇಶದಲ್ಲಿರುವ ನಾರ್ತ್​ ಬ್ಲಾಕ್​ನ ಎರಡನೇ ಮಹಡಿಯಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿತ್ತು. ಈ ಕಟ್ಟಡವು ಗೃಹ ವ್ಯವಹಾರಗಳು ಮತ್ತು ಸಿಬ್ಬಂದಿ ಸಚಿವಾಲಯವನ್ನು ಹೊಂದಿದೆ.

ದೆಹಲಿ: ಗೃಹ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ಬೆಂಕಿ
Follow us on

ನವದೆಹಲಿಯ ನಾರ್ತ್​ ಬ್ಲಾಕ್​ನಲ್ಲಿರುವ ಗೃಹ ಸಚಿವಾಲಯದ ಕಚೇರಿಯಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ರೈಸಿನಾ ಹಿಲ್ಸ್‌ ಪ್ರದೇಶದಲ್ಲಿರುವ ನಾರ್ತ್‌ ಬ್ಲಾಕ್‌ನ ಎರಡನೇ ಮಹಡಿಯಲ್ಲಿ ಮಂಗಳವಾರ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡವು ಗೃಹ ವ್ಯವಹಾರಗಳು ಮತ್ತು ಸಿಬ್ಬಂದಿ ಸಚಿವಾಲಯಗಳನ್ನು ಹೊಂದಿದೆ.

ಮೂಲಗಳ ಪ್ರಕಾರ, ಯಾವುದೇ ಗಾಯಗಳು ವರದಿಯಾಗಿಲ್ಲ, ಮತ್ತು ಅಗ್ನಿಶಾಮಕ ಟೆಂಡರ್‌ಗಳ ಸಹಾಯದಿಂದ ಬೆಂಕಿಯನ್ನು ತ್ವರಿತವಾಗಿ ಹತೋಟಿಗೆ ತರಲಾಯಿತು. ನಾರ್ತ್ ಬ್ಲಾಕ್‌ನ ಎರಡನೇ ಮಹಡಿಯ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಆದರೆ ತಕ್ಷಣವೇ ನಂದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಟ್ಟಡದಲ್ಲಿ ಇರಲಿಲ್ಲ. ಆದರೆ, ಬೆಂಕಿ ಅವಘಡ ಸಂಭವಿಸಿದಾಗ ಹಲವು ಉನ್ನತ ಅಧಿಕಾರಿಗಳು ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಓದಿ: Video: ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ

ಎಸಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಸಿ ಘಟಕಗಳು, ಕಂಪ್ಯೂಟರ್​ಗಳು, ದಾಖಲೆಗಳು ಹಾಗೂ ಪೀಠೋಪಕರಣಗಳಿಗೆ ಹಾನಿಯಾಗಿದೆ. ಬೆಳಗ್ಗೆ 9.22ರ ಸುಮಾರಿಗೆ ಘಟನೆ ನಡೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:41 pm, Tue, 16 April 24