AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi: ಕಾರು ಡಿಕ್ಕಿ ಹೊಡೆದು 3 ವರ್ಷದ ಮಗು ಸಾವು, ವಾಯುಪಡೆ ಅಧಿಕಾರಿ ಪುತ್ರನ ಬಂಧನ

ಮಗುವಿನ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ್ದ ಆರೋಪದ ಮೇರೆಗೆ ವಾಯುಪಡೆ ಅಧಿಕಾರಿಯೊಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

Delhi: ಕಾರು ಡಿಕ್ಕಿ ಹೊಡೆದು 3 ವರ್ಷದ ಮಗು ಸಾವು, ವಾಯುಪಡೆ ಅಧಿಕಾರಿ ಪುತ್ರನ ಬಂಧನ
ದೆಹಲಿ ಪೊಲೀಸ್
ನಯನಾ ರಾಜೀವ್
|

Updated on: Feb 28, 2023 | 9:21 AM

Share

ಮಗುವಿನ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ್ದ ಆರೋಪದ ಮೇರೆಗೆ ವಾಯುಪಡೆ ಅಧಿಕಾರಿಯೊಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಸಾವನ್ನಪ್ಪಿತ್ತು, ಸಮರ್ಕ್ ಮಲಿಕ್ (20) ಭಾರತೀಯ ವಾಯುಪಡೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಭರತ್ ಮಲಿಕ್ ಅವರ ಪುತ್ರ.

ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮಗುವಿನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗ್ರೂಪ್ ಕ್ಯಾಪ್ಟನ್ ಮಗನನ್ನು ಬಂಧಿಸಿದ್ದಾರೆ.

ಫೆಬ್ರವರಿ 26 ರಂದು ಸಂಜೆ 5.20 ಕ್ಕೆ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಮಗು ಕೊನೆಯುಸಿರೆಳೆದಿದ್ದಾಳೆ. ಮಗು ಸಾವನ್ನಪ್ಪಿದ ಬಗ್ಗೆ ಪೊಲೀಸರು ದೂರು ಸ್ವೀಕರಿಸಿದ್ದಾರೆ.

ಮತ್ತಷ್ಟು ಓದಿ: Bidar: ಹಾಸ್ಟೆಲ್​ ಕಟ್ಟಡದಿಂದ ಜಿಗಿದು MBBS ವಿದ್ಯಾರ್ಥಿ ಶ್ರೀರಾಮ್ ಆತ್ಮಹತ್ಯೆ

ಭಾರತೀಯ ದಂಡ ಸಂಹಿತೆಯ (ಐಪಿಸಿ) 279/304 ಎ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಚಾಲಕ ಸಮರ್ಕ್ ಗಾಯಗೊಂಡ ಬಾಲಕಿ ಆಕೆಯ ಕುಟುಂಬದವರನ್ನು ದೆಹಲಿ ಆಸ್ಪತ್ರೆಗೆ ದಾಖಲಿಸಿದ್ದ. ಬಳಿಕ ಮಗು  ಸಾವನ್ನಪ್ಪಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ