ದೆಹಲಿ: ಪೆರೋಲ್ ಅವಧಿಯಲ್ಲಿ ಓಡಿ ಹೋಗಿ ತಲೆ ಮರೆಸಿಕೊಂಡಿದ್ದ ಮೋಸ್ಟ್​ ವಾಂಟೆಡ್ ಕ್ರಿಮಿನಲ್ 5 ವರ್ಷಗಳ ಬಳಿಕ ಸೆರೆ

|

Updated on: Nov 20, 2023 | 8:34 AM

ಪೆರೋಲ್ ಅವಧಿಯಲ್ಲಿ ಓಡಿ ಹೋಗಿ ತಲೆ ಮರೆಸಿಕೊಂಡಿದ್ದ ಮೋಸ್ಟ್​ ವಾಂಟೆಡ್ ಕ್ರಿಮಿನಲ್ ವಿಜಯ್ ಪಹಲ್ವಾನ್​ನಲ್ಲಿ ದೆಹಲಿ ಪೊಲೀಸರು ಐದು ವರ್ಷಗಳ ಬಳಿಕ ಬಂಧಿಸಿದ್ದಾರೆ. ಮಧ್ಯಪ್ರದೇಶದ ಜಬಲ್​ಪುರದಲ್ಲಿ ಆತನನ್ನು ಬಂಧಿಸಲಾಗಿದೆ, ದೆಹಲಿ, ಹರಿಯಾಣ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಕೊಲೆ, ಕೊಲೆ ಯತ್ನ ಮತ್ತು ಲೈಂಗಿಕ ಕಿರುಕುಳ ಸೇರಿದಂತೆ 24 ಪ್ರಕರಣಗಳಲ್ಲಿ ಆತ ಬೇಕಾಗಿದ್ದ, ಆತನ ಬಗ್ಗೆ ಸುಳಿವು ಕೊಟ್ಟವರಿಗೆ 2 ಲಕ್ಷ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದರು.

ದೆಹಲಿ: ಪೆರೋಲ್ ಅವಧಿಯಲ್ಲಿ ಓಡಿ ಹೋಗಿ ತಲೆ ಮರೆಸಿಕೊಂಡಿದ್ದ ಮೋಸ್ಟ್​ ವಾಂಟೆಡ್ ಕ್ರಿಮಿನಲ್ 5 ವರ್ಷಗಳ ಬಳಿಕ ಸೆರೆ
ಬಂಧನ
Image Credit source: ipleaders
Follow us on

ಪೆರೋಲ್ ಅವಧಿಯಲ್ಲಿ ಓಡಿ ಹೋಗಿ ತಲೆ ಮರೆಸಿಕೊಂಡಿದ್ದ ಮೋಸ್ಟ್​ ವಾಂಟೆಡ್ ಕ್ರಿಮಿನಲ್ ವಿಜಯ್ ಪಹಲ್ವಾನ್​ನಲ್ಲಿ ದೆಹಲಿ ಪೊಲೀಸರು ಐದು ವರ್ಷಗಳ ಬಳಿಕ ಬಂಧಿಸಿದ್ದಾರೆ. ಮಧ್ಯಪ್ರದೇಶದ ಜಬಲ್​ಪುರದಲ್ಲಿ ಆತನನ್ನು ಬಂಧಿಸಲಾಗಿದೆ, ದೆಹಲಿ, ಹರಿಯಾಣ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಕೊಲೆ, ಕೊಲೆ ಯತ್ನ ಮತ್ತು ಲೈಂಗಿಕ ಕಿರುಕುಳ ಸೇರಿದಂತೆ 24 ಪ್ರಕರಣಗಳಲ್ಲಿ ಆತ ಬೇಕಾಗಿದ್ದ, ಆತನ ಬಗ್ಗೆ ಸುಳಿವು ಕೊಟ್ಟವರಿಗೆ 2 ಲಕ್ಷ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದರು.

ಪೊಲೀಸ್ ಮತ್ತು ನ್ಯಾಯಾಂಗ ದಾಖಲೆಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಹಲವಾರು ಪೊಲೀಸ್ ಫೈಲ್‌ಗಳು, ಎಸ್‌ಸಿಆರ್‌ಬಿ ದಾಖಲೆಗಳು ಮತ್ತು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಗಳಲ್ಲಿ ನಿರ್ವಹಿಸಲಾದ ಆರೋಪಿಗಳ ಸಂಪೂರ್ಣ ಕ್ರಿಮಿನಲ್ ದಾಖಲೆಗಳನ್ನು ವಿಶ್ಲೇಷಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಘೋಷಿತ ಅಪರಾಧಿ ಎಂಬುದು ಕಂಡುಬಂದಿದೆ.

ಮತ್ತಷ್ಟು ಓದಿ:ಬೆಂಗಳೂರಿನಲ್ಲಿ ಅಂತಾರಾಷ್ಟ ಮಟ್ಟದ ಮೋಸ್ಟ್ ವಾಂಟೆಡ್​ ಕ್ರಿಮಿನಲ್​ಗಳ ಬಂಧನ, ಭಾರತಕ್ಕೆ ನುಸುಳಿದ್ದೇ ರೋಚಕ

ಪಹಲ್ವಾನ್‌ನ ಸ್ಥಳವನ್ನು ಪತ್ತೆಹಚ್ಚಿದ ನಂತರ, ವಿಶೇಷ ತಂಡವನ್ನು ರಚಿಸಲಾಯಿತು ಮತ್ತು ಜಬಲ್‌ಪುರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 2011ರಲ್ಲಿ ಪಹಲ್ವಾನ್, ರಘುವೀರ್​ ಸಿಂಗ್ ಎಂಬುವವರನ್ನು ದೆಹಲಿಯ ಕಿಶನ್​ಗಢ ಪ್ರದೇಶದಿಂದ ಅಪಹರಿಸಿ ನಂತರ ಕೊಲೆ ಮಾಡಿದ್ದರು.

ದೆಹಲಿಯ ಅಂಧೇರಿ ಮೋರ್ ಪ್ರದೇಶಕ್ಕೆ ಕರೆದೊಯ್ದು ಗುಂಡು ಹಾರಿಸಿ ಹತ್ಯೆ ಮಾಡಿದ್ದ, ಬಳಿಕ ಗುರುಗ್ರಾಮದ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ. ಬಳಿಕ ಪಹಲ್ವಾನ್​ನನ್ನು ಬಂಧಿಸಲಾಗಿತ್ತು, 2018ರಲ್ಲಿ ಪೆರೋಲ್ ಪಡೆದಿದ್ದ, ಬಳಿಕ ಓಡಿ ಹೋಗಿದ್ದ. ವಿಕ್ರಮ್ ಸಿಂಗ್ ಹೆಸರನ್ನು ಬಳಸಿಕೊಂಡು ಆರೋಪಿಗಳು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕೆಲಸ ಶುರು ಮಾಡಿದ್ದ.
ಪಹಲ್ವಾನ್ ತನ್ನ ಸುರಕ್ಷತೆಗಾಗಿ ನಾಲ್ಕು ಶಸ್ತ್ರಸಜ್ಜಿತ ಅಂಗರಕ್ಷಕರನ್ನು ನೇಮಿಸಿಕೊಂಡಿದ್ದ. ಆತನಿಗೆ ಇಬ್ಬರು ಮಕ್ಕಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ