ವ್ಯಕ್ತಿಯೊಬ್ಬನನ್ನು ನಡುರಸ್ತೆಯಲ್ಲೇ ಹೊಡೆದು ಕೊಂದ ಪೊಲೀಸ್​ ಕಾನ್​ಸ್ಟೆಬಲ್​ ಅರೆಸ್ಟ್​; ಎಫ್​ಐಆರ್​ ದಾಖಲಿಸದ ಅಧಿಕಾರಿ ಸಸ್ಪೆಂಡ್​

| Updated By: Lakshmi Hegde

Updated on: Jul 29, 2021 | 6:52 PM

ನಾವು ದೂರು ಕೊಟ್ಟು 24 ತಾಸಾದರೂ ನ್ಯೂ ಅಶೋಕನಗರ ಪೊಲೀಸ್​ ಠಾಣೆಯ ಅಧಿಕಾರಿ ಎಫ್​ಐಆರ್​ ದಾಖಲು ಮಾಡಲಿಲ್ಲ ಎಂದೂ ಕುಟುಂಬದವರು ಆರೋಪಿಸಿದ್ದಾರೆ.

ವ್ಯಕ್ತಿಯೊಬ್ಬನನ್ನು ನಡುರಸ್ತೆಯಲ್ಲೇ ಹೊಡೆದು ಕೊಂದ ಪೊಲೀಸ್​ ಕಾನ್​ಸ್ಟೆಬಲ್​ ಅರೆಸ್ಟ್​; ಎಫ್​ಐಆರ್​ ದಾಖಲಿಸದ ಅಧಿಕಾರಿ ಸಸ್ಪೆಂಡ್​
ವ್ಯಕ್ತಿಗೆ ಥಳಿಸಿ, ಆತ ಸಾಯುತ್ತಿದ್ದಂತೆ ಕಾರಿನಲ್ಲಿ ಮೃತದೇಹ ಸಾಗಿಸಿದ ಕಾನ್​ಸ್ಟೆಬಲ್​ ಮತ್ತು ಸಹಾಯಕರು
Follow us on

ವ್ಯಕ್ತಿಯೊಬ್ಬನನ್ನು ಒಂದೇ ಸಮ ಹೊಡೆದು ಕೊಂದ ಪೊಲೀಸ್​ ಕಾನ್​ಸ್ಟೆಬಲ್ (Police Constable)​​ ನ್ನು ಬಂಧಿಸಲಾಗಿದೆ. ಈ ಕಾನ್​ಸ್ಟೆಬಲ್​​ನನ್ನು ಮೋನು ಸಿರೋಹಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟ ತನಿಖೆ ನಡೆಯುತ್ತಿದೆ ಎಂದು ಪೂರ್ವ ದೆಹಲಿ ಡಿಸಿಪಿ ಪ್ರಿಯಾಂಕಾ ಕಶ್ಯಪ್​ ತಿಳಿಸಿದ್ದಾರೆ. ಈ ಪೊಲೀಸ್​ ಕಾನ್​ಸ್ಟೆಬಲ್​ ವ್ಯಕ್ತಿಯೊಬ್ಬನಿಗೆ ತುಂಬ ಥಳಿಸಿದ್ದ. ಪೊಲೀಸ್(Police)​ ಹೊಡೆತ ತಾಳಲಾಗದೆ ಆತ ಮೃತಪಟ್ಟಿದ್ದ. ಈ ವೇಳೆ ಕಾನ್​ಸ್ಟೆಬಲ್​ ಜತೆ ಇನ್ನೂ ನಾಲ್ವರು ಇದ್ದರು. ನಂತರ ಎಲ್ಲ ಸೇರಿ ಆತನ ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿ ಮೀರತ್​ ಕಾಲುವೆಗೆ ಎಸೆದಿದ್ದರು. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ತುಂಬ ವೈರಲ್​ ಆಗಿತ್ತು.

ಮೃತ ವ್ಯಕ್ತಿಯ ಕುಟುಂಬದವರು ದೆಹಲಿಯ ನ್ಯೂ ಅಶೋಕ ನಗರ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ಸಲ್ಲಿಸಿದ್ದರು. ನಾವು ದೂರು ಕೊಟ್ಟು 24 ತಾಸಾದರೂ ನ್ಯೂ ಅಶೋಕನಗರ ಪೊಲೀಸ್​ ಠಾಣೆಯ ಅಧಿಕಾರಿ ಎಫ್​ಐಆರ್​ ದಾಖಲು ಮಾಡಲಿಲ್ಲ ಎಂದೂ ಕುಟುಂಬದವರು ಆರೋಪಿಸಿದ್ದಾರೆ. ಅದಾದ ನಂತರ ಪೊಲೀಸ್ ಕಾನ್​ಸ್ಟೆಬಲ್​ ತನ್ನ ಸಹಾಯಕರೊಂದಿಗೆ ಸೇರಿಕೊಂಡು ವ್ಯಕ್ತಿಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ. ಇದೀಗ ನ್ಯೂ ಅಶೋಕ ನಗರ ಠಾಣಾಧಿಕಾರಿಯೂ ಅಮಾನತುಗೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Uttara Kannada Flood: ಭೂಕುಸಿತಕ್ಕೊಳಗಾದ ಕಳಚೆ ಗ್ರಾಮದ ಸಂಪೂರ್ಣ ಸ್ಥಳಾಂತರ, ನೊಂದವರಿಗೆ ಶೀಘ್ರ ಪರಿಹಾರ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ