AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತೀ ಹಿಂದುಳಿದ ರಾಜ್ಯ ಬಿಹಾರ, ನಿತೀಶ್ ಕುಮಾರ್​​ನ್ನು ಲೇವಡಿ ಮಾಡಿದ ಆರ್​​ಜೆಡಿ

Bihar: 2020-21ರ ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿಗಳ ವರದಿಯು ಬಿಹಾರ ದೇಶದ ಅತ್ಯಂತ ಹಿಂದುಳಿದ ರಾಜ್ಯ ಎಂದು ಹೇಳಿದೆಯೇ? "ಹಾಗಿದ್ದರೆ, ಬಿಹಾರ ರಾಜ್ಯದ ಹಿಂದುಳಿದಿರುವ ಕಾರಣಗಳು"ಏನು ಎಂದು ಕೇಳಿ ಎಂದಿದ್ದರು ಸಿಂಗ್.

ಅತೀ ಹಿಂದುಳಿದ ರಾಜ್ಯ ಬಿಹಾರ, ನಿತೀಶ್ ಕುಮಾರ್​​ನ್ನು ಲೇವಡಿ ಮಾಡಿದ ಆರ್​​ಜೆಡಿ
ನಿತೀಶ್ ಕುಮಾರ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 29, 2021 | 7:12 PM

Share

ದೆಹಲಿ: ವರದಿಯ ಪ್ರಕಾರ ಬಿಹಾರ ಭಾರತದ ಅತ್ಯಂತ ಹಿಂದುಳಿದ ರಾಜ್ಯವಾಗಿದೆ ಎಂದು ಕೇಂದ್ರವು ಸಂಸತ್ತಿನಲ್ಲಿ ಹೇಳಿದ್ದು ಬಿಜೆಪಿ ಮೈತ್ರಿ ಪಕ್ಷವಾಗಿರುವ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಬಗ್ಗೆ ಹೊಸ ರಾಜಕೀಯ ವಿವಾದವುಂಟಾಗಿದೆ. ಲೋಕಸಭೆಯಲ್ಲಿ ನಿತೀಶ್ ಕುಮಾರ್ ಅವರ ಜನತಾದಳ ಯುನೈಟೆಡ್ (ಜೆಡಿಯು) ಸಂಸದ ಮ್ತತು ಸಂಸತ್ತಿನಲ್ಲಿ ಪಕ್ಷದ ನಾಯಕ ರಾಜೀವ್ ರಂಜನ್ ಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಂದ್ರ ಬಿಹಾರ ಹಿಂದುಳಿದ ರಾಜ್ಯವಾಗಿದೆ ಎಂದು ಹೇಳಿದೆ. 2020-21ರ ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿಗಳ ವರದಿಯು ಬಿಹಾರ ದೇಶದ ಅತ್ಯಂತ ಹಿಂದುಳಿದ ರಾಜ್ಯ ಎಂದು ಹೇಳಿದೆಯೇ? “ಹಾಗಿದ್ದರೆ, ಬಿಹಾರ ರಾಜ್ಯದ ಹಿಂದುಳಿದಿರುವ ಕಾರಣಗಳು”ಏನು ಎಂದು ಕೇಳಿ ಎಂದಿದ್ದರು ಸಿಂಗ್. ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ “ದೀರ್ಘಕಾಲದ ಬಾಕಿ ಇರುವ ಬೇಡಿಕೆಯನ್ನು” ಕೇಂದ್ರ ಪರಿಗಣಿಸುತ್ತಿದೆಯೇ ಎಂದು ಅವರು ಕೇಳಿದ್ದರು.

ನೀತಿ ಆಯೋಗದ ಅವರ ವರದಿಯ ಪ್ರಕಾರ, ಬಿಹಾರದ ಸಂಯೋಜಿತ ಸ್ಕೋರ್ (100 ರಲ್ಲಿ 52) ಎಲ್ಲಾ ರಾಜ್ಯಗಳಲ್ಲಿ ಕಡಿಮೆ ಎಂದು ಕೇಂದ್ರ ಸಚಿವ ರಾವ್ ಇಂದರ್ಜಿತ್ ಸಿಂಗ್ ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸೂಚ್ಯಂಕವು 115 ಸೂಚಕಗಳನ್ನು ಬಳಸಿದೆ ಎಂದು ಅವರು ಹೇಳಿದರು.

ಬಡತನ, 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಅತ್ಯಂತ ಕಡಿಮೆ ಸಾಕ್ಷರತೆ ಮತ್ತು ಕಡಿಮೆ ಮೊಬೈಲ್ ಬಳಕೆ ಮತ್ತು ಇಂಟರ್ನೆಟ್ ಬಳಕೆ ಮುಂತಾದ ಅಂಶಗಳಿಗೆ ಬಿಹಾರದ ಕಳಪೆ ಸ್ಕೋರ್ ಗೆ ಕಾರಣ ಎಂದು ಸಚಿವರು ಹೇಳಿದ್ದಾರೆ.

“ಜನಸಂಖ್ಯೆಯ ಹೆಚ್ಚಿನ ಪ್ರಮಾಣವು (ಶೇಕಡಾ 33.74) ಬಡತನ ರೇಖೆಗಿಂತ ಕೆಳಗಿದೆ. ಶೇಕಡಾ 52.5 ರಷ್ಟು ಜನರು ಬಹುಆಯಾಮದ ಬಡತನದಿಂದ ಬಳಲುತ್ತಿದ್ದಾರೆ. ಕೇವಲ 12.3 ರಷ್ಟು ಕುಟುಂಬಗಳು ಮಾತ್ರ ಆರೋಗ್ಯ ವಿಮೆಯ ವ್ಯಾಪ್ತಿಗೆ ಬರುವ ಯಾವುದೇ ಸಾಮಾನ್ಯ ಸದಸ್ಯರನ್ನು ಹೊಂದಿದ್ದಾರೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ42 ರಷ್ಟು ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ,ಇದು ದೇಶದಲ್ಲಿ ಅತಿ ಹೆಚ್ಚು. ಇದು 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಕಡಿಮೆ ಸಾಕ್ಷರತೆಯನ್ನು ಹೊಂದಿದೆ (ಶೇಕಡಾ 64.7) “ಎಂದು ರಾವ್ ಇಂದರ್ಜಿತ್ ಸಿಂಗ್ ಹೇಳಿದ್ದಾರೆ.

ಬಿಹಾರದಲ್ಲಿ ಕಡಿಮೆ ಮೊಬೈಲ್ ಟೆಲಿ-ಡೆನ್ಸಿಟಿ (100 ಜನರಿಗೆ 50.65) ಮತ್ತು ಕಡಿಮೆ ಸಂಖ್ಯೆಯ ಇಂಟರ್ನೆಟ್ ಚಂದಾದಾರರು (100 ಜನರಿಗೆ 30.99) ಇದ್ದಾರೆ ಎಂದು ಅವರು ಸಂಸತ್ತಿನಲ್ಲಿ ಹೇಳಿದರು.

ಬಿಹಾರದ ವಿರೋಧ ಪಕ್ಷದ ಆರ್​ಜೆಡಿ (ರಾಷ್ಟ್ರೀಯ ಜನತಾದಳ) ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ಟೀಕಾ ಪ್ರಹಾರ ಮಾಡಲು ಸಂಸತ್ತಿನಲ್ಲಿ ಈ ವಿಷಯವನ್ನು ಬಳಸಿದೆ.

ಬಿಹಾರ ವಿಧಾನಸಭೆಯಲ್ಲಿ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್, ಡಬಲ್ ಎಂಜಿನ್ ಸರ್ಕಾರದ ಹೊರತಾಗಿಯೂ, ಬಿಹಾರವು ಎಲ್ಲಾ ನಿಯತಾಂಕಗಳಲ್ಲಿ ಏಕೆ ಜಾರಿದೆ ಎಂದು ಕೇಳಿದರು.

ನೀತಿ ಆಯೋಗ ಎಸ್‌ಡಿಜಿ (ಸುಸ್ಥಿರ ಅಭಿವೃದ್ಧಿ ಗುರಿಗಳು) ಸೂಚ್ಯಂಕ 2021 ರ ಪ್ರಕಾರ, ಮೊದಲ ಐದು ಸ್ಥಾನಗಳು: ಕೇರಳ ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ಆಂಧ್ರಪ್ರದೇಶ, ಗೋವಾ, ಕರ್ನಾಟಕ, ಉತ್ತರಾಖಂಡ ಸಿಕ್ಕಿಂ ಮಹಾರಾಷ್ಟ್ರ ಕೆಳಗಿನ ಮೂರು ರಾಜ್ಯಗಳು ಅಸ್ಸಾಂ, ಜಾರ್ಖಂಡ್ ಮತ್ತು ಬಿಹಾರ ಆಗಿವೆ.

ಇದನ್ನೂ ಓದಿ: ಕೇರಳದಲ್ಲಿ ಕೊವಿಡ್ ಪ್ರಕರಣ ಹೆಚ್ಚಳ; ಪರಿಸ್ಥಿತಿ ಪರಿಶೀಲಿಸಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಸದಸ್ಯರ ತಂಡ ಕಳುಹಿಸಿದ ಕೇಂದ್ರ ಸರ್ಕಾರ

ಇದನ್ನೂ ಓದಿ:  PM Modi Speech Today: 11 ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ: ನರೇಂದ್ರ ಮೋದಿ

(Bihar is India’s most backward state Says Centre opposition RJD Mocks Nitish Kumar)

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ