Bomb Threat: ದೆಹಲಿ ಪಬ್ಲಿಕ್ ಸ್ಕೂಲ್​ಗೆ ಬಾಂಬ್ ಬೆದರಿಕೆಯ ಇ-ಮೇಲ್ ಕಳುಹಿಸಿದ ಆಗಂತುಕರು

|

Updated on: Apr 26, 2023 | 9:45 AM

ದೆಹಲಿ ಪಬ್ಲಿಕ್ ಸ್ಕೂಲ್​ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇ-ಮೇಲ್ ಮೂಲಕ ಆಗಂತುಕರು ಬಾಂಬ್ ಬೆದರಿಕೆ ಹಾಕಿದ್ದಾರೆ.

Bomb Threat: ದೆಹಲಿ ಪಬ್ಲಿಕ್ ಸ್ಕೂಲ್​ಗೆ ಬಾಂಬ್ ಬೆದರಿಕೆಯ ಇ-ಮೇಲ್ ಕಳುಹಿಸಿದ ಆಗಂತುಕರು
ದೆಹಲಿ ಪಬ್ಲಿಕ್ ಸ್ಕೂಲ್
Image Credit source: Jagaran.com
Follow us on

ದೆಹಲಿ ಪಬ್ಲಿಕ್ ಸ್ಕೂಲ್​ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇ-ಮೇಲ್ ಮೂಲಕ ಆಗಂತುಕರು ಬಾಂಬ್ ಬೆದರಿಕೆ ಹಾಕಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ಮಥುರಾ ರಸ್ತೆಯಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‌ಗೆ ಬಾಂಬ್ ಬೆದರಿಕೆ ಬಂದಿದೆ. ಇದು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ದೆಹಲಿ ಪಬ್ಲಿಕ್ ಸ್ಕೂಲ್‌ಗೆ ಇ-ಮೇಲ್ ಮೂಲಕ ಈ ಬೆದರಿಕೆ ಬಂದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಥದ್ದೇ ಮತ್ತೊಂದು ಘಟನೆ ನಡೆದಿತ್ತು
ಏಪ್ರಿಲ್ 12 ರಂದು ದೆಹಲಿಯ ಶಾಲೆಯೊಂದರ ಆವರಣದಲ್ಲಿ ಬಾಂಬ್​ ಇಟ್ಟಿದ್ದೇವೆ ಎಂದು ಆಗಂತುಕರು ಇ-ಮೇಲ್ ಕಳುಹಿಸಿದ್ದು, ಭಯದಲ್ಲಿ ಮಕ್ಕಳನ್ನು ಶಾಲೆಯಿಂದ ಸ್ಥಳಾಂತರಿಸಲಾಗಿತ್ತು.

ದೆಹಲಿಯ ಸಾಧಿಕ್​ನಗರದಲ್ಲಿರುವ ದಿ ಇಂಡಿಯನ್​ ಸ್ಕೂಲ್​ಗೆ ದುಷ್ಕರ್ಮಿಗಳು ಇ-ಮೇಲ್ ಮಾಡಿ, ಬಾಂಬ್​ ಇಟ್ಟಿದ್ದೇವೆ ಎಂದು ಬೆದರಿಕೆ ಹಾಕಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:36 am, Wed, 26 April 23