ದೆಹಲಿ: ಸಮಾಜ ಕಲ್ಯಾಣ ಸಚಿವ ರಾಜ್ ಕುಮಾರ್ ಆನಂದ್ ರಾಜೀನಾಮೆ, ಸರ್ಕಾರ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 10, 2024 | 5:27 PM

ಅರವಿಂದ್​​​ ಕೇಜ್ರಿವಾಲ್​​​ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುವೇ ಎಂದಿದ್ದರು. ಆದರೆ ಇಂದು ಪಕ್ಷ ಮತ್ತು ಸರ್ಕಾರ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ. ನಾನು ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದೇನೆ ಎಂದು ರಾಜ್ ಕುಮಾರ್ ಆನಂದ್ ಹೇಳಿದ್ದಾರೆ.

ದೆಹಲಿ: ಸಮಾಜ ಕಲ್ಯಾಣ ಸಚಿವ ರಾಜ್ ಕುಮಾರ್ ಆನಂದ್ ರಾಜೀನಾಮೆ, ಸರ್ಕಾರ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ
ರಾಜ್ ಕುಮಾರ್ ಆನಂದ್
Follow us on

ದೆಹಲಿ, ಏ.10: ದೆಹಲಿಯ ಸಮಾಜ ಕಲ್ಯಾಣ ಇಲಾಖೆ ಸಚಿವ ರಾಜ್ ಕುಮಾರ್ ಆನಂದ್ (Raaj Kumar Anand) ತಮ್ಮ ಸಚಿವ ಸ್ಥಾನಕ್ಕೆ ಮತ್ತು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಎಎಪಿಯ ನೀತಿಯಿಂದ ಅತೃಪ್ತನಾಗಿ ಈ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅರವಿಂದ್​​​ ಕೇಜ್ರಿವಾಲ್​​​ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುವೇ ಎಂದಿದ್ದರು. ಆದರೆ ಇಂದು ಪಕ್ಷ ಮತ್ತು ಸರ್ಕಾರ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ. ನಾನು ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದೇನೆ ಎಂದು ರಾಜ್ ಕುಮಾರ್ ಆನಂದ್ ಹೇಳಿದ್ದಾರೆ.

ರಾಜ್ ಕುಮಾರ್ ಆನಂದ್ ಅವರು ಪಟೇಲ್ ನಗರ ಪ್ರದೇಶದ ಶಾಸಕರಾಗಿದ್ದು, ಕೇಜ್ರಿವಾಲ್ ನೇತೃತ್ವದ ದೆಹಲಿ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು SC/ST ಸಚಿವರಾಗಿದ್ದರು. ಆಮ್ ಆದ್ಮಿ ಪಕ್ಷ ಹುಟ್ಟಿದ್ದು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಆದರೆ ಇಂದು ಪಕ್ಷ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ, ಹಾಗಾಗಿ ಈ ಪರಿಸ್ಥಿತಿಯಲ್ಲಿ ನನಗೆ ಸಚಿವ ಸ್ಥಾನದಲ್ಲಿ ಇರಲು ಸಾಧ್ಯವಾಗುತ್ತಿಲ್ಲ, ಹಾಗೂ ಕೆಲಸ ಮಾಡಲು ಇಷ್ಟವಿಲ್ಲ ಎಂದು ರಾಜ್ ಕುಮಾರ್ ಆನಂದ್ ಹೇಳಿದ್ದಾರೆ.

ನಾನು ಸಚಿವ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಭ್ರಷ್ಟಾಚಾರದೊಂದಿಗೆ ನನ್ನ ಹೆಸರನ್ನು ಜೋಡಿಸಿ ಎಂದು ಹೇಳಿದ್ದಾರೆ. ರಾಜಕೀಯ ಬದಲಾದ ನಂತರ ದೇಶ ಬದಲಾಗುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು, ರಾಜಕೀಯ ಬದಲಾಗಿಲ್ಲ, ಆದರೆ ರಾಜಕಾರಣಿ ಬದಲಾಗಿದ್ದಾರೆ. ಇದಲ್ಲದೆ, ದಲಿತರಿಗೆ ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯವಿಲ್ಲ. ಎಎಪಿಯಲ್ಲಿ ದಲಿತ ಶಾಸಕರು, ಸಚಿವರು ಅಥವಾ ಕೌನ್ಸಿಲರ್‌ಗಳಿಗೆ ಯಾವುದೇ ಗೌರವ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.

ಸಮಾಜಕ್ಕೆ ಹಣ ಕೊಡಲು ಸಚಿವನಾದೆ, ದಲಿತ ಪ್ರಾತಿನಿಧ್ಯದ ವಿಚಾರ ಬಂದಾಗ ಹಿಂದೆ ಸರಿಯುವ ಪಕ್ಷದ ಭಾಗವಾಗಲು ನಾನು ಬಯಸುವುದಿಲ್ಲ, ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂದರು. ನಮ್ಮಲ್ಲಿ 13 ರಾಜ್ಯಸಭಾ ಸಂಸದರಿದ್ದಾರೆ, ಆದರೆ ಅವರಲ್ಲಿ ಯಾರೂ ದಲಿತ, ಮಹಿಳೆ ಅಥವಾ ಹಿಂದುಳಿದ ವರ್ಗದವರಲ್ಲ. ಈ ಪಕ್ಷದಲ್ಲಿ ದಲಿತ ಶಾಸಕರು, ಕೌನ್ಸಿಲರ್‌ಗಳು ಮತ್ತು ಮಂತ್ರಿಗಳಿಗೆ ಗೌರವವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ದಲಿತರು ಮೋಸ ಹೋದ ಭಾವನೆ ಇದೆ. ಹಾಗಾಗಿ ಈ ಪಕ್ಷದಲ್ಲಿ ಉಳಿಯುವುದು ಕಷ್ಟ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಮದ್ಯ ನೀತಿ ಪ್ರಕರಣ: ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಕೇಜ್ರಿವಾಲ್

ಕಳೆದ ವರ್ಷ ಜಾರಿ ನಿರ್ದೇಶನಾಲಯದ ಅಕ್ರಮ ಹಣ ವರ್ಗಾವಣೆ ಪ್ರಕರಣದ ವರದಿಯಲ್ಲಿ ರಾಜ್ ಕುಮಾರ್ ಆನಂದ್ ಅವರ ಹೆಸರು ಕೂಡ ಉಲ್ಲೇಖಿಸಲಾಗಿತ್ತು. ಇಡಿ ಅವರ ಮನೆಯ ಮೇಲೆಯೂ ದಾಳಿಯನ್ನು ನಡೆಸಿತ್ತು. ಈ ಬಗ್ಗೆ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯದ ವಿರುದ್ಧ ದೂರು ಕೂಡ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Wed, 10 April 24