ಹರಿಯಾಣದಲ್ಲಿ ಕಲ್ಲುತೂರಾಟದ ಬೆನ್ನಲ್ಲೇ ಪಂಜಾಬ್‌ನ ಖನ್ನಾದಲ್ಲಿ ದೆಹಲಿ-ಶ್ರೀನಗರ ಬಸ್ ಮೇಲೆ ಮತ್ತೆ ದಾಳಿ
ಹರಿಯಾಣದಲ್ಲಿ ದಾಳಿ ನಡೆದ ಕೇವಲ ಒಂದು ದಿನದ ಬಳಿಕ, ಪಂಜಾಬ್‌ನ ದೊರಾಹಾ ಬಳಿ ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಭಾನುವಾರ ರಾತ್ರಿ ಖನ್ನಾ ಪ್ರದೇಶದ ದೊರಾಹಾ ಮೂಲಕ ಬಸ್ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ರಸ್ತೆ ಬದಿಯಿಂದ ಯಾರೋ ಎಸೆದ ಕಲ್ಲೊಂದು ಬಸ್‌ನ ಕಿಟಕಿಯ ಗಾಜನ್ನು ಪುಡಿ ಮಾಡಿದೆ. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿತಾದರೂ, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡವು ಬಸ್‌ಗೆ ಭದ್ರತೆ ಒದಗಿಸಿ ಖನ್ನಾದಿಂದ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದೆ.

ಚಂಡೀಗಢ, ಅಕ್ಟೋಬರ್ 19: ಹರಿಯಾಣದಲ್ಲಿ ಬಸ್‌ಗಳ ಮೇಲೆ ಕಲ್ಲುತೂರಾಟ ನಡೆದ ಬೆನ್ನಲ್ಲೇ, ಪಂಜಾಬ್‌ನ ಖನ್ನಾ ಪ್ರದೇಶದಲ್ಲಿ ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಒಂದರ ಮೇಲೆ ದುಷ್ಕರ್ಮಿಗಳು ಮತ್ತೆ ದಾಳಿ ನಡೆಸಿರುವ ಘಟನೆ ನಡೆದಿದೆ. ಈ ಸರಣಿ ದಾಳಿಗಳಿಂದಾಗಿ ಪ್ರಯಾಣಿಕರಲ್ಲಿ ಭೀತಿ ಆವರಿಸಿದೆ. ದೆಹಲಿಯಿಂದ ಕಾಶ್ಮೀರದ ಶ್ರೀನಗರದತ್ತ ಹೊರಟಿದ್ದ ಬಸ್ ಪಂಜಾಬ್‌ನ ಖನ್ನಾ ತಲುಪಿದಾಗ, ಅಪರಿಚಿತ ವ್ಯಕ್ತಿಗಳ ಗುಂಪು ಏಕಾಏಕಿ ಬಸ್ ಮೇಲೆ ಕಲ್ಲುಗಳನ್ನು ತೂರಿ ದಾಳಿ ನಡೆಸಿದೆ. ಈ ಅನಿರೀಕ್ಷಿತ ದಾಡಿಯಿಂದ ಬಸ್‌ನ ಗಾಜುಗಳು ಪುಡಿಯಾಗಿವೆ.
ಪ್ರಯಾಣಿಕರಿಗೆ ತಪ್ಪಿದ ಅಪಾಯ:
ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ದಿಢೀರ್ ದಾಳಿಯಿಂದಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಖನ್ನಾ ಪೊಲೀಸರು ಪರಿಶೀಲನೆ ನಡೆಸಿದ್ದು, ದಾಳಿಕೋರರನ್ನು ಪತ್ತೆಹಚ್ಚಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಿದ್ದಾರೆ. ಹರಿಯಾಣದಲ್ಲೂ ಇದೇ ರೀತಿಯ ಕಲ್ಲೆಸೆತದ ಘಟನೆಗಳು ವರದಿಯಾಗಿರುವುದರಿಂದ, ಈ ಎರಡೂ ಘಟನೆಗಳ ಹಿಂದೆ ಯಾವುದಾದರೂ ಸಂಚು ಇದೆಯೇ ಎಂಬ ಕೋನದಲ್ಲೂ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
Once again, I strongly condemn the attack on the Star World interstate video coach bus travelling from Ludhiana, Punjab, around midnight.
A large number of passengers from Jammu & Kashmir are also travelling on these buses. Many of them are daily-wage labourers and patients who travel to different states across India in search of livelihood and medical treatment.
Targeting innocent passengers is deeply disturbing and completely unacceptable. Every passenger has the right to travel safely and without fear.
I urge the concerned authorities to take strict action against those responsible and ensure the safety of all passengers. Our highways must remain safe for everyone, regardless of their region or background.
The safety of innocent travellers must be our priority. Justice must be served, and peace must prevail.
#CondemnTheAttack #PassengerSafety #Justice #Peace #JammuAndKashmir #SafeHighways
@OfficeOfLGJandK @manojsinha_ @AmitShah @narendramodi @BhagwantMann @OmarAbdullah @DGPPunjabPolice @PunjabPoliceInd @RuhullahMehdi @imranrezaansari @RavinderRaina @Sunil_SharmaBJP
— Maroof Razvi (@maroof_razvi_) October 19, 2026
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಅಪಘಾತ: 15 ಮಂದಿಗೆ ಗಂಭೀರ ಗಾಯ
ಹರಿಯಾಣದ ಕರ್ನಾಲ್‌ನಲ್ಲಿ ಶನಿವಾರ ಯಾವ ಸಾರಿಗೆ ಕಂಪನಿಯ ಬಸ್ ಮೇಲೆ ದಾಳಿ ನಡೆದಿತ್ತೋ, ಅದೇ ಕಂಪನಿಯ ಬಸ್ ಇದೀಗ ಪಂಜಾಬ್‌ನಲ್ಲೂ ದಾಳಿಗೊಳಗಾಗಿದೆ. “ಎರಡೂ ಘಟನೆಗಳಲ್ಲಿ ಒಂದೇ ಸಾರಿಗೆ ಆಪರೇಟರ್‌ನ ಬಸ್‌ಗಳು ಗುರಿಯಾಗಿವೆ. ಈ ಎರಡೂ ದಾಳಿಗಳ ನಡುವೆ ಯಾವುದಾದರೂ ಸಂಬಂಧವಿದೆಯೇ ಎಂಬುದನ್ನು ನಾವು ತನಿಖೆ ಮಾಡುತ್ತಿದ್ದೇವೆ” ಎಂದು ಎಸ್‌ಪಿ ಯಾದವ್ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
