ಕಾನೂನನ್ನು ಬೋಧಿಸುವವರೇ ಕಾನೂನು ಪಾಲನೆ ಮಾಡದಿದ್ದರೆ ಹೇಗೆ?, ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುತ್ತಿದ್ದುದನ್ನು ಕಂಡು ಇಬ್ಬರು ಮಹಿಳೆಯರು ಅವರನ್ನೇ ಹಿಂಬಾಲಿಸಿ ಹೋಗಿ ಪ್ರಶ್ನೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಾಮಾನ್ಯವಾಗಿ ಪೊಲೀಸರು ಜನರನ್ನು ಬೆನ್ನಟ್ಟುವುದನ್ನು ನೋಡಿರುತ್ತೀರಿ ಆದರೆ ಈ ಮಹಿಳೆಯರು ಪೊಲೀಸರನ್ನೇ ಬೆನ್ನಟ್ಟಿದ್ದಾರೆ.
ಇಬ್ಬರು ಮಹಿಳೆಯರು ಕಾರಿನಲ್ಲಿ ಹೋಗುತ್ತಿರುವಾಗ ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಇಲ್ಲದೇ ಹೋಗುತ್ತಿರುವುದನ್ನು ಕಂಡು ಅವರನ್ನು ಹಿಂಬಾಲಿಸಿದ್ದಾರೆ, ಅಷ್ಟೇ ಅಲ್ಲದೆ ನಿಮ್ಮ ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ.
ಬಳಿಕ ಪೊಲೀಸ್ಗೆ ಸರಿಯಾಗಿ ಇವರು ಏನು ಹೇಳುತ್ತಿದ್ದಾರೆ ಎಂಬುದು ಕೇಳಿಸಿಲ್ಲ, ಯಾವುದಾದರೂ ವಿಳಾಸ ಕೇಳುತ್ತಿರಬಹುದು ಎಂದು ಬೈಕ್ ಅನ್ನು ನಿಧಾನ ಮಾಡಿದ್ದಾರೆ, ಆಗ ಇವರು ಮತ್ತೆ ನಿಮ್ಮ ಹೆಲ್ಮೆಟ್ ಎಲ್ಲಿ ಎಂದು ಜೋರಾಗಿ ಕೇಳಿದ್ದಾರೆ ಆಗ ಪೊಲೀಸ್ ಯಾವ ಉತ್ತರವನ್ನೂ ಕೊಡದೆ ಗಾಡಿ ಚಲಾಯಿಸಿಕೊಂಡು ಮುಂದೆ ಹೋಗಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರು: ಹೆಲ್ಮೆಟ್ ಕಳ್ಳತನ, ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಟ್ವಿಟ್ಟರ್ನಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಆದರೆ ಮಹಿಳೆ ಸ್ವತಃ ಸೀಟ್ಬೆಲ್ಟ್ ಧರಿಸಿದಂತೆ ಕಾಣುತ್ತಿಲ್ಲ ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.
Kalesh b/w a Woman and Police Officer over not wearing a helmet pic.twitter.com/msuGVbnPmA
— Ghar Ke Kalesh (@gharkekalesh) November 8, 2023
ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ, ಇದಕ್ಕೂ ಮುನ್ನ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಇಬ್ಬರು ಪೊಲೀಸರನ್ನು ಇಬ್ಬರು ಮಹಿಳೆಯರು ಹಿಂಬಾಲಿಸಿದ್ದರು. ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದ ಘಟನೆ ವೈರಲ್ ಆಗಿದೆ. ಬಳಿಕ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಸಾವಿರ ರೂ. ದಂಡವನ್ನು ವಿಧಿಸಿ ಚಲನ್ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ