ಹಾಸ್ಟೆಲ್ ಬೇಕು ಎಂಬ ವಿದ್ಯಾರ್ಥಿಗಳ ಬೇಡಿಕೆ ಆಲಿಸಿ ಸಂವಾದ ಕಾರ್ಯಕ್ರಮದಲ್ಲೇ ಅನುದಾನ ಘೋಷಿಸಿದ ಸ್ಮೃತಿ ಇರಾನಿ

|

Updated on: Mar 15, 2024 | 8:05 PM

ಮಾರ್ಚ್ 7 ರಂದು ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪೂರ್ವಭಾವಿ ವಿಧಾನವನ್ನು ಸೂಚಿಸುವ ಬಗ್ಗೆ ಸುಮಾರು 5000 ವಿದ್ಯಾರ್ಥಿನಿಯರೊಂದಿಗೆ ಸ್ಮೃತಿ ಇರಾನಿ ಸಂವಾದ ನಡೆಸಿದ್ದರು. ಈ ವೇಳೆ ವಿದ್ಯಾರ್ಥಿನಿಯರು ಹಾಸ್ಟೆಲ್ ಬೇಕು ಎಂಬ ಬೇಡಿಕೆಯನ್ನು ಸಚಿವರ ಮುಂದಿಟ್ಟಿದ್ದಾರೆ. ಬೇಡಿಕೆ ಸ್ವೀಕರಿಸಿದ ಸಚಿವೆ ತಕ್ಷಣವೇ ಅನುದಾನ ಘೋಷಣೆ ಮಾಡಿದ್ದಾರೆ.

ಹಾಸ್ಟೆಲ್ ಬೇಕು ಎಂಬ ವಿದ್ಯಾರ್ಥಿಗಳ ಬೇಡಿಕೆ ಆಲಿಸಿ ಸಂವಾದ ಕಾರ್ಯಕ್ರಮದಲ್ಲೇ ಅನುದಾನ ಘೋಷಿಸಿದ ಸ್ಮೃತಿ ಇರಾನಿ
ಸ್ಮೃತಿ ಇರಾನಿ - ಗಾರ್ಗಿ ಕಾಲೇಜಿನ ವಿದ್ಯಾರ್ಥಿಗಳು
Follow us on

ದೆಹಲಿ ಮಾರ್ಚ್ 15 : ಭಾರತ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ದೆಹಲಿ ವಿಶ್ವವಿದ್ಯಾನಿಲಯದಲ್ಲಿ (Delhi University) ದಾಖಲಾದ ಹುಡುಗಿಯರು ಮತ್ತು ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್​​ಗಾಗಿ ನಿರ್ಭಯಾ ನಿಧಿಯಡಿ (Nirbhaya Fund)  272 ಕೋಟಿ ರೂ. ಮಂಜೂರು ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ್ ಭಾರತ್ (Viksit Bharat) ಕಲ್ಪನೆಯಲ್ಲಿ, ಇದು ಉದ್ಯೋಗಸ್ಥ ಮಹಿಳೆಯರು ಮತ್ತು ಉನ್ನತ ಶಿಕ್ಷಣ ಪಡೆಯಲು ಬಯಸುವ ಹೆಣ್ಣು ಮಕ್ಕಳನ್ನು ಸಬಲಗೊಳಿಸುತ್ತದೆ. ಈ ಹಾಸ್ಟೆಲ್  ಸುಧಾರಿತ ಭದ್ರತೆ, ಸಿಸಿಟಿವಿ ಕಣ್ಗಾವಲು ಮತ್ತು ಲಿಂಗ-ಸೂಕ್ಷ್ಮ ಸೌಲಭ್ಯಗಳೊಂದಿಗೆ 1,000 ಹಾಸಿಗೆಗಳನ್ನು ಹೊಂದಿರುತ್ತದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಈ ಪ್ರಯತ್ನವನ್ನು ಶ್ಲಾಘಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಈ ಉಪಕ್ರಮವು ಉನ್ನತ ಶಿಕ್ಷಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಹೆಚ್ಚಿನ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು. “ಲಿಂಗ-ಸೂಕ್ಷ್ಮ ಸೌಲಭ್ಯಗಳು ಮತ್ತು ವರ್ಧಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ಅತ್ಯಾಧುನಿಕ ವಸತಿ ಸೌಕರ್ಯಗಳು ನಾರಿಶಕ್ತಿ ಅಭಿವೃದ್ಧಿ ಹೊಂದಲು ಮತ್ತು ಉತ್ಕೃಷ್ಟಗೊಳಿಸಲು ವಾತಾವರಣವನ್ನು ಒದಗಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಅನುದಾನ ಘೋಷಿಸಿದ ಸ್ಮೃತಿ ಇರಾನಿ

ಮಾರ್ಚ್ 7 ರಂದು ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪೂರ್ವಭಾವಿ ವಿಧಾನವನ್ನು ಸೂಚಿಸುವ ಬಗ್ಗೆ ಸುಮಾರು 5000 ವಿದ್ಯಾರ್ಥಿನಿಯರೊಂದಿಗೆ ಸ್ಮೃತಿ ಇರಾನಿ ಸಂವಾದ ನಡೆಸಿದ್ದು ಈ ಸಂವಾದದಲ್ಲಿ ಅವರು ಅನುದಾನ ಘೋಷಿಸಿದ್ದಾರೆ. ದೆಹಲಿ ವಿಶ್ವವಿದ್ಯಾನಿಲಯವು ಭಾರತದಲ್ಲಿನ ಉನ್ನತ ಶ್ರೇಣಿಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ದೀರ್ಘಕಾಲದವರೆಗೆ ವಿದ್ಯಾರ್ಥಿನಿಯರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ. ಕ್ಯಾಂಪಸ್ ಒಳಗೆ ಮತ್ತು ಹೊರಗೆ ವಿದ್ಯಾರ್ಥಿನಿಯರು ಕಿರುಕುಳ ಮತ್ತು ಹಲ್ಲೆಯ ಘಟನೆಗಳನ್ನು ಎದುರಿಸಿದ್ದಾರೆ. ಭಾರತದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಮಹಿಳೆಯರಿಗೆ ಸುರಕ್ಷಿತ ಸ್ಥಳವನ್ನು ಸೃಷ್ಟಿಸಲು ಸಮಗ್ರ ಕ್ರಮಗಳನ್ನು ತೆಗೆದುಕೊಳ್ಳುವ ತುರ್ತು ಅಗತ್ಯವನ್ನು ಇದು ಎತ್ತಿ ತೋರಿಸಿದೆ. ಸ್ಮೃತಿ ಇರಾನಿಯವರ ನಿರ್ಭಯಾ ನಿಧಿಯ ಅನುದಾನದ ಘೋಷಣೆಯು ಅಂತಹ ಸಮಸ್ಯೆಗಳು/ಕಳವಳಗಳನ್ನು ಪರಿಹರಿಸುವಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಅನುದಾನ ಘೋಷಿಸಿದ ಸ್ಮೃತಿ ಇರಾನಿ, ಮಹಿಳೆಯರು ತಮ್ಮ ಕನಸುಗಳನ್ನು ಅಭದ್ರತೆ ಮತ್ತು ಸುರಕ್ಷತೆಯ ಕಾಳಜಿಯ ಅಡೆತಡೆಗಳಿಲ್ಲದೆ ಮುಂದುವರಿಸಲು ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ.

ಸ್ಮೃತಿ ಇರಾನಿ ಟ್ವೀಟ್


ಸಚಿವಾಲಯವು ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ಯೋಜನೆಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲಾಗುವುದು. ಪ್ರತಿಯೊಂದೂ 500 ಸುಸಜ್ಜಿತ ವಸತಿಗಳನ್ನು ಒಳಗೊಂಡಿರುತ್ತದೆ. ಹಾಸ್ಟೆಲ್ 1000 ಹಾಸಿಗೆಗಳನ್ನು ಹೊಂದಿದ್ದು, ವ್ಯಾಪಕ ಶ್ರೇಣಿಯ ವರ್ಧಿತ ಭದ್ರತಾ ವೈಶಿಷ್ಟ್ಯಗಳು ಮತ್ತು ಲಿಂಗ-ಸೂಕ್ಷ್ಮ ಸೌಲಭ್ಯಗಳನ್ನು ಹೊಂದಿರುತ್ತವೆ.

ಇದನ್ನೂ ಓದಿ: ಈ ಬಾರಿ ಕೇರಳದಲ್ಲಿ ಕಮಲ ಅರಳಲಿದೆ: ಪತ್ತನಂತಿಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು. ಈ ಉಪಕ್ರಮವು ಉದ್ಯೋಗಸ್ಥ ಮಹಿಳೆಯರು ಮತ್ತು ಉನ್ನತ ಶಿಕ್ಷಣ ಪಡೆಯುವ ಹುಡುಗಿಯರನ್ನು ಸಬಲೀಕರಣಗೊಳಿಸುತ್ತದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಪ್ರತಿಕ್ರಿಯೆ


ನಾವು ಆ ಕಾರ್ಯಕ್ರಮದ ಭಾಗವಾಗಿದ್ದೆವು. 400 ವಿದ್ಯಾರ್ಥಿಗಳು ನಮ್ಮ ಕಾಲೇಜಿನಿಂದ ಇದ್ದರು. ಗಾರ್ಗಿಯಲ್ಲಿ 5000 ಪ್ಲಸ್ ವಿದ್ಯಾರ್ಥಿಗಳಿದ್ದಾರೆ. ನಮಗೆ ಇಲ್ಲಿ ಹಾಸ್ಟೆಲ್ ಬೇಕು. ಸ್ಮತಿ ಇರಾನಿ ಅವರ ಭಾಷಣ ತುಂಬಾ ಚೆನ್ನಾಗಿತ್ತು, ಸ್ಫೂರ್ತಿದಾಯಕ ಆಗಿತ್ತು. ಹಾಸ್ಟೆಲ್ ಬೇಕು ಎಂದು ನಾವು ಬೇಡಿಕೆಯೊಡ್ಡಿದ್ದು ವಾರದ ಒಳಗೆ ನಮಗೆ ಹಾಸ್ಟೆಲ್ ಸಿಕ್ಕಿದೆ. ಇದು ಖುಷಿಯ ಸಂಗತಿ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ