ಜಲಾವೃತ ರಸ್ತೆಯಲ್ಲಿ ಹೋಗುವಾಗ ವಿದ್ಯುತ್ ಪ್ರವಹಿಸಿ ಯುಪಿಎಸ್​ಸಿ ಆಕಾಂಕ್ಷಿ ಸಾವು

|

Updated on: Jul 24, 2024 | 12:44 PM

ಜಲಾವೃತ ರಸ್ತೆಯಲ್ಲಿ ಹೋಗುವಾಗ ವಿದ್ಯುತ್ ಪ್ರವಹಿಸಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC) ಆಕಾಂಕ್ಷಿ ಸಾವನ್ನಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಪಟೇಲ್ ನಗರ ಮೆಟ್ರೋ ನಿಲ್ದಾಣದ ಬಳಿ ಮಳೆಯ ನಂತರ ಅಪಘಾತ ಸಂಭವಿಸಿದೆ. ಪವರ್ ಜಿಮ್ ಬಳಿ ವಿದ್ಯುತ್ ಪ್ರವಾಹದಿಂದಾಗಿ ಕಬ್ಬಿಣದ ಗೇಟ್‌ಗೆ ಸಿಲುಕಿರುವ ವ್ಯಕ್ತಿಯ ಬಗ್ಗೆ ರಂಜಿತ್ ನಗರ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ.

ಜಲಾವೃತ ರಸ್ತೆಯಲ್ಲಿ ಹೋಗುವಾಗ ವಿದ್ಯುತ್ ಪ್ರವಹಿಸಿ ಯುಪಿಎಸ್​ಸಿ ಆಕಾಂಕ್ಷಿ ಸಾವು
ಸಾವು
Follow us on

ಜಲಾವೃತ ರಸ್ತೆಯಲ್ಲಿ ಹೋಗುವಾಗ ವಿದ್ಯುತ್ ಪ್ರವಹಿಸಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC) ಆಕಾಂಕ್ಷಿ ಸಾವನ್ನಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಪಟೇಲ್ ನಗರ ಮೆಟ್ರೋ ನಿಲ್ದಾಣದ ಬಳಿ ಮಳೆಯ ನಂತರ ಅಪಘಾತ ಸಂಭವಿಸಿದೆ. ಪವರ್ ಜಿಮ್ ಬಳಿ ವಿದ್ಯುತ್ ಪ್ರವಾಹದಿಂದಾಗಿ ಕಬ್ಬಿಣದ ಗೇಟ್‌ಗೆ ಸಿಲುಕಿರುವ ವ್ಯಕ್ತಿಯ ಬಗ್ಗೆ ರಂಜಿತ್ ನಗರ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ.

ಯುವಕ ಸಹಾಯಕ್ಕಾಗಿ ಅಂಗಲಾಚಿದ್ದಾನೆ ಆದರೆ ಯಾರೂ ಕೂಡ ಅಲ್ಲಿ ಹೋಗುವ ಸ್ಥಿತಿಯಲ್ಲಿರಲಿಲ್ಲ. ಮೃತ ಯುವಕನನ್ನು ಉತ್ತರ ಪ್ರದೇಶದ ಗಾಜಿಪುರ ನಿವಾಸಿ 26 ವರ್ಷದ ನೀಲೇಶ್​ ರೈ ಎಂದು ಗುರುತಿಸಲಾಗಿದೆ.

ಪೊಲೀಸರು ಸ್ಥಳಕ್ಕಾಗಮಿಸಿದಾಗ, ವಿದ್ಯುತ್ ಪ್ರವಹಿಸುತ್ತಿದ್ದ ಕಬ್ಬಿಣದ ಗೇಟ್‌ನಿಂದ ವ್ಯಕ್ತಿಗೆ ವಿದ್ಯುದಾಘಾತ ಉಂಟಾಗಿರುವುದನ್ನು ಅವರು ಕಂಡುಕೊಂಡರು. ಗೇಟ್​ನಲ್ಲಿ ಕರೆಂಟಿತ್ತು, ಅಲ್ಲೇ ನೀರು ನಿಂತಿತ್ತು, ಟೀ ಕುಡಿದು ವಾಪಸಾಗುತ್ತಿದ್ದಾಗ ನೀರಿನಿಂದ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ತಮಗೂ ಪ್ರವಹಿಸುವ ಭೀತಿಯಿಂದ ಜನರು ನಿಂತಲ್ಲೇ ನಿಂತಿದ್ದರು.

ರಸ್ತೆಯು ನೀರಿನಿಂದ ತುಂಬಿದ್ದು ಅಪಾಯಕಾರಿ ಪರಿಸ್ಥಿತಿಗಳನ್ನು ಹೆಚ್ಚಿಸಿದೆ. ಸಂತ್ರಸ್ತೆಯನ್ನು ನೀಲೇಶ್ ರೈ ಎಂದು ಗುರುತಿಸಲಾಗಿದ್ದು, ಅವರನ್ನು ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಮತ್ತಷ್ಟು ಓದಿ: ವಿದ್ಯುತ್ ತಂತಿ ಸ್ಪರ್ಶಿಸಿ ಆನೆಗಳ‌ ಸಾವಿನ ಬಗ್ಗೆ ಹೈಕೋರ್ಟ್ ಕಳವಳ: ಪಿಐಎಲ್​ ದಾಖಲು, ಎಸ್ಕಾಂಗಳಿಗೆ ನೋಟಿಸ್

ಭಾರತೀಯ ನ್ಯಾಯ್ ಸಂಹಿತೆಯ ಸೆಕ್ಷನ್ 106 (1) (ನಿರ್ಲಕ್ಷ್ಯದ ಕಾರಣ ಸಾವು) ಮತ್ತು 285 (ಸಾರ್ವಜನಿಕ ಮಾರ್ಗ ಅಥವಾ ನ್ಯಾವಿಗೇಷನ್ ಮಾರ್ಗದಲ್ಲಿ ಅಪಾಯ ಅಥವಾ ಅಡಚಣೆ) ಅಡಿಯಲ್ಲಿ ರಂಜಿತ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ