ವಿದ್ಯುತ್ ತಂತಿ ಸ್ಪರ್ಶಿಸಿ ಆನೆಗಳ ಸಾವಿನ ಬಗ್ಗೆ ಹೈಕೋರ್ಟ್ ಕಳವಳ: ಪಿಐಎಲ್ ದಾಖಲು, ಎಸ್ಕಾಂಗಳಿಗೆ ನೋಟಿಸ್
ವಿದ್ಯುತ್ ತಂತಿ ಸ್ಪರ್ಶಿಸಿ ಆನೆಗಳ ಸಾವಿನ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು ಎಲ್ಲ ಎಸ್ಕಾಂಗಳಿಗೆ ಸಿಜೆ N.V.ಅಂಜಾರಿಯಾ, ನ್ಯಾ.ಕೆ.ವಿ.ಅರವಿಂದ್ರಿದ್ದ ಪೀಠದಿಂದ ನೋಟಿಸ್ ನೀಡಲಾಗಿದೆ. ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಅಶ್ವತ್ಥಾಮ ಆನೆ ಸಾವಿನ ಪತ್ರಿಕಾ ವರದಿ ಆಧರಿಸಿ ಪಿಐಎಲ್ ದಾಖಲಿಸಲಾಗಿದೆ.
ಬೆಂಗಳೂರು, ಜುಲೈ 19: ವಿದ್ಯುತ್ ತಂತಿ ಸ್ಪರ್ಶಿಸಿ ಆನೆಗಳ (Elephant) ಸಾವಿನ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಅಶ್ವತ್ಥಾಮ ಆನೆ ಸಾವಿನ ಪತ್ರಿಕಾ ವರದಿ ಆಧರಿಸಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಿಸಿಕೊಂಡು ಎಲ್ಲ ಎಸ್ಕಾಂಗಳಿಗೆ ಸಿಜೆ ಎನ್ವಿ ಅಂಜಾರಿಯಾ, ನ್ಯಾ.ಕೆ.ವಿ.ಅರವಿಂದ್ರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ.
ಕೆಳಚಾಚಿದ ವಿದ್ಯುತ್ ತಂತಿಗಳಿಂದ ಆನೆಗಳ ಜೀವಹಾನಿ ಉಂಟಾಗುತ್ತಿವೆ. ಹಾಗಾಗಿ ಆನೆಗಳ ಸಾವು ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಆಗಸ್ಟ್ 12 ರೊಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಅಶ್ವತ್ಥಾಮ ದುರಂತ ಅಂತ್ಯ
ನಾಗರಹೊಳೆ ಅರಣ್ಯ ಪ್ರದೇಶದ ಗಡಿಯಲ್ಲಿ ಹಾಕಲಾಗಿದ್ದ ಸೋಲಾರ್ ವಿದ್ಯುತ್ ತಂತಿ ಬೇಲಿಯನ್ನು ದಸರಾ ಆನೆ ಅಶ್ವತ್ಥಾಮ ತುಳಿದು ದುರಂತ ಅಂತ್ಯಕಂಡಿತ್ತು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಭೀಮನಕಟ್ಟೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಇತ್ತೀಚೆಗೆ ಘಟನೆ ನಡೆದಿತ್ತು.
ಇದನ್ನೂ ಓದಿ: Mysuru Dasara Elephant : ಅರ್ಜುನ ಸಾವಿನ ಬೆನ್ನಲ್ಲೇ ಮತ್ತೊಂದು ಮೈಸೂರು ದಸರಾ ಆನೆ ದುರಂತ ಸಾವು
ಹುಣಸೂರು ಪಿರಿಯಾಪಟ್ಟಣ ಗಡಿ ಭಾಗದಲ್ಲಿರುವ ಆನೆ ಶಿಬಿರದಲ್ಲಿದ್ದ 38 ವರ್ಷದ ಅಶ್ವತ್ಥಾಮ ಆನೆ, ಎರಡು ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು.
ತೆರೆದ ಬಾವಿಗೆ ಬಿದ್ದು ಕಾಡಾನೆಯೊಂದು ದಾರುಣ ಸಾವನ್ನಪ್ಪಿದ್ದ ಘಟನೆ ಕೊಡಗಿನಲ್ಲಿ ಇತ್ತೀಚೆಗೆ ನಡೆದಿತ್ತು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಆಹಾರ ಅರಸಿ ಕಾಡಿನಿಂದ ಬಂದಿದ್ದ ಕಾಡಾನೆ ಕೆದಮುಳ್ಳೂರು ಗ್ರಾಮದ ಬಿದ್ದಪ್ಪ ಎಂಬುವರಿಗೆ ಸೇರಿದ್ದ ಬಾವಿಗೆ ಬಿದ್ದಿತ್ತು.
ಇದನ್ನೂ ಓದಿ: ಹಾಸನ: ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆಗೆ ಸೆರೆ ಕಾರ್ಯಾಚರಣೆ ಮತ್ತೆ ಆರಂಭ
ಇದು ನೂತನ ಭಾವಿಯಾಗಿದ್ದು ಈಗಷ್ಟೇ ಕಾಮಗಾರಿ ನಡೆಯುತ್ತಿತ್ತು. ಇನ್ನೂ ರಿಂಗ್ ಅಳವಡಿಸಿರಲಿಲ್ಲ. ಆದರೆ ತಡ ರಾತ್ರಿ ಆಹಾರ ಅರಸಿ ಬಂದ ಗಂಡಾನೆಯೊಂದು ಬಾವಿ ಕಾಣದೆ ಅದರೊಳಗೆ ಬಿದ್ದಿತ್ತು. ಕಿರಿದಾದ ಬಾವಿಯೊಳಗೆ ಬಿದ್ದು ಯಾತನೆ ಪಟ್ಟು ಸಾವನ್ನಪ್ಪಿತ್ತು. ಸ್ಥಳಕ್ಕೆ ಆರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. ಆನೆಯ ಕಳೇಬರ ಮೇಲೆತ್ತಲು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:35 pm, Fri, 19 July 24