ಪಂಡರಾಪುರದ ವಿಠ್ಠಲನ ದರ್ಶನಕ್ಕೆ ಹೋಗಿದ್ದ ಕರ್ನಾಟಕದ ಭಕ್ತರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿರುವ ಪಂಡರಾಪುರ ವಿಠ್ಠಲನ ದರ್ಶನ ಮುಗಿಸಿ ವಾಪಸ್ ಬರುವಾಗ ಕರ್ನಾಟಕದ ಬೆಳಗಾವಿ ಜಿಲ್ಲೆಯ ಭಕ್ತರ ಮೇಲೆ ಹಲ್ಲೆ ದುಷ್ಕರ್ಮಿಗಳಿಂದ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಹಲ್ಲೆ ಮಾಡಿದವರ ವಿರುದ್ಧ ಮಿರಜ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಕ್ತರಿಂದ ದೂರು ನೀಡಲಾಗಿದೆ.

ಪಂಡರಾಪುರದ ವಿಠ್ಠಲನ ದರ್ಶನಕ್ಕೆ ಹೋಗಿದ್ದ ಕರ್ನಾಟಕದ ಭಕ್ತರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಪಂಡರಾಪುರದ ವಿಠ್ಠಲನ ದರ್ಶನಕ್ಕೆ ಹೋಗಿದ್ದ ಕರ್ನಾಟಕದ ಭಕ್ತರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 19, 2024 | 9:57 PM

ಬೆಳಗಾವಿ, ಜುಲೈ 19: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಡರಾಪುರಕ್ಕೆ (Pandharpur Vitthal) ಹೋಗಿದ್ದ ಮೂವರು ವಿಠ್ಠಲ​ನ ಭಕ್ತರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ (attack) ಮಾಡಿರುವಂತಹ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ತುರುಮುರಿ‌ ಗ್ರಾಮದ 35ಕ್ಕೂ ಹೆಚ್ಚು ‌ಜನರು ಪಂಡರಾಪುರ ಪ್ರವಾಸ ಕೈಗೊಂಡಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಬರುವಾಗ ಹಲ್ಲೆ ಮಾಡಿದ್ದಾರೆ. ಭಕ್ತ ಸುರೇಶ್​ಕುಮಾರ್ ವಾರಕರಿ, ಪರಶುರಾಮ್ ಜಾಧವ್, ಲಾರಿ ಚಾಲಕ ಪರಶುರಾಮ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದವರ ಮೇಲೆ ಮಿರಜ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಂಡರಾಪುರದಿಂದ ವಾಪಸ್ ಆಗುವಾಗ 35ಕ್ಕೂ ಹೆಚ್ಚು ಭಕ್ತರು ಲಾರಿ ಹತ್ತಿದ್ದಾರೆ. ಮಿರಜ್ ಮಾರ್ಗವಾಗಿ ಬೆಳಗಾವಿಗೆ ಬರುತ್ತಿದ್ದಾಗ ಟ್ರಕ್ ದಾರಿ ತಪ್ಪಿ ಮಹಾರಾಷ್ಟ್ರದ ಮಾಳಗಾಂವ್ ಗ್ರಾಮಕ್ಕೆ ತಲುಪಿದೆ. ದಾರಿ ಸಿಗದೆ ಕಿರಿದಾದ ದಾರಿಯಲ್ಲಿ ಲಾರಿ ಸಾಗುವಾಗ ಸ್ಥಳೀಯ ಕಾರು ಚಾಲಕರಿಂದ ತಗಾದೆ ತೆಗೆದಿದ್ದು, ಲಾರಿಯಲ್ಲಿ ಪ್ರಯಾಣಿಸುತ್ತಿದ್ದರ ಮೇಲೆ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ, ತಬ್ಬಲಿಯಾದ ಮಕ್ಕಳು

ಸದ್ಯ ಮಹಾರಾಷ್ಟ್ರ ಮಿರಜ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ರಸ್ತೆ ಮಧ್ಯದಲ್ಲೇ ಮಕ್ಕಳು, ವಯಸ್ಸಾದವರನ್ನ ತಡೆದು ನಿಲ್ಲಿಸಿದ ಸ್ಥಳೀಯರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಭಾರಿ ಮಳೆಗೆ ಕುಸಿದ ಗೋಡೆ: ಬಾಣಂತಿ ಸಾವು

ಮೈಸೂರು: ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ಬಾಣಂತಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ. ಹೇಮಲತಾ(22) ಮೃತ ಬಾಣಂತಿ. ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿದು ಅವಘಡ ಸಂಭವಿಸಿದೆ.

ಜ್ಯುವೆಲರಿಯಲ್ಲಿ ಕಳ್ಳತನ ಮಾಡಿದ್ದ ಸಿಬ್ಬಂದಿಯ ಬಂಧನ

ಬೆಂಗಳೂರು: ನಗರದ ಸ್ವಸ್ಥಿಕ್ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಸಿಬ್ಬಂದಿಯನ್ನು ಸಂಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಪ್ರಮೋದ್​ಕುಮಾರ್ ಜೈನ್(45) ಬಂಧಿತ ಆರೋಪಿ.

ಇದನ್ನೂ ಓದಿ: ಯಾದಗಿರಿಯಲ್ಲಿ ಮೂವರ ಕಗ್ಗೊಲೆ: ರಾಜಿ ಪಂಚಾಯ್ತಿ ಬಳಿಕ ಪತ್ನಿ, ಅತ್ತೆ, ಮಾವನನ್ನ ಹತ್ಯೆಗೈದ

ಇತ್ತೀಚೆಗೆ ಶಾಪ್​​ನ ಮಾಲೀಕ ಊರಿಗೆ ತೆರಳಿದ್ದಾಗ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿ. ಬಂಧಿತನಿಂದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಜಪ್ತಿ ಮಾಡಲಾಗಿದೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.