ಯಾದಗಿರಿಯಲ್ಲಿ ಮೂವರ ಕಗ್ಗೊಲೆ: ರಾಜಿ ಪಂಚಾಯ್ತಿ ಬಳಿಕ ಪತ್ನಿ, ಅತ್ತೆ, ಮಾವನನ್ನ ಹತ್ಯೆಗೈದ

ಅವರಿಬ್ಬರ ಪರಿಚಯ ಫೇಸ್ಬುಕ್​ನಲ್ಲಿ ಆಗಿತ್ತು. ಪರಿಚಯ ಪ್ರೀತಿಯಾಗಿ ಬದಲಾಗಿದೆ. ಪ್ರೀತಿ-ಪ್ರೇಮ ಎಂದು ಇದ್ದವರು ಮನೆಯವರಿಗೆ ಒಪ್ಪಿಸಿ ಮದುವೆಯಾಗಿದ್ದರು. ವಿವಾಹವಾಗಿ ಒಂದು ವರ್ಷ ಸುಖವಾಗಿದ್ದರು, ಸಾಲದ್ದಕ್ಕೆ ಒಂದು ಮಗು ಕೂಡ ಆಗಿದೆ. ಆದ್ರೆ, ಒಂದೆ ವರ್ಷದಲ್ಲಿ ಪ್ರೇಮ ವಿವಾಹದಲ್ಲಿ ಬಿರುಕು ಬಿಟ್ಟಿದ್ದು, ಪತ್ನಿಗೆ ಪತಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದಾದ ಬಳಿ ಪತ್ನಿ, ಕುಟುಂಬಸ್ಥರು ಠಾಣೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡ್ತಾಯಿದ್ದಾನೆ ಎಂದು ದೂರ ನೀಡಲು ಮುಂದಾಗಿದ್ರು. ಆದರೆ ರಾಜೀ ಪಂಚಾಯತಿ ಆಗಿ ಮನೆಗೆ ಹೋಗಿದ್ರು. ಇದೆ ವೇಳೆ ಪಾಪಿ ಪತಿ ಪತ್ನಿ, ಅತ್ತೆ ಹಾಗೂ ಮಾವನನ್ನ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಯಾದಗಿರಿಯಲ್ಲಿ ಮೂವರ ಕಗ್ಗೊಲೆ: ರಾಜಿ ಪಂಚಾಯ್ತಿ ಬಳಿಕ ಪತ್ನಿ, ಅತ್ತೆ, ಮಾವನನ್ನ ಹತ್ಯೆಗೈದ
ರಾಜಿ ಪಂಚಾಯ್ತಿ ಬಳಿಕ ಪತ್ನಿ, ಅತ್ತೆ, ಮಾವನನ್ನ ಹತ್ಯೆಗೈದ
Follow us
ಅಮೀನ್​ ಸಾಬ್​
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 18, 2024 | 6:15 PM

ಯಾದಗಿರಿ, ಜು.18: ಯಾದಗಿರಿ ತಾಲೂಕಿನ ಸೈದಾಪುರ(Saidapur) ಬಳಿ ಪತ್ನಿ, ಅತ್ತೆ ಹಾಗೂ ಮಾವನನ್ನು ಕಬ್ಬಿಣದ ರಾಡ್ ಹಾಗೂ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಪತ್ನಿ ಅನ್ನಪೂರ್ಣ(25), ಕವಿತಾ(45), ಬಸವರಾಜಪ್ಪ(52) ಕೊಲೆಯಾದವರು. ಮೃತ ಮೂವರು ದಾವಣಗೆರೆ ಮೂಲದವರಾಗಿದ್ದು, ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ಆರೋಪಿ ನವೀನ್ ಮತ್ತು ಅನ್ನಪೂರ್ಣ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಜೊತೆಗೆ ದಂಪತಿಗೆ ಒಂದು ಹೆಣ್ಣುಮಗು ಕೂಡ ಇದೆ.

ಒಂದು ವರ್ಷದಿಂದ ತವರು ಮನೆಯಲ್ಲಿದ್ದ ಪತ್ನಿ ಅನ್ನಪೂರ್ಣ

ಎಲ್ಲವೂ ಚೆನ್ನಾಗಿದೆ ಎನ್ನುವಷ್ಟರಲ್ಲಿ ಪತಿ ನವೀನ್​ ಕಿರುಕುಳ ಕೊಡಲು ಆರಂಭಿಸಿದ್ದಾನೆ. ಇದರಿಂದ ನೊಂದ ಅನ್ನಪೂರ್ಣ  ತವರು ಮನೆಗೆ ಹೋಗಿದ್ದಳು. ಕಳೆದ 1 ವರ್ಷದಿಂದ ತವರು ಮನೆಯಲ್ಲಿದ್ದ ಪತ್ನಿ ಅನ್ನಪೂರ್ಣಳನ್ನು ನಿನ್ನೆ(ಜು.17) ಮತ್ತೆ ಜೊತೆಯಲ್ಲಿ ಇರೋಣ ಎಂದು ಕರೆದಿದ್ದಾನೆ. ನ್ಯಾಯ ಪಂಚಾಯ್ತಿ ಮಾಡಿ ಮತ್ತೆ ಜೊತೆಗಿರಲು ಮುಂದಾಗಿದ್ದ ಹಿನ್ನಲೆ ಮಗಳು ಅನ್ನಪೂರ್ಣಳನ್ನು ಪತಿ ಮನೆಗೆ ಬಿಡಲು ಪೋಷಕರು ಬಂದಿದ್ದರು.

ಇದನ್ನೂ ಓದಿ:ಬೆಂಗಳೂರು: 20 ವರ್ಷಗಳ ನಂತರ ಕೊಲೆ ಆರೋಪಿ ಅರೆಸ್ಟ್, ಅಂದು ಆರೋಪಿ ಇಂದು ಸಿನಿಮಾ ನಿರ್ದೇಶಕ!

ರಾಜಿ ಪಂಚಾಯ್ತಿ ಬಳಿಕ ಅತ್ತೆ-ಮಾವನನ್ನು ಬಿಡಲು ಹೋಗಿದ್ದ ಅಳಿಯ

ಇನ್ನು ರಾಜಿ ಪಂಚಾಯತಿ ಬಳಿಕ ಅತ್ತೆ, ಮಾವನನ್ನು ಬಸ್ ನಿಲ್ದಾಣಕ್ಕೆ ಬಿಡಲು ಕಾರಿನಲ್ಲಿ ನವೀನ್, ಅನ್ನಪೂರ್ಣ ಹೋಗಿದ್ದರು. ಈ ವೇಳೆ ಅದೇನಾಯಿತು ಏನೋ?  ಕಬ್ಬಿಣದ ರಾಡ್ ಹಾಗೂ ಚಾಕುವಿನಿಂದ ಇರಿದು ಮೂವರನ್ನು ನವೀನ್ ಕೊಲೆಗೈದಿದ್ದಾನೆ. ನಂತರ ಜೋಳದಡಗಿ ಗ್ರಾಮದ ಬಳಿ ಮೂವರ ಶವ ಎಸೆದಿದ್ದ. ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪತ್ನಿ ಅನ್ನಪೂರ್ಣ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Thu, 18 July 24