ದಶಕಗಳ ಸ್ನೇಹಿತರ ಮಧ್ಯೆ ಹಣಕಾಸಿನ ವ್ಯವಹಾರ; ಶ್ರೀರಾಂಪುರದ ಕುಮಾರ್​ನನ್ನ ಕೊಲೆ ಮಾಡಿದವ ಅಂದರ್​

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಸಂಖ್ಯೆಗಳು ಹೆಚ್ಚುತ್ತಲ್ಲೇ ಇದೆ. ಕೂತು ಮಾತನಾಡಿ ಬಗೆಹರಿಸಿಕೊಳ್ಳುವ ವಿಷಯದಲ್ಲೂ ಕೂಡ ಕೊಲೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಅದರಂತೆ ನಿನ್ನೆ(ಜು.08) ನಡೆದಿದ್ದ ಶ್ರೀರಾಂಪುರ(Srirampura) ದ ಕುಮಾರ್ ಎಂಬಾತನ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಶಕಗಳ ಸ್ನೇಹಿತರ ಮಧ್ಯೆ ಹಣಕಾಸಿನ ವ್ಯವಹಾರ; ಶ್ರೀರಾಂಪುರದ ಕುಮಾರ್​ನನ್ನ ಕೊಲೆ ಮಾಡಿದವ ಅಂದರ್​
ಹತ್ಯೆಯಾದ ಶ್ರೀರಾಂಪುರ ಕುಮಾರ್​, ಆರೋಪಿ ದಯಾಳ್​
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 09, 2024 | 3:17 PM

ಬೆಂಗಳೂರು, ಜು.09: ನಗರದ ಶ್ರೀರಾಂಪುರ(Srirampura) ದ ಕುಮಾರ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀರಾಂಪುರ ಪೊಲೀಸರು(Police) ಕೊಲೆ ಆರೋಪಿ ದಯಾಳ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನು ಹತ್ಯೆ ಕುರಿತು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದ್ದು, ದಶಕಗಳ ಸ್ನೇಹಿತರ ಮಧ್ಯೆ ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿರುವುದು ಖಚಿತವಾಗಿದೆ.

ಆಗಿದ್ದೇನು?

ಕುಮಾರ್ ಹಾಗೂ ದಯಾಳ್ 15 ವರ್ಷದ ಸ್ನೇಹಿತರು, ಕುಮಾರ್ ಹೋಟೆಲ್ ಬ್ಯುಸಿನೆಸ್ ಮಾಡಿಕೊಂಡಿದ್ದರೆ, ದಯಾಳ್ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ. ಇಬ್ಬರ ಮಧ್ಯೆ ಸ್ನೇಹವಿದ್ದ ಹಿನ್ನಲೆ 10 ವರ್ಷದಿಂದ ಕುಮಾರ್​ಗೆ 50 ಲಕ್ಷ ಹಣವನ್ನು ಹಂತ ಹಂತವಾಗಿ ದಯಾಳ್ ಕೊಡುತ್ತಾ ಬಂದಿದ್ದಾನೆ. ಇತ್ತೀಚೆಗೆ ದಯಾಳ್ ಕೂಡ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ. ಈ ಹಿನ್ನಲೆ ನಾನು ಕೊಟ್ಟ ಹಣವನ್ನು ವಾಪಾಸ್​ ಕೊಡುವಂತೆ ಕುಮಾರ್​ನನ್ನ ಕೇಳುತ್ತಿದ್ದ. ಆದರೆ, ಕುಮಾರ್ ಹಣ ನೀಡಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿ ನಿನ್ನೆ(ಜು.08) ಪಾರ್ಟಿ ಮಾಡೋಣ ಎಂದು ಕುಮಾರ್​ನನ್ನ ಕರೆದೊಯ್ದಿದ್ದ ದಯಾಳ್, ಗಲಾಟೆ ನಡೆದು ಕುಮಾರ್​ನನ್ನು ಕೊಲೆ ಮಾಡಿದ್ದಾನಂತೆ.

ಇದನ್ನೂ ಓದಿ:Crime News: ಪ್ರೇಮಿಯ ಮೇಲಿನ ಕೋಪಕ್ಕೆ 7 ವರ್ಷದ ಮಗುವನ್ನು ಗೋಡೆಗೆ ಬಡಿದು ಕೊಲೆ

ಮೂರು ಸ್ಟೀಲ್ ಅಂಗಡಿಯ ಶಟರ್ಸ್ ಮುರಿದು ಕಳ್ಳತನ

ಹುಬ್ಬಳ್ಳಿ: ಛೋಟಾ ಬಾಂಬೆ ಹುಬ್ಬಳ್ಳಿಯಲ್ಲಿ ಸರಣಿ‌ ಕಳ್ಳತನವಾಗಿದ್ದು, ಹುಬ್ಬಳ್ಳಿಯ ಮಹಾವೀರ ಗಲ್ಲಿಯಲ್ಲಿನ ಮೂರು ಸ್ಟೀಲ್ ಅಂಗಡಿಯ ಶಟರ್ಸ್ ಮುರಿದು ಖದೀಮರು ಕನ್ನ ಹಾಕಿದ್ದಾರೆ. ಅಲ್ಲಿದ್ದ ಸುಮಾರು ಒಂದು‌ ಲಕ್ಷ ಹಣ ದೋಚಿ ಪರಾರಿಯಾಗಿದ್ದು, ಸರಣಿ‌ ಅಂಗಡಿ ಕಳ್ಳತನ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ತಡರಾತ್ರಿ ಎರಡು ಗಂಟೆ ಸುಮಾರಿಗೆ ಮಂಕಿ ಕ್ಯಾಪ್ ,ಮುಖಕ್ಕೆ ಮಾಸ್ಕ್ ಹಾಕಿಕೊಂಡು ಶಟರ್ಸ್ ಮುರಿದು, ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಹುಬ್ಬಳ್ಳಿಯ ಶಹರ ಠಾಣೆ, ಕಮರಿ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Tue, 9 July 24

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ