ಸ್ಕೂಲ್​ ಬಸ್​ಗಳಲ್ಲಿ ತೆರಳುವ ಮಕ್ಕಳೂ ಸೇಫ್ ಅಲ್ಲ! ಮದ್ಯಪಾನ ಮಾಡಿ ಬಸ್ ಚಲಾಯಿಸಿದ 23 ಚಾಲಕರ ವಿರುದ್ಧ ಕೇಸ್

ಸಂಚಾರ ನಿಯಮ ಉಲ್ಲಂಘನೆಗಳ ಬಗ್ಗೆ ಇದೀಗ ಕರ್ನಾಟಕ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಣ್ಣು ಕುಕ್ಕುವ ಎಲ್ಇಡಿ ಲೈಟ್ ಮತ್ತು ದ್ವಿಚಕ್ರ ವಾಹನ ಸವಾರರಿಂದ ಆಗುತ್ತಿರುವ ನಿಯಮ ಉಲ್ಲಂಘನೆಗಳ ವಿರುದ್ಧ ಕಳೆದ ಕೆಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು, ಇದೀಗ ಶಾಲಾ ಬಸ್ಗಳ ಚಾಲಕರ ಡ್ರಂಕ್ ಅಂಡ್ ಡ್ರೈವ್ ವಿರುದ್ಧ ಕಾರ್ಯಾಚರಣೆ ನಡೆಸಿ ಕೇಸ್ ಜಡಿದಿದ್ದಾರೆ.

ಸ್ಕೂಲ್​ ಬಸ್​ಗಳಲ್ಲಿ ತೆರಳುವ ಮಕ್ಕಳೂ ಸೇಫ್ ಅಲ್ಲ! ಮದ್ಯಪಾನ ಮಾಡಿ ಬಸ್ ಚಲಾಯಿಸಿದ 23 ಚಾಲಕರ ವಿರುದ್ಧ ಕೇಸ್
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Jul 09, 2024 | 4:03 PM

ಬೆಂಗಳೂರು, ಜುಲೈ 9: ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಶಾಲಾ ವಾಹನಗಳ 23 ಚಾಲಕರ ವಿರುದ್ಧ ಬೆಂಗಳೂರು ಟ್ರಾಫಿಕ್ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ. ಬೆಳಗ್ಗೆ 7 ರಿಂದ 9 ರವರೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 3016 ಶಾಲಾ ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, ಮದ್ಯಪಾನ ಪರೀಕ್ಷೆಯಲ್ಲಿ 23 ಚಾಲಕರ ವರದಿ ಪಾಸಿಟಿವ್ ಎಂದು ಕಂಡುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಪ್ಪಿತಸ್ಥರೆಂದು ಕಂಡು ಬಂದಿರುವ ಚಾಲಕರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ತಿಳಿಸಿದ್ದಾರೆ.

ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅವರ ಚಾಲನಾ ಪರವಾನಗಿಯನ್ನು ಆಯಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಶೇಷ ಕಾರ್ಯಾಚರಣೆ ಸಮಯದಲ್ಲಿ, 11 ವಾಹನಗಳು ಫಿಟ್ನೆಸ್ ಪ್ರಮಾಣಪತ್ರವಿಲ್ಲದೆ ಸಂಚರಿಸುತ್ತಿರುವುದು ಕಂಡುಬಂದಿವೆ. ಇವುಗಳನ್ನು ಮುಂದಿನ ಅಗತ್ಯ ಕ್ರಮಕ್ಕಾಗಿ ಸಂಬಂಧಿಸಿದ ಆರ್​ಟಿಒಗಳಿಗೆ ಹಸ್ತಾಂತರಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಇತರ ರಸ್ತೆ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಂತಹ ವಿಶೇಷ ಕಾರ್ಯಾಚರಣೆಗಳು ನಿಯಮಿತವಾಗಿ ಮುಂದುವರೆಯಲಿವೆ ಎಂದು ಅನುಚೇತ್ ಹೇಳಿದ್ದಾರೆ.

ಪೋಷಕರ ಆಕ್ರೋಶ

ಮದ್ಯಪಾನ ಮಾಡಿ ಶಾಲಾ ವಾಹನಗಳ ಚಾಲನೆ ಮಾಡುವ ಬಗ್ಗೆ ಚಾಲಕರ ವಿರುದ್ಧ ಪೋಷಕರಿಂದ ಆಕ್ರೋಶ ವ್ಯಕ್ತವಾಗಿದೆ. ಕುಡದು ಚಾಲನೆ ಮಾಡುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಶಾಲಾ ಆಡಳಿತ ಮಂಡಳಿಗಳು ಇತಂಹ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇತಂಹ ಚಾಲಕರಿಗೆ ಶಾಲಾ ವಾಹನ ಓಡಿಸಲು ಅವಕಾಶ ನೀಡಬಾರದು ಎಂದು ಪೋಷಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಣ್ಣುಕುಕ್ಕುವ ಎಲ್​ಇಡಿ ಲೈಟ್ ವಿರುದ್ಧ ಕಾರ್ಯಾಚರಣೆ ಶುರು; ಕರ್ನಾಟಕದಾದ್ಯಂತ 1500ಕ್ಕೂ ಹೆಚ್ಚು ಪ್ರಕರಣ ದಾಖಲು

ರಸ್ತೆ ನಿಯಮ ಉಲ್ಲಂಘನೆ ವಿರುದ್ಧ ಬೆಂಗಳೂರು ಮತ್ತು ಕರ್ನಾಟಕದ ಸಂಚಾರ ಪೊಲೀಸರು ಕಳೆದ ಕೆಲವು ದಿನಗಳಿಂದ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಣ್ಣು ಕುಕ್ಕುವ ಎಲ್​ಇಡಿ ಲೈಟ್ ಅಳವಡಿಕೆ, ದ್ವಿಚಕ್ರ ವಾಹನ ಸವಾರರಿಂದ ಆಗುತ್ತಿರುವ ನಿಯಮ ಉಲ್ಲಂಘನೆ, ಮದ್ಯಪಾನ ಮಾಡಿ ವಾಹನ ಚಾಲನೆ ಇತ್ಯಾದಿಗಳ ವಿರುದ್ಧ ಟ್ರಾಫಿಕ್ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಅಂಬಾನಿ ಪುತ್ರನ ಮದುವೆಗೆ ಎಷ್ಟು ಚಂದ ರೆಡಿಯಾಗಿ ಬಂದ್ರು ನೋಡಿ ಜೆನಿಲಿಯಾ
ಅಂಬಾನಿ ಪುತ್ರನ ಮದುವೆಗೆ ಎಷ್ಟು ಚಂದ ರೆಡಿಯಾಗಿ ಬಂದ್ರು ನೋಡಿ ಜೆನಿಲಿಯಾ
ಕಣ್ಣಾಮುಚ್ಚಾಲೆ ಆಟದ ನಂತರ ಬೆಂಗಳೂರಿನ ನಾನಾ ಭಾಗಗಳಲ್ಲಿ ಧಾರಾಕಾರ ಮಳೆ!
ಕಣ್ಣಾಮುಚ್ಚಾಲೆ ಆಟದ ನಂತರ ಬೆಂಗಳೂರಿನ ನಾನಾ ಭಾಗಗಳಲ್ಲಿ ಧಾರಾಕಾರ ಮಳೆ!
ಅನಂತ್ ಅಂಬಾನಿ ಮದುವೆಗೆ ಕುಟುಂಬ ಸಮೇತ ಬಂದ ರಜನಿಕಾಂತ್​; ಸಿಕ್ಕಾಪಟ್ಟೆ ಜೋಶ್
ಅನಂತ್ ಅಂಬಾನಿ ಮದುವೆಗೆ ಕುಟುಂಬ ಸಮೇತ ಬಂದ ರಜನಿಕಾಂತ್​; ಸಿಕ್ಕಾಪಟ್ಟೆ ಜೋಶ್
ಹೋಟೆಲ್ ಮೆಟ್ಟಿಲು ಮೇಲೆ ಕೂತು ಶಾಲಾ ಮಕ್ಕಳಿಗೆ ಜಾಮೂನು ತಿನ್ನಿಸಿದ ಲಾಡ್
ಹೋಟೆಲ್ ಮೆಟ್ಟಿಲು ಮೇಲೆ ಕೂತು ಶಾಲಾ ಮಕ್ಕಳಿಗೆ ಜಾಮೂನು ತಿನ್ನಿಸಿದ ಲಾಡ್
ಮದುವೆ ದಿಬ್ಬಣದ ವೇಳೆ ಡೋಲು ವಾದ್ಯಕ್ಕೆ ಡ್ಯಾನ್ಸ್ ಮಾಡಿದ ನೀತಾ ಅಂಬಾನಿ
ಮದುವೆ ದಿಬ್ಬಣದ ವೇಳೆ ಡೋಲು ವಾದ್ಯಕ್ಕೆ ಡ್ಯಾನ್ಸ್ ಮಾಡಿದ ನೀತಾ ಅಂಬಾನಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲ ಆಡಳಿತ ಕಛೇರಿ ಮುಂದೆ ಸತ್ತ ಹಾವು ಇಟ್ಟು ಧರಣಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲ ಆಡಳಿತ ಕಛೇರಿ ಮುಂದೆ ಸತ್ತ ಹಾವು ಇಟ್ಟು ಧರಣಿ
ನೀರು ಬಿಡಲ್ಲ ಅಂತ ಸಿದ್ದರಾಮಯ್ಯ ಸರ್ಕಾರ ಖಚಿತ ನಿಲುವು ತೆಗೆದುಕೊಳ್ಳುತ್ತೋ?
ನೀರು ಬಿಡಲ್ಲ ಅಂತ ಸಿದ್ದರಾಮಯ್ಯ ಸರ್ಕಾರ ಖಚಿತ ನಿಲುವು ತೆಗೆದುಕೊಳ್ಳುತ್ತೋ?
ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ಅಶೋಕ್ , ಅಶ್ವಥ್ ಅನುಸರಿಸಿದ ವಿಧಾನ ಇದು!
ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ಅಶೋಕ್ , ಅಶ್ವಥ್ ಅನುಸರಿಸಿದ ವಿಧಾನ ಇದು!
ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತು ಉಪಹಾರ ಸೇವಿಸಿದ ಸಂತೋಷ ಲಾಡ್
ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತು ಉಪಹಾರ ಸೇವಿಸಿದ ಸಂತೋಷ ಲಾಡ್
ಯಡಿಯೂರಪ್ಪ, ವಿಜಯೇಂದ್ರ ಸತ್ಯ ಹರಿಶ್ಚಂದ್ರನ ವಂಶಸ್ಥರೇ? ಮೊಹಮ್ಮದ್ ನಲಪಾಡ್
ಯಡಿಯೂರಪ್ಪ, ವಿಜಯೇಂದ್ರ ಸತ್ಯ ಹರಿಶ್ಚಂದ್ರನ ವಂಶಸ್ಥರೇ? ಮೊಹಮ್ಮದ್ ನಲಪಾಡ್