ಬೆಂಗಳೂರು: 20 ವರ್ಷಗಳ ನಂತರ ಕೊಲೆ ಆರೋಪಿ ಅರೆಸ್ಟ್, ಅಂದು ಆರೋಪಿ ಇಂದು ಸಿನಿಮಾ ನಿರ್ದೇಶಕ!

ಇಪ್ಪತ್ತು ವರ್ಷಗಳ ಹಿಂದೆ ಒಂದು ಹಾರ್ಡ್ ಕೋರ್ ರೌಡಿಜಂಗೆ ಸಂಬಂಧಿಸಿದ ಕೊಲೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿ ಸದ್ಯ ಇಪತ್ತು ವರ್ಷಗಳ ನಂತರ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಇದರಲ್ಲಿ ಅಚ್ಚರಿ ಪಡುವ ಸಂಗತಿ ಎಂದರೆ ಅಂದು ಕೊಲೆ ಕೇಸ್ ಆರೋಪಿ ಆಗಿದ್ದವರು ಇಂದು ಸಿನಿಮಾ ನಿರ್ದೇಶಕನಾಗಿದ್ದಾರೆ.

ಬೆಂಗಳೂರು: 20 ವರ್ಷಗಳ ನಂತರ ಕೊಲೆ ಆರೋಪಿ ಅರೆಸ್ಟ್, ಅಂದು ಆರೋಪಿ ಇಂದು ಸಿನಿಮಾ ನಿರ್ದೇಶಕ!
ಸಾಂದರ್ಭಿಕ ಚಿತ್ರ
Follow us
Prajwal Kumar NY
| Updated By: ಆಯೇಷಾ ಬಾನು

Updated on: Jul 18, 2024 | 2:56 PM

ಬೆಂಗಳೂರು, ಜುಲೈ.18: ಅದು ಬೆಂಗಳೂರು ನಗರದಲ್ಲಿ ಆಗಷ್ಟೆ ಶುರುವಾಗುತ್ತಿದ್ದ ಮತ್ತು ದೊಡ್ಡ ಮಟ್ಟದ ದುಡ್ಡು ಬರುತಿದ್ದ ಒಂದು ದಂಧೆ. ಅದುವೆ ಕೇಬಲ್ ದಂಧೆ. ಈ ದಂಧೆಗಾಗಿ ನಡೆದಿದ್ದ ಒಂದು ನಟೋರಿಯಸ್ ರೌಡಿಯ ಕೊಲೆಯಲ್ಲಿ (Murder) ಭಾಗಿಯಾಗಿದ್ದ ಮತ್ತು ಕೊಲೆಯ ನಂತರ ಜೈಲು ಸೇರಿ ಬೇಲ್ ಮೇಲೆ ಹೊರಬಂದು ಕಳೆದ ಇಪತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ಸಮಾಜದಲ್ಲಿ ಸಿನಿಮಾ ನಟ ಮತ್ತು ನಿರ್ದೇಶಕ ಎಂಬ ಹಣೆಪಟ್ಟಿಯಲ್ಲಿ ಜೀವನ ನಡೆಸುತಿದ್ದ ಗಜೇಂದ್ರ ಅಲಿಯಾಸ್ ಗಜ ಎಂಬಾತನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತ ಪುಟಾಣಿ ಪವರ್ ಮತ್ತು ರುದ್ರ ಎಂಬ ಸಿನಿಮಾ ನಿರ್ದೇಶನ ಮಾಡಿದ್ದಾರೆ.

2000 ಹಾಗು 2004ರ ಸಮಯದಲ್ಲಿ ಕೇಬಲ್ ಟಿವಿ ಶುರುವಾಗಿತ್ತು. ಕೇಬಲ್ ಕನೆಕ್ಷನ್ ಎಂಬುದು ಕೆಲವು ಏರಿಯಾದಲ್ಲಿ ಬಲವಾಗಿದ್ದವರ ಕೈನಲ್ಲಿ ಇತ್ತು. ಈ ಸಮಯದಲ್ಲಿ ವಿಲ್ಸನ್ ಗಾರ್ಡನ್ ಭಾಗದಲ್ಲಿ ಕೇಬಲ್ ವ್ಯವಹಾರದಲ್ಲಿ ಇದ್ದವರು ಇವತ್ತಿನ ಮಾಜಿ ಕಾರ್ಪೊರೇಟರ್ ಚಂದ್ರಪ್ಪ. ಕೊಲೆಯಾಗಿರುವ ರೌಡಿ ಶೀಟರ್ ಲಕ್ಕಸಂದ್ರ ವಿಜಿ ಅಂಡ್ ಟೀಮ್. ಮತ್ತೊಂದು ತಂಡ ಅಂದ್ರೆ ಅದು ರೌಡಿ ಕೊರಂಗು ಮತ್ತು ಅವನ ಶಿಷ್ಯ ಕೊತ್ತಾ ರವಿ. ಆಗ ಕೊತ್ತಾ ರವಿ ಹೆಚ್ಚು ವ್ಯವಹಾರದಲ್ಲಿ ಭಾಗಿಯಾಗುತಿದ್ದ ಅನ್ನೊ ಕಾರಣಕ್ಕೆ ಆತನ ಕೊಲೆ ಮಾಡಲು ಚಂದ್ರಪ್ಪ, ಲಕ್ಕಸಂದ್ರ ವಿಜಿ ಅಲಿಯಾಸ್ ಕರೆಬಲ್ ವಿಜಿ ಅಂಡ್ ಟೀಮ್ ಪ್ಲಾನ್ ಮಾಡುತ್ತೆ.

ಇದನ್ನೂ ಓದಿ: ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆ ಹಣ ವಂಚನೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್​​

ಆದಾದ ಮೇಲೆ 2004ರಲ್ಲಿ ಕೊತ್ತ ರವಿಯನ್ನು ಹೊಡೆದು ಉರುಳಿಸುತ್ತಾರೆ. ಆ ಕೇಸ್​ನಲ್ಲಿ ಎಂಟನೇ ಆರೋಪಿ ಆಗಿದ್ದವರೇ ಗಜೇಂದ್ರ ಅಲಿಯಾಸ್ ಗಜ. ಕೊಲೆ ಬಳಿಕ ಜೈಲು ಸೇರಿ ನಂತರ ಬೇಲ್ ಪಡೆದು ಹೊರ ಬಂದವರು ಸಿನಿಮಾ ನಟ ಮತ್ತೆ ಸಹ ನಿರ್ದೇಶಕ, ಕೊನೆಗೆ ನಿರ್ದೇಶಕನ ಕೆಲಸ ಮಾಡಿಕೊಂಡು ಕನ್ನಡ ಮತ್ತು ತಮಿಳು ಸಿನಿಮಾ ರಂಗದಲ್ಲಿ ಇದ್ದರು. ಆದರೆ ಈಗ ಸಿಸಿಬಿ ಪೊಲೀಸರು ಗಜೇಂದ್ರ ಅವರನ್ನು ಅರೆಸ್ಟ್ ಮಾಡಿದ್ದಾರೆ.

ನಗರದಲ್ಲಿ ಹೀಗೆ ಹಲವಾರು ವರ್ಷಗಳಿಂದ ಪೊಲೀಸ್ ಕೈಗೆ ಸಿಗದೆ ಮತ್ತು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವವರನ್ನು ಸಿಸಿಬಿ ಅಧಿಕಾರಿಗಳು ಹುಡುಕಿ ಹುಡುಕಿ ಅರೆಸ್ಟ್ ಮಾಡುವ ಕೆಲಸ ಮಾಡ್ತಿದ್ದಾರೆ. ತಲೆಮರಿಸಿಕೊಂಡಿದ್ದ ಗಜೇಂದ್ರ ಈಗ ಮತ್ತೆ ಜೈಲು ಸೇರಿದ್ದಾನೆ. ಅದು ಸಹ ಇಪತ್ತು ವರ್ಷಗಳ ನಂತರ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ