ಮುದ್ದೆ ಮಾಡುವ ನೆಪದಲ್ಲಿ ಮನೆಗೆ ಕರೆಯಿಸಿಕೊಂಡು ಯುವತಿ ಮೇಲೆ ಅತ್ಯಾಚಾರ: ಓರ್ವ ಅರೆಸ್ಟ್

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಗ್ರಾಮದಲ್ಲಿ 19 ವರ್ಷದ ಯುವತಿ ಮೇಲೆ ವ್ಯಕ್ತಿ ಓರ್ವನಿಂದ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದೆ. 20‌‌ ದಿನಗಳ ಹಿಂದೆಯೇ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. ಓರ್ವನನ್ನು ಬಂಧಿಸಿದ್ದು, ಮತ್ತೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.

ಮುದ್ದೆ ಮಾಡುವ ನೆಪದಲ್ಲಿ ಮನೆಗೆ ಕರೆಯಿಸಿಕೊಂಡು ಯುವತಿ ಮೇಲೆ ಅತ್ಯಾಚಾರ: ಓರ್ವ ಅರೆಸ್ಟ್
ಮುದ್ದೆ ಮಾಡುವ ನೆಪದಲ್ಲಿ ಮನೆಗೆ ಕರೆಯಿಸಿಕೊಂಡು ಯುವತಿ ಮೇಲೆ ಅತ್ಯಾಚಾರ: ಓರ್ವ ಅರೆಸ್ಟ್
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 18, 2024 | 3:17 PM

ರಾಮನಗರ, ಜುಲೈ 18: ಹಸಿವಾಗುತ್ತಿದೆ, ನನಗೆ ಮುದ್ದೆ (Ragi mudde) ಮಾಡುವುದಕ್ಕೆ ಬರಲ್ಲ ಎಂದು ಕರೆದು 19 ವರ್ಷದ ಯುವತಿ (Girl) ಮೇಲೆ ವ್ಯಕ್ತಿ ಓರ್ವನಿಂದ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಬಿಡದಿ ಹೋಬಳಿಯ ಗ್ರಾಮದಲ್ಲಿ 20‌‌ ದಿನಗಳ ಹಿಂದೆ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಕ್ಕದ ಮನೆಯ ಚಂದ್ರು ಎನ್ನುವವರ ಮನೆಯಲ್ಲಿ ಘಟನೆ ನಡೆದಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಗೋಪಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಆರೋಪಿ ಮುದ್ದೆ ಮಾಡುವ ನೆಪದಲ್ಲಿ ಯುವತಿಯನ್ನು ಮನೆಗೆ ಕರೆದು ಬಾಗಿಲು ಹಾಕಿ ಒತ್ತಾಯ ಪೂರ್ವಕವಾಗಿ ಬಟ್ಟೆ ಕಳಚಿದ್ದು, ಅತ್ಯಾಚಾರದ ವಿಡಿಯೋ ಕೂಡ ಮಾಡಿದ್ದಾನೆ. ನಗ್ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಲವ್​, ಸೆಕ್ಸ್​ ದೋಖಾ: ಇಬ್ಬರು ಯುವತಿಯರಿಗೆ ಮೋಸ, ಮತ್ತೊಬ್ಬಳೊಂದಿಗೆ ಯುವಕ ಪರಾರಿ

ಸದ್ಯ ಬಂಧಿತ ಆರೋಪಿ ಗೋಪಿ ಮೊಬೈಲ್​ ಅನ್ನು ವಶಕ್ಕೆ ಪಡೆದಿರುವ ಬಿಡದಿ ಪೊಲೀಸರು ರಿಟ್ರೀವ್ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ. ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಗೆ ಕಿರುಕುಳ ಆರೋಪ: ಪುರಸಭೆ ಅಧ್ಯಕ್ಷೆ ಪತಿಗೆ ಥಳಿತ

ಗದಗ: ಪುರಸಭೆ ಪ್ರಭಾರಿ ಅಧ್ಯಕ್ಷೆ‌ ಪತಿಗೆ ಮಹಿಳೆಯರು ಥಳಿಸಿದ ಘಟನೆ ಇತ್ತೀಚೆಗೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ. ಪುರಸಭೆ ಪ್ರಭಾರಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಪತಿ ಅಂದಪ್ಪ ಉಳ್ಳಾಗಡ್ಡಿಗೆ ಮಹಿಳೆಯರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡು ಕಪಾಳಮೋಕ್ಷ ಮಾಡಿದ್ದರು. ಕಾರಣ ಓರ್ವ ಕುಟುಂಬದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದ ಹಿನ್ನೆಲೆ ಮಹಿಳೆಯರು ಥಳಿಸಿ ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಇನ್ಸ್ಟಾಗ್ರಾಂ ರೀಲ್ಸ್ ಮಾಡುತ್ತ ಪ್ರೀತಿ, ಊರು ಬಿಟ್ಟು ಮದುವೆಯಾಗಿದ್ದ ಗರ್ಭಿಣಿ ಮಹಿಳೆ ಸಾವು; ಆರೋಪಿಗಳಿಗಾಗಿ ಹುಟುಕಾಟ

ಮನೆಗೆ ಕರೆಯಿಸಿ ಕಪಾಳಮೋಕ್ಷ ಮಾಡಿ ಮಹಿಳೆಯರು ಚಳಿಬಿಡಿಸಿದ್ದರು. ಮಾಡಬಾರದ್ದು ಮಾಡಿದ ಕಾಮುಕ ಇಂಗು ತಿಂದ ಮಂಗನಂತೆ ಕುಳಿತಿದ್ದರು. ಮಹಿಳೆಯರ ಸಿಟ್ಟು ಹೆಚ್ಚಾಗುತ್ತಿದ್ದಂತೆ ಕಂಪೌಂಡ ಹಾರಿ ಮನೆಗೆ ಓಡಿ ಬಂದಿದ್ದರು. ಮನೆಗೆ ಬಂದ ಅಂದಪ್ಪನಿಗೆ ಸಹೋದರಿಯರು ಕೂಡ ಥಳಿಸಿದ್ದರು.

ಜಾಗದ ವಿಚಾರಕ್ಕೆ ಗಲಾಟೆ: ಮಹಿಳೆಯರ ಮೇಲೆ ಹಲ್ಲೆ ಆರೋಪ

ಮೈಸೂರು: ಸಾಲಿಗ್ರಾಮ ತಾಲೂಕಿನ ಬಾಚಳ್ಳಿ ಗ್ರಾಮದಲ್ಲಿ ಜಾಗದ ವಿಚಾರಕ್ಕೆ ದೇವಿರಮ್ಮ ಮತ್ತು ನಾಗೇಶ್​​ ಕುಟುಂಬಗಳ ಮಧ್ಯೆ ಗಲಾಟೆ ಉಂಟಾಗಿದ್ದು, ಮಹಿಳೆಯರ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ನಾಗೇಶ್, ಚಂದ್ರಹಾಸ, ಪ್ರಕಾಶ್, ರೂಪಾ, ಚೇತನ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.

ಗಲಾಟೆಯಲ್ಲಿ ದೇವಿರಮ್ಮ ಮತ್ತು ಸುನಂದಾಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಜಾಗದಲ್ಲಿ ನಾಗೇಶ್ ಕುಟುಂಬ ತಂಬಾಕು ಹದಕ್ಕೆ ಮುಂದಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನಾಗೇಶ್​​ ಕುಟುಂಬದಿಂದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.