ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಸಜೀವವಾಗಿ ದಹಿಸಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆತ ಪತ್ನಿ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದು ಆಕೆ ಸುಟ್ಟ ಗಾಯಗಳಿಂದಾಗಿ ಸಾವನ್ನಪ್ಪಿದ್ದಾಳೆ. ಸೋಮವಾರ ಬೇಗಂಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ (ರೋಹಿಣಿ) ಜಿಎಸ್ ಸಿಧು ತಿಳಿಸಿದ್ದಾರೆ.
ಬೇಗಂಪುರ ಪೊಲೀಸ್ ಠಾಣೆಗೆ ಪೊಲೀಸ್ ಕಂಟ್ರೋಲ್ ರೂಂ (ಪಿಸಿಆರ್) ಕರೆ ಬಂದಿದ್ದು, ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ತಕ್ಷಣ ತಂಡವನ್ನು ಸ್ಥಳಕ್ಕೆ ಕಳುಹಿಸಿ ಎಂದು ಕೇಳಲಾಗಿತ್ತು ಎಂದು ಅಗ್ನಿ ಶಾಮಕ ಸಿಬ್ಬಂದಿ ಹೇಳಿದ್ದರು.
ಪೊಲೀಸ್ ತಂಡವು ಮನೆಗೆ ತಲುಪಿದಾಗ ಮುಖ್ಯ ಗೇಟ್ ಒಳಗಿನಿಂದ ಬೀಗ ಹಾಕಿರುವುದು ಕಂಡುಬಂದಿದೆ. ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಸಿದ್ದು ತಿಳಿಸಿದ್ದಾರೆ. ಮನೆಯನ್ನು ಪರಿಶೀಲಿಸಿದಾಗ, ತೀವ್ರವಾಗಿ ಸುಟ್ಟ ಮಹಿಳೆಯೊಬ್ಬರು ಸ್ಪಂದಿಸದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿ ಹೇಳಿದರು.
ಮತ್ತಷ್ಟು ಓದಿ:ಕಲಬುರಗಿ: ಪ್ರೀತಿ ವಿಚಾರಕ್ಕೆ ಹುಡುಗಿ ಮನೆಯವರಿಂದ ಹಲ್ಲೆ; ಚಿಕಿತ್ಸೆ ಫಲಿಸಿದೇ ಯುವಕ ಸಾವು
ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ತಲುಪಿದಾಗ, ಗಾಯಗೊಂಡ ವ್ಯಕ್ತಿ ಬೇರಾರೂ ಅಲ್ಲ, ಸುಟ್ಟಗಾಯಗಳಿಂದ ಸಾವನ್ನಪ್ಪಿದ ಮಹಿಳೆಯ ಪತಿ ಎಂದು ಸಿದ್ದು ಹೇಳಿದರು. ಗಾಯಗೊಂಡ ಬಾಲಕಿಯೊಬ್ಬಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯ ಪೋಷಕರು ಜಗಳವಾಡಿ ತಂದೆ ತಾಯಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ತಿಳಿಸಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ವ್ಯಕ್ತಿ ಡಿಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ, ಪತ್ನಿ ಎಂಸಿಡಿಯಲ್ಲಿ ಶಿಕ್ಷಕಿಯಾಗಿದ್ದರು. ಆಸ್ತಿ ವಿಷಯವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.
2009ರಲ್ಲಿ ಕಾಂಝಾವಾಲಾ ನಿವಾಸಿ ಜ್ಯೋತಿ ಅವರು ಜಜ್ಜರ್ ನಿವಾಸಿ ರಾಜವೀರ್ ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾದ ಸ್ವಲ್ಪ ಸಮಯದ ನಂತರ, ಜ್ಯೋತಿ ಎಂಸಿಡಿ ಶಾಲೆಯಲ್ಲಿ ಕೆಲಸಕ್ಕೆ ಸೇರಿದರು. ಜ್ಯೋತಿ ಸಹೋದರ ಆಶಿಶ್ ಪೋಲಿಯೋದಿಂದ ಬಳಲುತ್ತಿದ್ದಾರೆ. ದಂಪತಿಗೆ 12 ಹಾಗೂ ಒಂದೂವರೆ ವರ್ಷದ ಮಕ್ಕಳಿದ್ದಾರೆ.
ಜ್ಯೋತಿ ಅವರ ಎಟಿಎಂ ಕಾರ್ಡ್ ಅನ್ನು ಆತನೇ ಇಟ್ಟುಕೊಳ್ಳುತ್ತಿದ್ದ. ಜ್ಯೋತಿ ಅವರ ಹೆಸರಿನಲ್ಲಿ ಖರೀದಿಸಿದ ಆಸ್ತಿಯನ್ನು ತನಗೆ ವರ್ಗಾಯಿಸಬೇಕೆಂದು ಹಠ ಹಿಡಿದಿದ್ದ, ಜ್ಯೋತಿ ಪೋಷಕರ ಮುಂದೆಯೇ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ