Farmers Protest: ಇಂದು ದೆಹಲಿಗೆ ರೈತರ ಮೆರವಣಿಗೆ, ಪೊಲೀಸ್ ಬಿಗಿ ಭದ್ರತೆ
ಶಂಭು ಮತ್ತು ಖಾನೌರಿ ಗಡಿಯಲ್ಲಿ ಬಹುಕಾಲದಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಹಲವು ಬೇಡಿಕೆಗಳಿಗಾಗಿ ಇಂದು ದೆಹಲಿಗೆ ಪಾದಯಾತ್ರೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ರೈಲು-ಮೆಟ್ರೋ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ರೈತ ಸಂಘಟನೆಗಳು ಬುಧವಾರ ದೆಹಲಿಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದವು.
ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಇಂದು ಧರಣಿ ನಿರತ ರೈತರು ದೆಹಲಿಗೆ ಪಾದಯಾತ್ರೆ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ರಾಜಧಾನಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಟಿಕ್ರಿ, ಸಿಂಘು ಮತ್ತು ಘಾಜಿಪುರ ಗಡಿಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ಪಂಜಾಬ್-ಹರಿಯಾಣದ ಶಂಭು ಮತ್ತು ಖಾನೌರಿ ಗಡಿಯಲ್ಲಿ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಂಜಾಬ್ ಮತ್ತು ಹರ್ಯಾಣದ ಗಡಿಯನ್ನು 28 ದಿನಗಳವರೆಗೆ ಮುಚ್ಚಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ನಮ್ಮ ಕಡೆಯಿಂದ ನಾವು ಯಾವುದೇ ತಡೆ ಮಾಡಿಲ್ಲ. ಹರಿಯಾಣದಲ್ಲಿ 70 ಸಾವಿರ ಪಡೆಗಳನ್ನು ಏಕೆ ನಿಯೋಜಿಸಲಾಗಿದೆ? ಯಾಕೆ ನಮ್ಮ ಮೇಲೆ ಅಷ್ಟು ಭಯವೇ? ಎಂದು ಪ್ರಶ್ನಿಸಿದರು.
ಕಾಲ್ನಡಿಗೆ, ರೈಲು ಅಥವಾ ಬಸ್‌ನಲ್ಲಿ ದೆಹಲಿಗೆ ತೆರಳಲು ಇತರ ರಾಜ್ಯಗಳ ರೈತರನ್ನು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಕೇಳಿಕೊಂಡಿದ್ದಾರೆ. ಇದಲ್ಲದೆ ಶಂಭು ಬಾರ್ಡರ್ ಮತ್ತು ಖಾನೌರಿ ಬಾರ್ಡರ್‌ನಲ್ಲಿ ಕುಳಿತ ರೈತರು ಅಲ್ಲಿಯೇ ಕುಳಿತು ಧರಣಿ ನಡೆಸಲಿದ್ದಾರೆ. ಮಾರ್ಚ್ 10 ರಂದು, ನಾವು ಭಾರತದಾದ್ಯಂತ 12 ರಿಂದ 4 ಗಂಟೆಯವರೆಗೆ ರೈಲು ತಡೆ ನಡೆಸಲು ಕೇಳಿಕೊಂಡಿದ್ದೇವೆ ಎಂದು ರೈತರು ಹೇಳಿದ್ದಾರೆ.
ಮತ್ತಷ್ಟು ಓದಿ: Delhi Chalo: ರೈತರ ಪ್ರತಿಭಟನೆ: ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ
1. ಯುನೈಟೆಡ್ ಕಿಸಾನ್ ಮೋರ್ಚಾ ಮತ್ತು ಉತ್ತರ ಪ್ರದೇಶ, ಹರ್ಯಾಣ ಮತ್ತು ಪಂಜಾಬ್‌ನ ಹೆಚ್ಚಿನ ರೈತ ಸಂಘಗಳು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಖಾತರಿಪಡಿಸುವ ಕಾನೂನನ್ನು ಒತ್ತಾಯಿಸಿವೆ. 2. PTI ಪ್ರಕಾರ, ಪ್ರಸಿದ್ಧ ವಿಜ್ಞಾನಿ ಮತ್ತು ಭಾರತದಲ್ಲಿ ಹಸಿರು ಕ್ರಾಂತಿಯ ಪಿತಾಮಹ, M.S. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಒತ್ತಾಯಿಸಲಾಗುತ್ತಿದೆ. 3. ಅಲ್ಲದೆ, ರೈತರು ಕೃಷಿ ಸಾಲ ಮನ್ನಾ ಮತ್ತು ಪೊಲೀಸರು ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. 4. ಇದಲ್ಲದೇ, ಲಖಿಂಪುರಿ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ರೈತರು ಒತ್ತಾಯಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ