ಮನೀಶ್ ಸಿಸೋಡಿಯಾಗೆ ಸಿಬಿಐ ಸಮನ್ಸ್; ಸರಣಿ ಕೊಲೆ ಪ್ರಕರಣ ಬಗ್ಗೆಯೂ ಗಮನ ಹರಿಸಿ ಎಂದು ಕೇಂದ್ರದ ವಿರುದ್ಧ ದೆಹಲಿ ಉಪಮುಖ್ಯಮಂತ್ರಿ ವಾಗ್ದಾಳಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 16, 2022 | 10:17 PM

ಭಾನುವಾರ ಬೆಳಗ್ಗೆ ಮದ್ಯ ನೀತಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಸಿಸೋಡಿಯಾ ಅವರಿಗೆ ನಾಳೆ (ಸೋಮವಾರ) ಹಾಜರಾಗುವಂತೆ ಸಮನ್ಸ್ ನೀಡಿದೆ. ಇದೇ ಮೊದಲ ಬಾರಿಗೆ ಅವರನ್ನು ವಿಚಾರಣೆಗೆ ಕರೆಯಲಾಗುತ್ತಿದೆ

ಮನೀಶ್ ಸಿಸೋಡಿಯಾಗೆ ಸಿಬಿಐ ಸಮನ್ಸ್; ಸರಣಿ ಕೊಲೆ ಪ್ರಕರಣ ಬಗ್ಗೆಯೂ ಗಮನ ಹರಿಸಿ ಎಂದು ಕೇಂದ್ರದ ವಿರುದ್ಧ ದೆಹಲಿ ಉಪಮುಖ್ಯಮಂತ್ರಿ ವಾಗ್ದಾಳಿ
ಮನೀಷ್ ಸಿಸೋಡಿಯಾ
Follow us on

ದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ (liquor policy) ಕೇಂದ್ರೀಯ ತನಿಖಾ ದಳದಿಂದ (CBI) ವಿಚಾರಣೆಗೆ ಸಮನ್ಸ್ ಸಿಕ್ಕಿರುವ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಇತ್ತೀಚೆಗೆ ಸರಣಿ ಕೊಲೆಗಳನ್ನು ಉಲ್ಲೇಖಿಸಿ  ದೆಹಲಿಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಿ ಎಂದು ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ .ದಯವಿಟ್ಟು ಈ ವಿಷಯದ ಬಗ್ಗೆಯೂ ಸ್ವಲ್ಪ ಗಮನ ಹರಿಸಬೇಕೆಂದು ನಾನು ವಿನಂತಿಸುತ್ತೇನೆ  ಎಂದು ಮದ್ಯದ ಪ್ರಕರಣದ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲ ವಿಕೆ ಸಕ್ಸೇನಾ ಅವರಿಗೆ ಸಿಸೋಡಿಯಾ ಭಾನುವಾರ ಪತ್ರವೊಂದನ್ನು ಬರೆದಿದ್ದಾರೆ. ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ದೆಹಲಿಯಲ್ಲಿರುವ ತನ್ನ ಪ್ರತಿನಿಧಿ, ಲೆಫ್ಟಿನೆಂಟ್ ಗವರ್ನರ್ ಮತ್ತು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಈ ಪ್ರಕರಣದ ಮೂಲಕ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. “ಕಳೆದ ಕೆಲವು ದಿನಗಳಿಂದ ಹಲವಾರು ಅತ್ಯಾಚಾರ ಮತ್ತು ಕೊಲೆ ಘಟನೆಗಳು ನಡೆದಿವೆ” ಎಂದು ಮೂರು ಪ್ರಕರಣಗಳನ್ನು ಉಲ್ಲೇಖಿಸಿ ಸಿಸೋಡಿಯಾ ಪತ್ರ ಬರೆದಿದ್ದಾರೆ.

ಅವುಗಳಲ್ಲಿ ಒಂದು 27 ವರ್ಷದ ಯುವಕನ ಸಾವು. ಮೂವರು ವ್ಯಕ್ತಿಗಳಿಂದ ಥಳಿತಕ್ಕೊಳಗಾದ ಯುವಕ ಶನಿವಾರದಂದು ಸಾವಿಗಾಗಿದ್ದನು. ಈ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ದಸರೆಯಂದು 17 ವರ್ಷದ ಯುವಕನಿಗೆ ಚೂರಿ ಇರಿತ, ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಾಗಿ ಡಬಲ್ ಮರ್ಡರ್ ಮತ್ತು ಇತ್ತೀಚೆಗೆ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಶಾಲಾ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಅವರು ಉಲ್ಲೇಖಿಸಿದ್ದಾರೆ.

“ದೆಹಲಿ ಈಗ ಅಪರಾಧಗಳ ರಾಜಧಾನಿಯಾಗಿ ಮಾರ್ಪಟ್ಟಿದೆ ಎಂದು ತೋರುತ್ತದೆ. ಅಪರಾಧಿಗಳಿಗೆ ಕಾನೂನಿನ ಭಯವಿಲ್ಲ. ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಸಂವಿಧಾನವು ನಿಮಗೆ ನೀಡಿದೆ. ದೆಹಲಿ ಪೊಲೀಸರು ನೇರವಾಗಿ ನಿಮಗೆ ವರದಿ ಮಾಡುತ್ತಾರೆ. ದಯವಿಟ್ಟು ಸ್ವಲ್ಪ ಗಮನಹರಿಸಲು ನಾನು ವಿನಂತಿಸುತ್ತೇನೆ. ಇದರಿಂದ ದೆಹಲಿಯ ಜನರಿಗೆ ಸಹಾಯವಾಗುತ್ತದೆ ಎಂದು ಸಿಸೋಡಿಯಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಭಾನುವಾರ ಬೆಳಗ್ಗೆ ಮದ್ಯ ನೀತಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಸಿಸೋಡಿಯಾ ಅವರಿಗೆ ನಾಳೆ (ಸೋಮವಾರ) ಹಾಜರಾಗುವಂತೆ ಸಮನ್ಸ್ ನೀಡಿದೆ. ಇದೇ ಮೊದಲ ಬಾರಿಗೆ ಅವರನ್ನು ವಿಚಾರಣೆಗೆ ಕರೆಯಲಾಗುತ್ತಿದೆ. ಲೆಫ್ಟಿನೆಂಟ್ ಗವರ್ನರ್‌ನಿಂದ ತನಿಖೆಯ ನಂತರ ಆಗಸ್ಟ್‌ನಲ್ಲಿ ಅವರ ಮನೆ ಮೇಲೆ ಏಜೆನ್ಸಿ ದಾಳಿ ನಡೆಸಿತು.
ಗುಜರಾತ್‌ನಲ್ಲಿನ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಬಿಜೆಪಿ ಭಯ ಹೊಂದಿರುವುದರಿಂದ ಸಿಸೋಡಿಯಾ ಅವರನ್ನು ಈಗ ಬಂಧಿಸುವ ಸಾಧ್ಯತೆ ಇದೆ ಎಂದು ಎಎಪಿ ಹೇಳಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಎಎಪಿಯ ಕಾರ್ಯಕ್ಕೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬಿಜೆಪಿಯ ಪ್ರತೀಕಾರವೇ ಮದ್ಯದ ಪ್ರಕರಣ ಎಂದು ಎಎಪಿ ಹೇಳಿದೆ.

ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಿಸೋಡಿಯಾ ಹೇಳಿದ್ದಾರೆ. ಸಿಬಿಐ ನನ್ನ ಮನೆಯ ಮೇಲೆ 14 ಗಂಟೆಗಳ ಕಾಲ ದಾಳಿ ಮಾಡಿದೆ, ಅದರಿಂದ ಏನೂ ಹೊರಬರಲಿಲ್ಲ, ಅವರು ನನ್ನ ಬ್ಯಾಂಕ್ ಲಾಕರ್ ಅನ್ನು ಹುಡುಕಿದರು. ಅಲ್ಲಿ ಏನೂ ಸಿಗಲಿಲ್ಲ, ಅವರಿಗೆ ನನ್ನ ಗ್ರಾಮದಲ್ಲಿ ಏನೂ ಸಿಗಲಿಲ್ಲ, ಈಗ ಅವರು ನನ್ನನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಸಿಬಿಐ ಕೇಂದ್ರ ಕಚೇರಿಗೆ ಕರೆದಿದ್ದಾರೆ. ನಾನು ಹೋಗುತ್ತೇನೆ, ತನಿಖೆಯ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ .