AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಎಲ್ಲ ನಾಯಿಗಳಿಗೂ ಮಾಸ್ಕ್​ ಕಡ್ಡಾಯ, ಪಿಟ್​ಬುಲ್ ಸೇರಿ ಮೂರು ನಾಯಿ ತಳಿಗಳಿಗೆ ನಿಷೇಧ

ಸಾರ್ವಜನಿಕ ಸ್ಥಳಗಳಿಗೆ ನಾಯಿಗಳನ್ನು ಕರೆತರುವಾಗ ಬಲೆಯಂಥ ಮಾಸ್ಕ್ ತೊಡಿಸಿರಬೇಕು. ಸಾಕು ನಾಯಿಗಳು ಯಾರಿಗಾದರೂ ಕಚ್ಚಿದರೆ ಮಾಲೀಕರಿಗೆ ದುಬಾರಿ ದಂಡ ವಿಧಿಸಲಾಗುವುದು ಎಂದು ಪಾಲಿಕೆಯು ಎಚ್ಚರಿಸಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಎಲ್ಲ ನಾಯಿಗಳಿಗೂ ಮಾಸ್ಕ್​ ಕಡ್ಡಾಯ, ಪಿಟ್​ಬುಲ್ ಸೇರಿ ಮೂರು ನಾಯಿ ತಳಿಗಳಿಗೆ ನಿಷೇಧ
ಗಾಜಿಯಾಬಾದ್​ನಲ್ಲಿ ಪಿಟ್​ಬುಲ್ ನಾಯಿ ಕಡಿತದಿಂದ ಗಾಯಗೊಂಡಿರುವ ಮಕ್ಕಳು (ಎಡ ಮತ್ತು ಬಲಚಿತ್ರ).
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Oct 17, 2022 | 7:48 AM

Share

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್​ ಮುನಿಸಿಪಲ್ ಕಾರ್ಪೊರೇಷನ್​ನಲ್ಲಿ (GMC) ಇತ್ತೀಚೆಗೆ ನಾಯಿಗಳು ದಾಳಿ ಮಾಡುವ, ಕಂಡಕಂಡವರಿಗೆ ಕಚ್ಚುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತವು ನಾಯಿಗಳನ್ನು ಸಾಕುವುದಕ್ಕೆ ಸಂಬಂಧಿಸಿದಂತೆ ಹೊಸದಾಗಿ ನಿಯಮಾವಳಿಗಳನ್ನು ರೂಪಿಸಿದೆ. ಅದರಂತೆ ಹೋರಾಟ ಮನೋಭಾವದ ಪಿಟ್​ಬುಲ್, ರೊಟ್​ವೀಲರ್ ಮತ್ತು ಡೊಗೊ ಅರ್ಜಂಟಿನೊ (Pit Bull, Rottweiler and Dogo Argentino) ತಳಿಗಳನ್ನು ಮನೆಗಳಲ್ಲಿ ಮುದ್ದಿನ ನಾಯಿಗಳಾಗಿ ಸಾಕುವುದಕ್ಕೆ ನಿಷೇಧ ಹೇರಲಾಗಿದೆ.

ಯಾವುದೇ ಕುಟುಂಬವು ಒಂದಕ್ಕಿಂತ ಹೆಚ್ಚು ನಾಯಿಗಳನ್ನು ಸಾಕುವಂತಿಲ್ಲ. ನಾಯಿಗಳನ್ನು ಸಾಕಲು ಕಡ್ಡಾಯವಾಗಿ ಲೈಸೆನ್ಸ್​ ಪಡೆಯಬೇಕು. ಹೊಸ ಲೈಸೆನ್ಸ್​ ವಿತರಣೆ ಪ್ರಕ್ರಿಯೆಯು ನವೆಂಬರ್ 1ರಿಂದ ಆರಂಭವಾಗುತ್ತದೆ. ಹೊಸ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಗಾಜಿಯಾಬಾದ್ ನಗರಾಡಳಿತವು ಸ್ಪಷ್ಟಪಡಿಸಿದೆ. ಎತ್ತರದ ಕಟ್ಟಡಗಳಲ್ಲಿ ವಾಸಿಸುತ್ತಿರುವವರು ನಾಯಿಗಳನ್ನು ಮನೆಗಳಿಂದ ಹೊರಗೆ ಕರೆತರಲು ಕಡ್ಡಾಯವಾಗಿ ಲಿಫ್ಟ್ ಬಳಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳನ್ನು ಕರೆದೊಯ್ಯುವಾಗ ಬಲೆಯಂಥ ಮಾಸ್ಕ್​ ಅನ್ನು ನಾಯಿಗಳ ಬಾಯಿಗೆ ಕಡ್ಡಾಯವಾಗಿ ಹಾಕಿರಬೇಕು ಎಂದು ಸೂಚಿಸಲಾಗಿದೆ.

ಗಾಜಿಯಾಬಾದ್ ನಗರದ ವಿವಿಧೆಡೆ ಇತ್ತೀಚೆಗೆ ನಾಯಿ ಕಡಿತ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿಯಮಗಳನ್ನು ನಗರಾಡಳಿತ ಜಾರಿಗೊಳಿಸಿದೆ. ನಾಯಿಗಳನ್ನು ಸಾಕಿರುವವರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಲಾಗಿದೆ. ಪಿಟ್​ ಬುಲ್, ರೊಟ್​ವೀಲರ್ ಮತ್ತು ಡೊಗೊ ಅರ್ಜೆಂಟಿನೊ ತಳಿಗಳು ಹೋರಾಟದ ಮನೋಭಾವ (ಫೆರೊಶಿಯಸ್) ಹೊಂದಿವೆ. ಈ ತಳಿಗಳನ್ನು ಸಾಕಲು ಯಾರಿಗೂ ಅನುಮತಿ ನೀಡುವುದಿಲ್ಲ. ಸೂಚನೆ ಉಲ್ಲಂಘಿಸಿ ಯಾರೇ ಈ ತಳಿಗಳನ್ನು ಸಾಕಿದರೆ ಅದರಿಂದ ಆಗುವ ಅನಾಹುತಗಳಿಗೆ ಅವರೇ ಜವಾಬ್ದಾರರಾಗುತ್ತಾರೆ. ಈ ಮೂರೂ ತಳಿಗಳನ್ನು ಗಾಜಿಯಾಬಾದ್​ನಲ್ಲಿ ನಿಷೇಧಿಸಲಾಗಿದೆ ಎಂದು ಬಿಜೆಪಿ ನಾಯಕ ಮತ್ತು ಗಾಜಿಯಾಬಾದ್ ಪಾಲಿಕೆಯ ಸದಸ್ಯ ಸಂಜಯ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಈ ಮೂರೂ ತಳಿಗಳನ್ನು ನಿಷೇಧಿಸುವ ಕುರಿತು ಸಿಂಗ್ ಅವರು ಮಂಡಿಸಿದ ನಿಲುವಳಿಯನ್ನು ಮಹಾನಗರ ಪಾಲಿಕೆಯು ಅಂಗೀಕರಿಸಿತು. ‘ಹೊಸದಾಗಿ ಈ ತಳಿಗಳನ್ನು ಸಾಕಲು ಅವಕಾಶವಿಲ್ಲ. ಈಗಾಗಲೇ ಸಾಕುತ್ತಿರುವವರು ತಮ್ಮ ನಾಯಿಗಳಿಗೆ ಎರಡು ತಿಂಗಳ ಒಳಗೆ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು’ ಎಂದು ಗಾಜಿಯಾಬಾದ್ ಮೇಯರ್ ಆಶಾ ಶರ್ಮಾ ಹೇಳಿದ್ದಾರೆ.

‘ನಾಯಿಗಳನ್ನು ಸಾಕಿರುವವರಿಗೆ ಅದು ಮುದ್ದು. ಆದರೆ ನಾಯಿಗಳಿಂದ ಕಡಿಸಿಕೊಂಡು ಗಾಯಗೊಂಡ ಮಕ್ಕಳ ಬಗ್ಗೆಯೂ ನಾವು ಯೋಚಿಸಬೇಕಿದೆ. ಪಿಟ್​ಬುಲ್ ಕಡಿತದಿಂದ ಕುಶ್ ತ್ಯಾಗಿ ಎಂಬ ಮಗುವಿನ ಮುಖಕ್ಕೆ 150 ಹೊಲಿಗೆ ಬಿದ್ದಿದೆ. ಇದಾದ ಕೆಲವೇ ದಿನಗಳಲ್ಲಿ ಇದೇ ತಳಿಯ ಮತ್ತೊಂದು ನಾಯಿ ಇನ್ನೊಂದು ಮಗುವಿನ ಮೇಲೆ ದಾಳಿ ಮಾಡಿತ್ತು. ನಗರ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಮಕ್ಕಳು ನಾಯಿ ಕಡಿತದಿಂದ ಗಾಯಗೊಂಡಿದ್ದಾರೆ’ ಎಂದು ಅವರು ವಿವರಿಸಿದರು.

ಬೀದಿನಾಯಿಗಳಿಗೆ ಆಹಾರ ಕೊಡುವ ಬಗ್ಗೆ ಗಾಜಿಯಾಬಾದ್ ಮಹಾನಗರ ಪಾಲಿಕೆಯು ಯಾವುದೇ ನಿರ್ಬಂಧ ವಿಧಿಸಿಲ್ಲ. ಅವುಗಳಿಗೆ ಆಹಾರ ಕೊಡಲು ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲಾಗುವುದು. ಎಲ್ಲೆಂದರಲ್ಲಿ ಆಹಾರ ಕೊಡುವಂತಿಲ್ಲ ಎಂದು ಪಾಲಿಕೆಯು ಸೂಚಿಸಿದೆ. ಸಾಕು ನಾಯಿ ಕಡಿತದಿಂದ ಯಾವುದೇ ವ್ಯಕ್ತಿಗೆ ತೊಂದರೆಯಾದರೆ ನಾಯಿ ಸಾಕಿದವರಿಗೆ ದಂಡ ವಿಧಿಸಲಾಗುವುದು ಎಂದು ಪಾಲಿಕೆಯು ಎಚ್ಚರಿಸಿದೆ.

ಪಿಟ್​ಬುಲ್ ಮತ್ತು ರೊಟ್​ವೀಲರ್ ನಾಯಿಗಳನ್ನು ಸಾಕುವಂತಿಲ್ಲ ಎಂದು ಈ ಮೊದಲು ಕಾನ್​ಪುರ್ ಮಹಾನಗರ ಪಾಲಿಕೆ ಮತ್ತು ಪಂಚಕುಲ ಮಹಾನಗರ ಪಾಲಿಕೆಗಳು ನಿರ್ಣಯ ಅಂಗೀಕರಿಸಿದ್ದವು.

Published On - 7:48 am, Mon, 17 October 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?