12 ವರ್ಷಗಳಲ್ಲೇ ಗರಿಷ್ಠ ಬೆಲೆಗೆ ತಲುಪಿದ ಗೋಧಿ, ಹಿಟ್ಟಿನ ದರವೂ ಗಗನಕ್ಕೆ

| Updated By: ನಯನಾ ರಾಜೀವ್

Updated on: May 09, 2022 | 10:53 AM

ಬೇಡಿಕೆ ತಕ್ಕಂತೆ ಗೋಧಿ(Wheat )ಹಿಟ್ಟಿನ ಉತ್ಪಾದನೆ ಇಲ್ಲದ ಕಾರಣ, ಗೋಧಿ ಹಿಟ್ಟಿನ ಬೆಲೆ ಗಗನಕ್ಕೇರಿದೆ. ಏಪ್ರಿಲ್​ನಲ್ಲಿ ಒಂದು ಕೆಜಿ ಗೋಧಿ ಹಿಟ್ಟಿ(Wheat Flour)ಗೆ 32.38 ರೂ. ಇತ್ತು ಇದು 2010ರ ಬಳಿಕ ತಲುಪಿದಂತಹ ಅತಿ ಗರಿಷ್ಠ ಬೆಲೆ ಇದಾಗಿದೆ.

12 ವರ್ಷಗಳಲ್ಲೇ ಗರಿಷ್ಠ ಬೆಲೆಗೆ ತಲುಪಿದ ಗೋಧಿ, ಹಿಟ್ಟಿನ ದರವೂ ಗಗನಕ್ಕೆ
ಗೋಧಿ
Follow us on

ಬೇಡಿಕೆ ತಕ್ಕಂತೆ ಗೋಧಿ(Wheat )ಹಿಟ್ಟಿನ ಉತ್ಪಾದನೆ ಇಲ್ಲದ ಕಾರಣ, ಗೋಧಿ ಹಿಟ್ಟಿನ ಬೆಲೆ ಗಗನಕ್ಕೇರಿದೆ. ಏಪ್ರಿಲ್​ನಲ್ಲಿ ಒಂದು ಕೆಜಿ ಗೋಧಿ ಹಿಟ್ಟಿ(Wheat Flour)ಗೆ 32.38 ರೂ. ಇತ್ತು ಇದು 2010ರ ಬಳಿಕ ತಲುಪಿದಂತಹ ಅತಿ ಗರಿಷ್ಠ ಬೆಲೆ ಇದಾಗಿದೆ. ಭಾರತದಲ್ಲಿ ಗೋಧಿ ಉತ್ಪಾದನೆ ಹಾಗೂ ಶೇಖರಣೆ ಕ್ರಮೇಣವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಗೋಧಿ ಹಿಟ್ಟಿನ ಬೆಲೆ ಏರಿಕೆಯಾಗುತ್ತಿದೆ. ವಿದೇಶಗಳಲ್ಲಿಯೂ ಗೋಧಿ ಹಿಟ್ಟಿಗೆ ಬೇಡಿಕೆ ಹೆಚ್ಚಾಗಿದೆ.

ರಾಜ್ಯ ನಾಗರಿಕ ಸರಬರಾಜು ಇಲಾಖೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯಕ್ಕೆ ಈ ಬಗ್ಗೆ ವರದಿ ನೀಡಿದ್ದು, ಮೇ 7 ರಂದು ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆ 32.78 ರೂ. ಇದ್ದು, ಒಂದು ವರ್ಷದ ಹಿಂದೆ ಇದು ಕೆಜಿಗೆ 30.03ರೂ ಇತ್ತು, ಒಂದು ವರ್ಷದಲ್ಲಿ ಬೆಲೆ ಶೇ.9.15ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

ಒಟ್ಟು 156 ದೇಶಗಳ ಡೇಟಾ ಲಭ್ಯವಿದ್ದು, ಪೋರ್ಟ್​ ಬ್ಲೇರ್​ನಲ್ಲಿ ಅತಿ ಹೆಚ್ಚು ಅಂದರೆ ಪ್ರತಿ ಕೆಜಿ ಗೋಧಿ ಹಿಟ್ಟಿಗೆ 59 ರೂ. ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಅತಿ ಕಡಿಮೆ ಅಂದರೆ 22 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಭಾರತದಾದ್ಯಂತ ಜನವರಿ 1ರಿಂದಲೇ ಗೋಧಿ ಹಿಟ್ಟಿನ ಬೆಲೆ ಏರಿಕೆಯಾಗಲು ಶುರುವಾಗಿತ್ತು, ಜನವರಿ 1 ರಿಂದ ಶೇ.5.81ರಷ್ಟು ಬೆಲೆ ಏರಿಕೆಯಾಗಿದೆ. ಏಪ್ರಿಲ್ 2021ರಲ್ಲಿ ಪ್ರತಿ ಕೆಜಿಗೆ 31ರೂ.ಗೆ ಮಾರಾಟ ಮಾಡಲಾಗುತ್ತಿತ್ತು.

ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣ ಗೋಧಿ ಉತ್ಪಾದನೆ ಕುಂಠಿತವಾಗಿದ್ದು, ಗೋಧಿ ಬೆಲೆ ಹೆಚ್ಚಳವಾಗಿದೆ. ಭಾರತದ ಗೋಧಿಗೆ ಬಾರಿ ಬೇಡಿಕೆ ಇದೆ. ಒಂದೆಡೆ ಗೋಧಿ ಉತ್ಪನ್ನದ ಸರಿಯಾದ ಲಾಭದಿಂದ ರೈತರಿಗೆ ಹೆಚ್ಚು ಲಾಭವಾಗುತ್ತಿದ್ದರೆ, ಇನ್ನೊಂದೆಡೆ ಸರ್ಕಾರದ ಬೊಕ್ಕಸದಲ್ಲಿ ಆಹಾರ ಸಬ್ಸಿಡಿ ಕಡಿತದ ಹೊರೆಯಲ್ಲಿ ಭಾರಿ ಕುಸಿತ ಕೂಡ ಉಂಟಾಗಿದೆ.

ವರದಿಯೊಂದರ ಪ್ರಕಾರ ಈ ವರ್ಷ ಎಫ್‌ಸಿಐಯಂತಹ ದೊಡ್ಡ ಸಂಸ್ಥೆಗೆ ಹೆಚ್ಚುವರಿ ಆಹಾರ ಧಾನ್ಯಗಳ ಹೊರೆ ಬೀಳುತ್ತಿದೆ. ಈ ಸಮಯದಲ್ಲಿ ಈ ಎಲ್ಲಾ ಸಂಸ್ಥೆಗಳು ಉತ್ತಮ ಲಾಭವನ್ನು ಪಡೆಯುತ್ತಿವೆ. ಪ್ರಸ್ತುತ, ಗೋಧಿಯ ಸರ್ಕಾರದ ಸಂಗ್ರಹಣೆಯಲ್ಲಿ ಇಳಿಕೆಯಾಗಿದ್ದರೂ, ಸುಮಾರು 40 ಮಿಲಿಯನ್ ಟನ್ ಪಡಿತರ ಆಹಾರ ಧಾನ್ಯ ಸಂಗ್ರಹದಲ್ಲಿ ಉಳಿದಿದೆ.

ಈ ವರ್ಷ ಸರ್ಕಾರಿ ಸಂಗ್ರಹಣೆಯಲ್ಲಿ ಭಾರಿ ದಾಸ್ತಾನು ಸಂಗ್ರಹದ ಗುರಿಯನ್ನು ಸಾಧಿಸಲಾಗಿದೆ. ಸರ್ಕಾರದ ಸಂಗ್ರಹಣೆಯ ಗುರಿ ಸುಮಾರು 44.40 ಮಿಲಿಯನ್ ಟನ್‌ಗಳಾಗಿದ್ದು, ಅದು ಈಗ 19.50 ಮಿಲಿಯನ್ ಟನ್‌ಗಳಿಗೆ ಇಳಿದಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಸರ್ಕಾರದ ಅನುದಾನದಲ್ಲಿ ಸುಮಾರು 60 ಸಾವಿರ ಕೋಟಿ ಉಳಿತಾಯವಾಗಲಿದೆ. ಪ್ರಸ್ತುತ, ಈ ಸಂಗ್ರಹಣೆಯಲ್ಲಿ 25 ಮಿಲಿಯನ್ ಟನ್ ಗೋಧಿಯನ್ನು ಖರೀದಿಸಲು ಸುಮಾರು 8 ಸಾವಿರ ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಎಷ್ಟು ಭಾಗಗಳಲ್ಲಿ ಸಬ್ಸಿಡಿ ಲಭ್ಯವಿದೆ
ಸರ್ಕಾರದಿಂದ ಗೋಧಿ ಆಹಾರ ಸಬ್ಸಿಡಿ ಮೂರು ಭಾಗಗಳಲ್ಲಿದೆ. ಸರ್ಕಾರದ ಸಹಾಯಧನವನ್ನು ವೆಚ್ಚದ ಬೆಲೆ ಮತ್ತು ರಫ್ತು ಬೆಲೆಯಿಂದ ಪೂರೈಸಲಾಗುತ್ತದೆ. ಇದಲ್ಲದೆ, ಸಾರಿಗೆ ವೆಚ್ಚಗಳು, ನಿರ್ವಹಣೆ ಶುಲ್ಕಗಳು, ಶೇಖರಣಾ ನಷ್ಟಗಳು, ಬಡ್ಡಿ ವೆಚ್ಚಗಳು, ಕಾರ್ಯಾಚರಣೆಯ ನಷ್ಟಗಳು ಮತ್ತು ಆಡಳಿತಾತ್ಮಕ ವೆಚ್ಚಗಳು ಸಹ ಇವೆ.

ಗೋಧಿಗೆ ಸರಿಯಾದ ಬೆಲೆ ಸಿಕ್ಕಿದೆ
ಈ ವರದಿಯಲ್ಲಿ ಹೇಳುವ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಗೋಧಿಗೆ ಹೆಚ್ಚಿದ ಬೇಡಿಕೆಯಿಂದಾಗಿ, ದೇಶದ ರೈತರು ತಮ್ಮ ಬೆಳೆಯಿಂದ ದುಪ್ಪಟ್ಟು ಲಾಭವನ್ನು ಪಡೆದಿದ್ದಾರೆ.
ಎಫ್‌ಸಿಐನೊಂದಿಗೆ ಸಾಕಷ್ಟು ಪ್ರಮಾಣದ ಗೋಡೌನ್‌ಗಳು ಲಭ್ಯವಿರುವುದರಿಂದ ಈ ಬಾರಿ ಹವಾಮಾನ ಬದಲಾವಣೆ ಮತ್ತು ಮಾನ್ಸೂನ್‌ನಲ್ಲಿ ಆಹಾರ ಧಾನ್ಯಗಳು ಹಾಳಾಗುವ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಎಫ್‌ಸಿಐ ಗೋದಾಮುಗಳಲ್ಲಿ ಗೋಧಿ ಸಂಗ್ರಹಣೆ ಮಾಡಲಾಗಿದೆ.

ಒಂದು ವರ್ಷದಿಂದ ಗೋಧಿ ಬೆಲೆ ಕ್ರಮೇಣವಾಗಿ ಹೆಚ್ಚಳ
ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆಯು ಏರಿಕೆ ಕಂಡಿದೆ. ಕಳೆದ ಏಪ್ರಿಲ್‌ನಲ್ಲಿ ಭಾರತದಲ್ಲೂ ಗೋಧಿಯ ಬೆಲೆಯು ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಿದೆ. ಗೋಧಿಯ ಚಿಲ್ಲರೆ ಬೆಲೆಗಳು 2021ರ ಮಾರ್ಚ್ ತಿಂಗಳ ವೇಳೆಯಲ್ಲಿ 27.90 ರೂಪಾಯಿಯಿಂದ 2022ರ ಮಾರ್ಚ್ ವೇಳೆಗೆ ಕೆಜಿಗೆ 28.67 ರೂಪಾಯಿ ಆಗಿದೆ. ಗೋಧಿ ಚಿಲ್ಲರೆ ಬೆಲೆಗಳು ಮಾರ್ಚ್ 2021 ರಲ್ಲಿ ಪ್ರತಿ ಕೆಜಿಗೆ 31.77 ರೂ. ಇದ್ದು 2022ರ ಮಾರ್ಚ್ ವೇಳೆಗೆ ಅದು 32.03 ರೂಪಾಯಿಗೆ ಏರಿಕೆ ಆಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:30 am, Mon, 9 May 22