AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗಿ ಐದು ತಾಸಿನೊಳಗೆ ವಿಚ್ಛೇದನವೂ ಆಯ್ತು, ಇದೆಂಥಾ ಮದುವೆ

ಮದುವೆ(Marriage)ಯಾಗಿ ಐದೇ ತಾಸಿನೊಳಗೆ ಈ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಉತ್ತರ ಪ್ರದೇಶದ ದೇವರಿಯಾ ಗ್ರಾಮದಲ್ಲಿ ನಡೆದಿದೆ. ಜೀವನದಲ್ಲಿ ಅತ್ಯಂತ ಸಂತೋಷದಾಯಕ ಮತ್ತು ಸ್ಮರಣೀಯ ದಿನವಾಗಬೇಕಿದ್ದ ಆ ದಿನ ದುಃಸ್ವಪ್ನವಾಗಿ ಪರಿಣಮಿಸಿತು. ಗುರುಹಿರಿಯರ ಎದುರು ವಿಶಾಲ್ ಹಾಗೂ ಪೂಜಾ ಹಸೆಮಣೆ ಏರಿದ್ದರು. ಮದುವೆಯೂ ಅದ್ಧೂರಿಯಾಗಿ ನೆರವೇರಿತ್ತು. ವಧುವನ್ನು ಗಂಡನ ಮನೆಗೆ ಕಳುಹಿಸುವ ಶಾಸ್ತ್ರವೂ ಆಗಿತ್ತು. ಮನೆಗೆ ಹೋದ ಬಳಿಕ ವಧು ಕೋಣೆಯಿಂದ ಹೊರಬಂದವಳೇ ನಾನು ತವರು ಮನೆಗೆ ಹೋಗುತ್ತೇನೆಂದು ಪಟ್ಟು ಹಿಡಿದಳು.

ಮದುವೆಯಾಗಿ ಐದು ತಾಸಿನೊಳಗೆ ವಿಚ್ಛೇದನವೂ ಆಯ್ತು, ಇದೆಂಥಾ ಮದುವೆ
ಮದುವೆ
ನಯನಾ ರಾಜೀವ್
|

Updated on: Dec 03, 2025 | 12:03 PM

Share

ದೇವರಿಯಾ, ಡಿಸೆಂಬರ್ 03: ಮದುವೆ(Marriage)ಯಾಗಿ ಐದೇ ತಾಸಿನೊಳಗೆ ಈ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಉತ್ತರ ಪ್ರದೇಶದ ದೇವರಿಯಾ ಗ್ರಾಮದಲ್ಲಿ ನಡೆದಿದೆ. ಜೀವನದಲ್ಲಿ ಅತ್ಯಂತ ಸಂತೋಷದಾಯಕ ಮತ್ತು ಸ್ಮರಣೀಯ ದಿನವಾಗಬೇಕಿದ್ದ ಆ ದಿನ ದುಃಸ್ವಪ್ನವಾಗಿ ಪರಿಣಮಿಸಿತು. ಗುರುಹಿರಿಯರ ಎದುರು ವಿಶಾಲ್ ಹಾಗೂ ಪೂಜಾ ಹಸೆಮಣೆ ಏರಿದ್ದರು. ಮದುವೆಯೂ ಅದ್ಧೂರಿಯಾಗಿ ನೆರವೇರಿತ್ತು. ವಧುವನ್ನು ಗಂಡನ ಮನೆಗೆ ಕಳುಹಿಸುವ ಶಾಸ್ತ್ರವೂ ಆಗಿತ್ತು. ಮನೆಗೆ ಹೋದ ಬಳಿಕ ವಧು ಕೋಣೆಯಿಂದ ಹೊರಬಂದವಳೇ ನಾನು ತವರು ಮನೆಗೆ ಹೋಗುತ್ತೇನೆಂದು ಪಟ್ಟು ಹಿಡಿದಳು.

ಮದುವೆಯಾಗಿ ಮನೆಗೆ ಬಂದು ಕೇವಲ 20 ನಿಮಿಷಗಳಲ್ಲಿ ಎಲ್ಲವೂ ನಡೆದುಹೋಗಿತ್ತು. ಈ ಮನೆಯಲ್ಲಿ ಇರುವುದಿಲ್ಲ ಎಂದು ಆಕೆ ಹೇಳಿದಾಗ ಎಲ್ಲರೂ ತಮಾಷೆ ಮಾಡುತ್ತಿದ್ದಾಳೆ ಎಂದೇ ಭಾವಿಸಿದ್ದರು. ಆದರೆ ಪೂಜಾ ತನ್ನ ಹೆತ್ತವರಿಗೆ ಕರೆ ಮಾಡಿ ನಾನು ಇಲ್ಲಿ ಇರುವುದಿಲ್ಲ ಎಂದು ಹೇಳಿದ್ದಾಳೆ, ಆದರೆ ಯಾಕೆ ಈ ರೀತಿಯ ನಿರ್ಧಾರ ಮಾಡಿದ್ದಾಳೆ ಎನ್ನುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಅವಳ ಮನಸ್ಸನ್ನು ಬದಲಾಯಿಸಿದ ಬಗ್ಗೆ ಹೆಚ್ಚಿನ ವಿವರಗಳಿಲ್ಲ.

ನಂತರ ವಿಶಾಲ್ ಕುಟುಂಬವು ಪೂಜಾಳ ಕುಟುಂಬಕ್ಕೆ ಕರೆ ಮಾಡಿ ಆಕೆಯ ನಿರ್ಧಾರವನ್ನು ತಿಳಿಸಿದೆ. ಅವರು ಆಕೆಯ ಮನವೊಲಿಸಲು ಪ್ರಯತ್ನಿಸಿದರೂ, ಆಕೆ ತನ್ನ ನಿರ್ಧಾರವನ್ನು ಬದಲಾಯಿಸಲು ಅಥವಾ ತನ್ನ ಹಠಾತ್ ಮನಸ್ಸಿನ ಬದಲಾವಣೆಯ ಹಿಂದಿನ ಕಾರಣವನ್ನು ಹಂಚಿಕೊಳ್ಳಲು ಇನ್ನೂ ಸಿದ್ಧರಿರಲಿಲ್ಲ.

ಮತ್ತಷ್ಟು ಓದಿ: ಮದುವೆಯಾದ ಮರುದಿನವೇ ಮದುಮಗ ಹೃದಯಾಘಾತದಿಂದ ಸಾವು

ಇದಾದ ನಂತರ, ಗ್ರಾಮದಲ್ಲಿ ಪಂಚಾಯತ್ ಕರೆಯಲಾಯಿತು, ಅಲ್ಲಿ ಎರಡೂ ಕುಟುಂಬಗಳು ಮತ್ತು ಸ್ಥಳೀಯ ನಿವಾಸಿಗಳು ಮರುದಿನ ಸುಮಾರು ಐದು ಗಂಟೆಗಳ ಕಾಲ ಈ ವಿಷಯದ ಬಗ್ಗೆ ಚರ್ಚಿಸಿದರು. ಅಂತಿಮವಾಗಿ ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ಕೊನೆಗೊಳಿಸಬೇಕು ಎಂದು ನಿರ್ಧರಿಸಲಾಯಿತು. ಎಲ್ಲಾ ಮದುವೆಯ ಉಡುಗೊರೆಗಳನ್ನು ಹಿಂತಿರುಗಿಸಲಾಯಿತು ಮತ್ತು ವಧು ತನ್ನ ಕುಟುಂಬದೊಂದಿಗೆ ಹೊರಟುಹೋದಳು.

ಸುದ್ದಿವಾಹಿನಿಯೊಂದಕ್ಕೆ ಮಾತನಾಡಿದ ವಿಶಾಲ್, ಪೂಜಾ ಮದುವೆಗೆ ಮೊದಲು ತನ್ನನ್ನು ಮದುವೆಯಾಗಲು ಎಂದಿಗೂ ಇಷ್ಟವಿರಲಿಲ್ಲ, ಆಕೆ ಹೆಚ್ಚಾಗಿ ನನ್ನೊಂದಿಗೆ ಮಾತನಾಡುತ್ತಲೇ ಇರಲಿಲ್ಲ, ಈಗ ಮದುವೆಯ ಬಳಿಕ ಆಕೆ ಮನೆ ಬಿಟ್ಟು ಹೋಗಿರುವುದು ಎರಡೂ ಕುಟುಂಬಗಳಿಗೂ ಮುಜುಗರವನ್ನುಂಟು ಮಾಡಿದೆ ಎಂದು ವಿಶಾಲ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್