AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಪರ ಬೇಹುಗಾರಿಕೆ ಆರೋಪ, ಗುರುಗ್ರಾಮದ ವಕೀಲನ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಬೇಹುಗಾರಿಕೆ ಮತ್ತು ಮಾಹಿತಿ ರವಾನಿಸಿದ ಆರೋಪದ ಮೇಲೆ ಗುರುಗ್ರಾಮದ ವಕೀಲನನ್ನು ಬಂಧಿಸಲಾಗಿದೆ. ಬಂಧಿಸಲಾಗಿರುವ ವಕೀಲ ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿದ್ದ. ಮತ್ತು ಹಣ ಪಡೆಯಲು ಏಳು ಬಾರಿ ಅಮೃತಸರಕ್ಕೆ ಭೇಟಿ ನೀಡಿದ್ದ ಎಂದು ಸ್ನೇಹಿತ ಮುಷರಫ್ ಅಲಿಯಾಸ್ ಪರ್ವೇಜ್ ಪೊಲೀಸರಿಗೆ ತಿಳಿಸಿದ್ದಾರೆ. ಮುಷರಫ್ ಪ್ರಕಾರ, 2022 ರಲ್ಲಿ ಸೋಹ್ನಾ ನ್ಯಾಯಾಲಯದಲ್ಲಿ ಇಂಟರ್ನ್‌ಶಿಪ್ ಮಾಡುವಾಗ ಬಂಧಿತ ವಕೀಲ ರಿಜ್ವಾನ್ ಜತೆ ಸ್ನೇಹ ಬೆಳೆಸಿದ್ದರು.

ಪಾಕ್ ಪರ ಬೇಹುಗಾರಿಕೆ ಆರೋಪ, ಗುರುಗ್ರಾಮದ ವಕೀಲನ ಬಂಧನ
ಪೊಲೀಸ್ Image Credit source: NDTV
ನಯನಾ ರಾಜೀವ್
|

Updated on: Dec 03, 2025 | 10:28 AM

Share

ಪಂಜಾಬ್, ಡಿಸೆಂಬರ್ 03: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಬೇಹುಗಾರಿಕೆ(Spy) ಮತ್ತು ಮಾಹಿತಿ ರವಾನಿಸಿದ ಆರೋಪದ ಮೇಲೆ ಗುರುಗ್ರಾಮದ ವಕೀಲನನ್ನು ಬಂಧಿಸಲಾಗಿದೆ. ಬಂಧಿಸಲಾಗಿರುವ ವಕೀಲ ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿದ್ದ. ಮತ್ತು ಹಣ ಪಡೆಯಲು ಏಳು ಬಾರಿ ಅಮೃತಸರಕ್ಕೆ ಭೇಟಿ ನೀಡಿದ್ದ ಎಂದು ಸ್ನೇಹಿತ ಮುಷರಫ್ ಅಲಿಯಾಸ್ ಪರ್ವೇಜ್ ಪೊಲೀಸರಿಗೆ ತಿಳಿಸಿದ್ದಾರೆ. ಮುಷರಫ್ ಪ್ರಕಾರ, 2022 ರಲ್ಲಿ ಸೋಹ್ನಾ ನ್ಯಾಯಾಲಯದಲ್ಲಿ ಇಂಟರ್ನ್‌ಶಿಪ್ ಮಾಡುವಾಗ ಬಂಧಿತ ವಕೀಲ ರಿಜ್ವಾನ್ ಜತೆ ಸ್ನೇಹ ಬೆಳೆಸಿದ್ದರು.

ನಂತರ, ಮುಷರಫ್ ನುಹ್ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡಲು ಪ್ರಾರಂಭಿಸಿದ್ದರು ಮತ್ತು ರಿಜ್ವಾನ್ ಗುರುಗ್ರಾಮ್ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡಿದ್ದ. ಆದಾಗ್ಯೂ, ಇಬ್ಬರೂ ಆಗಾಗ ಕಾನೂನು ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಮತ್ತು ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಹೊರಗೆ ಹೋಗಿದ್ದರು.

ಜುಲೈನಲ್ಲಿ ತಾನು ಮತ್ತು ರಿಜ್ವಾನ್ ಅಮೃತಸರ ವಾಘಾ ಗಡಿಗೆ ತಮ್ಮ ಕಾರಿನಲ್ಲಿ ಹೋಗಿದ್ದೆವು ಎಂದು ಮುಷರಫ್ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಆತ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದ. ಅಲ್ಲಿ ರಿಜ್ವಾನ್ ದ್ವಿಚಕ್ರ ವಾಹನದಲ್ಲಿ ಬಂದ ಕೆಲವು ಜನರಿಂದ ಹಣದ ಚೀಲವನ್ನು ಪಡೆದಿದ್ದರು. ಆದರೂ ನನಗೆ ಅವರ ಮೇಲೆ ಅನುಮಾನ ಬಂದಿರಲಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಬೇಹುಗಾರಿಕೆ ಆರೋಪ: ಯೂಟ್ಯೂಬರ್ ಜ್ಯೋತಿ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ

ಮನೆಗೆ ಹಿಂದಿರುಗುವಾಗ, ಇಬ್ಬರಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಇದರಿಂದಾಗಿ ಅವರು ಕಾರನ್ನು ಬಿಟ್ಟು ರೈಲಿನಲ್ಲಿ ಪ್ರಯಾಣಿಸಬೇಕಾಯಿತು. ಅಪಘಾತಕ್ಕೀಡಾದ ಕಾರನ್ನು ತೆಗೆದುಕೊಳ್ಳಲು ಇಬ್ಬರು ವಕೀಲರು ಆಗಸ್ಟ್ 1 ರಂದು ಮತ್ತೆ ಅಮೃತಸರಕ್ಕೆ ಪ್ರಯಾಣ ಬೆಳೆಸಿದರು ಎಂದು ಮುಷರಫ್ ಹೇಳಿದರು. ಆ ಸಂಜೆ ಅವರು ಅಮೃತಸರದ ಹೋಟೆಲ್‌ನಲ್ಲಿ ತಂಗಿದ್ದರು. ಆದರೆ ರಿಜ್ವಾನ್ ರಾತ್ರಿ ಹಣ ತರುವುದಾಗಿ ಹೇಳಿ ಹೊರಟುಹೋಗಿದ್ದರು. ರಿಜ್ವಾನ್ ಇಲ್ಲಿಯವರೆಗೆ 41 ಲಕ್ಷ ರೂ. ನಗದು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ, ಅದನ್ನು ಅಜಯ್ ಅರೋರಾ ಎಂದು ಗುರುತಿಸಲಾದ ವ್ಯಕ್ತಿಗೆ ತಲುಪಿಸಿದ್ದರು.

ರಿಜ್ವಾನ್ ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾನೆಂದು ತಿಳಿದುಬಂದಿದೆ ಟೌರುದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ಮತ್ತು ಸೋಹ್ನಾದಲ್ಲಿ ಇಂಡಸ್ಇಂಡ್ ಬ್ಯಾಂಕ್ ಖಾತೆ.ಪಾಕಿಸ್ತಾನಿ ನಿರ್ವಾಹಕರಿಂದ ಕೋಟ್ಯಂತರ ರೂಪಾಯಿ ಹವಾಲಾ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ಇದು ತೋರಿಸುತ್ತದೆ. ಇದರಲ್ಲಿ ಹೆಚ್ಚಿನ ಭಾಗವನ್ನು ಪಂಜಾಬ್‌ನಲ್ಲಿ ಭಯೋತ್ಪಾದಕ ಜಾಲವನ್ನು ಬಲಪಡಿಸಲು ಬಳಸಲಾಗಿದೆ ಎಂದು ಅವರು ಹೇಳಿದರು.

ರಿಜ್ವಾನ್ ಖಾತೆಗಳಲ್ಲಿ ಎಷ್ಟು ಹಣ ಜಮಾ ಆಗಿದೆ ಎಂಬುದರ ಬಗ್ಗೆ ತನಗೆ ನಿಖರವಾದ ಮಾಹಿತಿ ಇಲ್ಲ ಎಂದು ಮುಷರಫ್ ಹೇಳಿದ್ದಾರೆ.ರಿಜ್ವಾನ್ ಅವರ ಲ್ಯಾಪ್‌ಟಾಪ್ ಮತ್ತು ಫೋನ್‌ನಲ್ಲಿ ಅನುಮಾನಾಸ್ಪದ ವಹಿವಾಟುಗಳು ಪತ್ತೆಯಾಗಿವೆ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ನುಹ್ ಪೊಲೀಸ್ ತಂಡಗಳು ಪಂಜಾಬ್‌ನಾದ್ಯಂತ ದಾಳಿ ನಡೆಸುತ್ತಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದೇವಾಲಯಗಳ ಮೇಲೆ ನಿಧಿಗಳ್ಳರ ಕಣ್ಣು
ದೇವಾಲಯಗಳ ಮೇಲೆ ನಿಧಿಗಳ್ಳರ ಕಣ್ಣು
ಡಿಕೆಶಿ ಬಳಿ ದೆಹಲಿಗೆ ಬನ್ನಿ ಎಂದಿದ್ದರೂ ರಾಹುಲ್ ಗಾಂಧಿ ಸಿಗೋದು ಅನುಮಾನ!
ಡಿಕೆಶಿ ಬಳಿ ದೆಹಲಿಗೆ ಬನ್ನಿ ಎಂದಿದ್ದರೂ ರಾಹುಲ್ ಗಾಂಧಿ ಸಿಗೋದು ಅನುಮಾನ!
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು