ಹತಾಶೆ ರಾಹುಲ್ ಗಾಂಧಿಯನ್ನು ಸಲ್ಲದ ಆರೋಪ ಮಾಡಲು ಪ್ರೇರೇಪಿಸುತ್ತಿದೆ: ಪ್ರಹ್ಲಾದ್ ಜೋಶಿ

|

Updated on: Aug 17, 2020 | 9:12 PM

ಫೇಸ್​ಬುಕ್ ವಿರುದ್ಧ ಜಂಟಿ ಲೋಕಸಭಾ ಸಮಿತಿ (ಜೆಪಿಸಿ) ರಚಿಸಿ ತನಿಖೆಗೆ ನಡೆಸಬೇಕೆಂದು ಸರಕಾರದ ಮೇಲೆ ಕಾಂಗ್ರೆಸ್ ಒತ್ತಡ ಹೇರುತ್ತಿರುವುದನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಗೇಲಿ ಮಾಡಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಜೋಶಿ, ‘‘ಕಾಂಗ್ರೆಸ್ ಪಕ್ಷ ಹತಾಶ ಮನಸ್ಥಿತಿಯಲ್ಲಿದೆ, ಜೆಪಿಸಿ ರಚಿಸಬೇಕೆಂದು ಅದು ಮಾಡುತ್ತಿರುವ ವಾದದಲ್ಲಿ ಯಾವುದೇ ಹುರುಳಿಲ್ಲ. ರಾಹುಲ್ ಗಾಂಧಿಯ ಪಾಲಿಗೆ ಎಫ್ ಬಿ ಹತಾಶೆಯ ಬುಕ್ ಆಗಿದೆ‌,’’ ಎಂದರು. ‘‘ರಾಹುಲ್​ ಮತ್ತು ಅವರ ಪಕ್ಷ ಎಲ್ಲರ ಮೇಲೆ ಅನುಮಾನಪಡುವುದನ್ನು ಅಭ್ಯಾಸ ಮಾಡಿಕೊಂಡಂತಿದೆ. ಕೇಂದ್ರ […]

ಹತಾಶೆ ರಾಹುಲ್ ಗಾಂಧಿಯನ್ನು ಸಲ್ಲದ ಆರೋಪ ಮಾಡಲು ಪ್ರೇರೇಪಿಸುತ್ತಿದೆ: ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Follow us on

ಫೇಸ್​ಬುಕ್ ವಿರುದ್ಧ ಜಂಟಿ ಲೋಕಸಭಾ ಸಮಿತಿ (ಜೆಪಿಸಿ) ರಚಿಸಿ ತನಿಖೆಗೆ ನಡೆಸಬೇಕೆಂದು ಸರಕಾರದ ಮೇಲೆ ಕಾಂಗ್ರೆಸ್ ಒತ್ತಡ ಹೇರುತ್ತಿರುವುದನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಗೇಲಿ ಮಾಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಜೋಶಿ, ‘‘ಕಾಂಗ್ರೆಸ್ ಪಕ್ಷ ಹತಾಶ ಮನಸ್ಥಿತಿಯಲ್ಲಿದೆ, ಜೆಪಿಸಿ ರಚಿಸಬೇಕೆಂದು ಅದು ಮಾಡುತ್ತಿರುವ ವಾದದಲ್ಲಿ ಯಾವುದೇ ಹುರುಳಿಲ್ಲ. ರಾಹುಲ್ ಗಾಂಧಿಯ ಪಾಲಿಗೆ ಎಫ್ ಬಿ ಹತಾಶೆಯ ಬುಕ್ ಆಗಿದೆ‌,’’ ಎಂದರು.

‘‘ರಾಹುಲ್​ ಮತ್ತು ಅವರ ಪಕ್ಷ ಎಲ್ಲರ ಮೇಲೆ ಅನುಮಾನಪಡುವುದನ್ನು ಅಭ್ಯಾಸ ಮಾಡಿಕೊಂಡಂತಿದೆ. ಕೇಂದ್ರ ಚುನಾವಣಾ ಆಯೋಗ, ಸುಪ್ರೀಂಕೋರ್ಟ್, ರಿಸರ್ವ್ ಬ್ಯಾಂಕ್ ಸೇರಿದಂತೆ ಎಲ್ಲ ಸಂಸ್ಥೆಗಳ ಮೇಲೂ ಅವರಿಗೆ ಅನುಮಾನವಿದೆ. ಇದು ಕಾಂಗ್ರೆಸ್ ಪಕ್ಷದ ಹತಾಶೆಯ ಪ್ರತೀಕವಲ್ಲದೆ ಮತ್ತೇನೂ ಅಲ್ಲ. 2019ರಲ್ಲಿ ರಾಹುಲ್ ಪ್ರಧಾನಿಯಾಗಲು ಸಿದ್ಧರಿದ್ದರು, ಆದರೆ ದೇಶದ ಜನ ಅವರನ್ನು ಹೀನಾಯವಾಗಿ ತಿರಸ್ಕರಿಸಿದರು. ಇದೇ ಹತಾಶೆ ಅವರನ್ನು ಸುಳ್ಳು ಆರೋಪ ಮಾಡುವಂತೆ ಪ್ರೇರೇಪಿಸುತ್ತಿದೆ,’’ ಎಂದು ಜೋಷಿ ಅಣಕವಾಡಿದರು.