ಗೃಹಿಣಿಯರಿಗೆ ಗುಡ್ ನ್ಯೂಸ್: LPG ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗುವ ಲೆಕ್ಕಾಚಾರವಿದೆ!
ದೆಹಲಿ: ಲಾಕ್ಡೌನ್ ತಂದೊಡ್ಡಿರುವ ಆರ್ಥಿಕ ಸಂಕಷ್ಟ ಜನರ ಜೇಬಿಗೆ ಸಾಕಷ್ಟು ಹೊಡೆತ ಬಿದ್ದಿದೆ. ಉದ್ಯೋಗ ಕಳೆದುಕೊಂಡ ಕೆಲವರು ಇದ್ದರೆ, ಮತ್ತಷ್ಟು ಜನರ ಆದಾಯದ ಮೂಲ ಬತ್ತು ಹೋಗಿ ಪರದಾಡುವ ಸ್ಥಿತಿ ಎದುರಾಗಿದೆ. ಆದರೆ, ಇದೀಗ ಕೇಂದ್ರ ಸರ್ಕಾರ ಜನರಿಗೆ ಸಂಕಷ್ಟದಿಂದ ಕೊಂಚ ರಿಲೀಫ್ ನೀಡಲು ಮುಂದಾಗಿದೆ. ಹೌದು, ಕೇಂದ್ರ ಸರ್ಕಾರ ಇದೀಗ ದ್ರವೀಕೃತ ಪೆಟ್ರೋಲಿಯಮ್ ಅನಿಲ (LPG ) ಸಿಲಿಂಡರ್ಗಳ ಬೆಲೆಯನ್ನ ಮತ್ತಷ್ಟು ಅಗ್ಗಗೊಳಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಸರ್ಕಾರವು LPG ಅನಿಲದ ಪರಿಷ್ಕೃತ […]
ದೆಹಲಿ: ಲಾಕ್ಡೌನ್ ತಂದೊಡ್ಡಿರುವ ಆರ್ಥಿಕ ಸಂಕಷ್ಟ ಜನರ ಜೇಬಿಗೆ ಸಾಕಷ್ಟು ಹೊಡೆತ ಬಿದ್ದಿದೆ. ಉದ್ಯೋಗ ಕಳೆದುಕೊಂಡ ಕೆಲವರು ಇದ್ದರೆ, ಮತ್ತಷ್ಟು ಜನರ ಆದಾಯದ ಮೂಲ ಬತ್ತು ಹೋಗಿ ಪರದಾಡುವ ಸ್ಥಿತಿ ಎದುರಾಗಿದೆ. ಆದರೆ, ಇದೀಗ ಕೇಂದ್ರ ಸರ್ಕಾರ ಜನರಿಗೆ ಸಂಕಷ್ಟದಿಂದ ಕೊಂಚ ರಿಲೀಫ್ ನೀಡಲು ಮುಂದಾಗಿದೆ.
ಹೌದು, ಕೇಂದ್ರ ಸರ್ಕಾರ ಇದೀಗ ದ್ರವೀಕೃತ ಪೆಟ್ರೋಲಿಯಮ್ ಅನಿಲ (LPG ) ಸಿಲಿಂಡರ್ಗಳ ಬೆಲೆಯನ್ನ ಮತ್ತಷ್ಟು ಅಗ್ಗಗೊಳಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಸರ್ಕಾರವು LPG ಅನಿಲದ ಪರಿಷ್ಕೃತ ದರವನ್ನ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಮಾಡಲು ಮುಂದಾಗಿದೆ.
ಇದು ಅಕ್ಟೋಬರ್ ತಿಂಗಳ ಲೆಕ್ಕಾಚಾರಕ್ಕೆ ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ಸ್ಗೆ (MMBtu) ಕೇಂದ್ರ ಸರ್ಕಾರವು ಅಕ್ಟೋಬರ್ ತಿಂಗಳ ಖಾತೆಗೆ 1.94 ಡಾಲರ್ ದರ ನಿಗದಿ ಮಾಡಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ನಿಗದಿಯಾಗಿರುವ ಅತ್ಯಂತ ಕಡಿಮೆ ದರ ಎಂದು ತಿಳಿದುಬಂದಿದೆ. ಹೀಗಾಗಿ, ಪ್ರತಿ LPG ಸಿಲಿಂಡರ್ನ ಬೆಲೆ ಮತ್ತಷ್ಟು ಅಗ್ಗ ಆಗಲಿದೆಯಂತೆ.
ಇನ್ನು ಪರಿಷ್ಕೃತ ದರ ಅಕ್ಟೋಬರ್ 1ರಿಂದ ಜಾರಿಗೆ ಬರುವ ಸಾಧ್ಯತೆಯಿದ್ದು ಇದರಿಂದ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ಕಡಿಮೆ ಆಗಲಿದೆ. ಆದರೆ, ಕೇಂದ್ರದ ಈ ನಿರ್ಧಾರದಿಂದ ಸರ್ಕಾರಿ ನೈಸರ್ಗಿಕ ತೈಲ ಉತ್ಪಾದಕ ONGC ಕಂಪನಿಗೆ ಮತ್ತಷ್ಟು ಆರ್ಥಿಕ ಹೊರೆ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಪರಿಷ್ಕೃತ ದರದಿಂದ ONGC ಸುಮಾರು 6,000 ಕೋಟಿ ರೂಪಾಯಿ ನಷ್ಟ ಅನುಭವಿಸುವ ಸ್ಥಿತಿ ಕಾಣಬಹುದು ಎಂದು ಅಂದಾಜಿಸಿದ್ದಾರೆ.
Published On - 6:30 pm, Mon, 17 August 20