
ನವದೆಹಲಿ, ಅಕ್ಟೋಬರ್ 9: ದೆಹಲಿ ಪೊಲೀಸರು ಪ್ರತಿಭಟನೆಗೆ ಸ್ಪಷ್ಟವಾಗಿ ಅನುಮತಿಯನ್ನು ನಿರಾಕರಿಸಿದ್ದರೂ ಸಹ, ಇಂದು (ಅಕ್ಟೋಬರ್ 10) ದೆಹಲಿಯ ಜಂತರ್ ಮಂತರ್‌ನಲ್ಲಿ ತಾವು ಮತ್ತು ತಮ್ಮ ಸಂಘಟನೆಯು ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಸ್ಪಷ್ಟಪಡಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ದಿಪ್ಕೆ, “ನಮ್ಮ ಆಂದೋಲನ ನಿಲ್ಲುವುದಿಲ್ಲ. ಜಂತರ್ ಮಂತರ್ ನಿಗದಿತ ಪ್ರತಿಭಟನಾ ಸ್ಥಳವಾಗಿದೆ. ಸಂವಿಧಾನದ ವಿಧಿ 19 ಪ್ರತಿಭಟಿಸುವ ಮೂಲಭೂತ ಹಕ್ಕನ್ನು ನೀಡುತ್ತದೆ. ಹಾಗಿದ್ದಾಗ ಅನುಮತಿ ಪಡೆಯುವ ಅಗತ್ಯವೇನಿದೆ?” ಎಂದು ಪ್ರಶ್ನಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯ ವಿಚಾರವಾಗಿ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “13 ಕೋಟಿ ಮತಗಳನ್ನು ತೆಗೆದುಹಾಕುವ ಮೊದಲು ಅವರು ಅನುಮತಿ ಪಡೆದಿದ್ದರೆ? ಹಾಗಿರುವಾಗ ಚುನಾವಣೆಯಲ್ಲಿ ಅಕ್ರಮ ಎಸಗುವವರ ವಿರುದ್ಧ ನಾವು ಪ್ರತಿಭಟನೆ ನಡೆಸಬಾರದು ಎಂದು ಹೇಳುವುದು ಎಷ್ಟು ಸರಿ? ಇದು ಸಾಧ್ಯವಿಲ್ಲ. ದೇಶವನ್ನು ಉಳಿಸಲು ನಾವು ಪ್ರತಿಭಟನೆ ನಡೆಸುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿ: ಎಸ್‌ಐಆರ್ ವಿರುದ್ಧ ಬೆಂಗಳೂರಿನಲ್ಲಿ ಸಿಜೆಪಿ ಪ್ರತಿಭಟನೆ: ಆಯೋಗದ ವಿರುದ್ಧ ಗುಡುಗಿದ ದೀಪ್ಕೆ, ಧ್ರುವ್ ರಾಠಿ, ಪ್ರಕಾಶ್ ರಾಜ್
ದೆಹಲಿಯಲ್ಲಿ ನಡೆಯಲಿರುವ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯಲು ಭಾರತದಾದ್ಯಂತ ಸಾವಿರಾರು ಯುವಕರನ್ನು ಬಂಧಿಸಲಾಗುತ್ತಿದೆ ಎಂದು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ದಿಪ್ಕೆ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಅವರ ಈ ಹೇಳಿಕೆ ಬಂದಿದೆ. ಇಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ದಿಪ್ಕೆ, “ನಮ್ಮ ಅಕ್ಟೋಬರ್ 10ರ ಪ್ರತಿಭಟನೆಗೆ ಮುನ್ನ ಬಿಜೆಪಿ ಸರ್ಕಾರವು ದೇಶಾದ್ಯಂತ ಸಾವಿರಾರು ಯುವಕರನ್ನು ವಶಕ್ಕೆ ಪಡೆದಿದೆ. ಈ ಬೆದರಿಕೆ ತಂತ್ರಗಳು ನಡೆಯುವುದಿಲ್ಲ ಮೋದಿಯವರೇ. ಈ ದೇಶದ ಯುವಕರು ಇನ್ನು ಮುಂದೆ ನಿಮಗೆ ಹೆದರುವುದಿಲ್ಲ” ಎಂದು ಹೇಳಿದ್ದರು.
Thousands of youngsters have been detained across country by the BJP Govt ahead of our October 10 protest.
This intimidation is not going to work, Modi. The youth of this country are no longer scared of you.
I’ll be landing in Delhi tomorrow and will march to Jantar Mantar, come what may.
— Abhijeet Dipke (@abhijeet_dipke) October 9, 2026
ಇದನ್ನೂ ಓದಿ: ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ, ಇದು ದೀರ್ಘಾವಧಿಯ ಹೋರಾಟ: ಅ. 10ರ ಜಂತರ್ ಮಂತರ್ ಚಲೋಗೆ ಸಿಜೆಪಿಯ ಸೌರವ್ ದಾಸ್ ಕರೆ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳು ಮತ್ತು ಸಿಜೆಪಿ ಆಗ್ರಹಿಸುತ್ತಿವೆ. ಆಂತರಿಕ ಸಭೆಯಲ್ಲಿ ಇಬ್ಬರು ಚುನಾವಣಾ ಆಯುಕ್ತರು ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಲು ಒಪ್ಪಿರಲಿಲ್ಲ ಮತ್ತು ಆಕ್ಷೇಪಣೆಗಳನ್ನು ಎತ್ತಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದ ನಂತರ ಅವರ ರಾಜೀನಾಮೆಗೆ ಆಗ್ರಹ ತೀವ್ರಗೊಂಡಿದೆ. ಆದರೆ, ಈ ನಿರ್ಧಾರವು ಸರ್ವಸಮ್ಮತವಾಗಿತ್ತು ಮತ್ತು ಮೂವರು ಆಯುಕ್ತರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ