Digital Beggar: ಡಿಜಿಟಲ್ ಭಿಕ್ಷುಕ! ಕೈಯಲ್ಲಿ ಕ್ಯೂಆರ್ ಕೋಡ್‌ ಹಿಡಿದು ಭಿಕ್ಷಾಟನೆ, ವಿಡಿಯೋ ವೈರಲ್​

Digital Payment: ಇದು ಡಿಜಿಟಲ್ ಯುಗ. ಹಾಗಾಗಿಯೇ ಭಿಕ್ಷುಕರೂ ಸಹ ಅಪ್​​ಗ್ರೇಡ್​​ ಆಗಿದ್ದಾರೆ. ಭಿಕ್ಷೆ ಬೇಡುವ ಶೈಲಿಯೂ ಬದಲಾಗಿದೆ. ಭಿಕ್ಷಾಟನೆಯು ಕಾಲಕ್ಕೆ ತಕ್ಕಂತೆ ಸಂಪೂರ್ಣವಾಗಿ ನವೀಕರಿಸಲ್ಪಟ್ಟಿದೆ.

Digital Beggar: ಡಿಜಿಟಲ್ ಭಿಕ್ಷುಕ! ಕೈಯಲ್ಲಿ ಕ್ಯೂಆರ್ ಕೋಡ್‌ ಹಿಡಿದು ಭಿಕ್ಷಾಟನೆ, ವಿಡಿಯೋ ವೈರಲ್​
ಕೈಯಲ್ಲಿ ಕ್ಯೂಆರ್ ಕೋಡ್‌ ಹಿಡಿದು ಭಿಕ್ಷಾಟನೆ

Updated on: Jul 04, 2023 | 10:27 AM

ಪ್ರತಿನಿತ್ಯ ನಾವು ಭಿಕ್ಷುಕರನ್ನು ಗಲ್ಲಿಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಕೊನೆಗೆ ರೈಲಿನಲ್ಲಿಯೂ ಕಾಣುತ್ತೇವೆ. ಅನೇಕ ಬಾರಿ ಭಿಕ್ಷುಕರು ನಾನಾ ರೀತಿಯಲ್ಲಿ ಭಿಕ್ಷೆ ಬೇಡುವುದನ್ನು ನೋಡುತ್ತೇವೆ. ಸಾಮಾನ್ಯವಾಗಿ ಭಿಕ್ಷುಕರು ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಹಾಡುಗಳನ್ನು ಹಾಡುತ್ತಾ, ಭಿಕ್ಷೆ ಬೇಡುತ್ತಾರೆ. ಇಲ್ಲದಿದ್ದರೆ, ಭಿಕ್ಷುಕರು ಕೈಯಲ್ಲಿ ತಟ್ಟೆ ಅಥವಾ ಇತರ ಪಾತ್ರೆಗಳನ್ನು ಹಿಡಿದು ಭಿಕ್ಷೆ ಬೇಡುತ್ತಾರೆ. ಆದರೆ ಇದು ಡಿಜಿಟಲ್ ಯುಗ (Digital India) ಅಲ್ಲವಾ!? ಅದಕ್ಕಾಗಿಯೇ ಭಿಕ್ಷುಕರೂ ಸಹ ಅಪ್​​ಗ್ರೇಡ್​​ ಆಗಿದ್ದಾರೆ. ಭಿಕ್ಷೆ ಬೇಡುವ ಶೈಲಿಯೂ ಬದಲಾಗಿದೆ. ಭಿಕ್ಷಾಟನೆಯು ಕಾಲಕ್ಕೆ ತಕ್ಕಂತೆ ಸಂಪೂರ್ಣವಾಗಿ ನವೀಕರಿಸಲ್ಪಟ್ಟಿದೆ (Digital Beggar). ಇತ್ತೀಚೆಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಒಬ್ಬ ಭಿಕ್ಷುಕನು ವಿಭಿನ್ನವಾಗಿ ಭಿಕ್ಷೆ ಬೇಡುತ್ತಿರುವುದು ಕಂಡುಬರುತ್ತದೆ.

ಆ ವೈರಲ್ ವಿಡಿಯೋದಲ್ಲಿ, ಭಿಕ್ಷುಕನೊಬ್ಬ ತನ್ನ ಕೈಯಲ್ಲಿ ಕ್ಯೂಆರ್ ಕೋಡ್ ಬೋರ್ಡ್ (QR Code)​​​ ಹಿಡಿದು ಜನರ ಬಳಿ ಭಿಕ್ಷೆ ಬೇಡುತ್ತಾನೆ. ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಆ ವ್ಯಕ್ತಿ ಭಿಕ್ಷೆ ಬೇಡುವ ವರ್ತನೆಯನ್ನು ವಿಡಿಯೋ ಮೂಲಕ ದಾಖಲಿಸಿದ್ದಾರೆ. ಇದೀಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಾಮಾನ್ಯವಾಗಿ ಭಿಕ್ಷುಕರು ಬೇಡಿದಾಗ ದಾನದ ರೂಪದಲ್ಲಿ ಕೆಲವರು ತಿನ್ನಲು ಏನಾದರೂ ಕೊಡುತ್ತಾರೆ. ಅಥವಾ ನಗದು ರೂಪದಲ್ಲಿ ಒಂದಷ್ಟು ಹಣ ಕೊಟ್ಟು ಕಳುಹಿತ್ತಾರೆ.

ಆದರೆ ಇದು ಡಿಜಿಟಲ್ ಯುಗ ಅಲ್ಲವಾ? ಆದ್ದರಿಂದ ನಗದು ರೂಪದಲ್ಲಿ ಹಣ ಕೊಡುವುದು ತುಸು ತ್ರಾಸಾದೀತು. ಅದಕ್ಕೆ ಇಲ್ಲೊಬ್ಬ ಭಿಕ್ಷುಕ ದೂರದೃಷ್ಟಿ ಹೊಂದಿ, ಕೈಯಲ್ಲಿ ಕ್ಯೂಆರ್ ಕೋಡ್ ಹಿಡಿದು ಭಿಕ್ಷೆ ಬೇಡುತ್ತಿದ್ದಾನೆ. ಲೋಕಲ್ ರೈಲಿನಲ್ಲಿ ಭಾರೀ ಜನಸಂದಣಿಯ ನಡುವೆ ಆ ವ್ಯಕ್ತಿ ಕೈಯಲ್ಲಿ ಕ್ಯೂಆರ್ ಕೋಡ್ ಹಿಡಿದು ಭಿಕ್ಷೆ ಬೇಡುತ್ತಿರುವ ದೃಶ್ಯ ವೈರಲ್ ಆಗಿದೆ. ಅಲ್ಲಿ ನಿಂತಿದ್ದ ಪ್ರಯಾಣಿಕರು ಭಿಕ್ಷುಕನನ್ನು ನೋಡಿ ಆಶ್ಚರ್ಯಚಕಿತರಾಗಿದ್ದರೆ, ಕೆಲವರು ನಗಾಡುತ್ತಿದ್ದಾರೆ.

ಕ್ಯೂಆರ್ ಕೋಡ್ ಹಿಡಿದುಕೊಂಡು ರಸ್ತೆಬದಿಯಲ್ಲಿ ನಿಂತಿರುವ ಭಿಕ್ಷುಕರ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸದ್ಯ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲಿ ಒಬ್ಬ ಭಿಕ್ಷುಕ ವಿಚಿತ್ರ ಧ್ವನಿಯಲ್ಲಿ ಹಾಡು ಹಾಡುತ್ತಾ ಭಿಕ್ಷೆ ಬೇಡುವುದನ್ನು ಕಾಣಬಹುದು. ಮುಂಬೈ ಮೂಲದವರಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ವೈರಲ್ ಆಗುತ್ತಿರುತ್ತವೆ.

ವಾಣಿಜ್ಯಕ್ಕೆ  ಸಂಬಂಧಪಟ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 am, Tue, 4 July 23