Jodhpur: ಸರ್ಕಾರಿ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥ ರೋಗಿಗಳ ಕಾಲು ಕಚ್ಚುತ್ತಿವೆ ಇಲಿಗಳು

ಜೋಧ್​ಪುರದ ಎಂಡಿಎಂ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದಲ್ಲಿ ಇಲಿಗಳು ರೋಗಿಗಳ ಕಾಲುಗಳನ್ನು ಕಚ್ಚುತ್ತಿವೆ ಎನ್ನುವ ದೂರು ಕೇಳಿಬಂದಿದೆ. ಆಡಳಿತವು ಸೋಮವಾರ ಈ ವಿಷಯದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಿತು.

Jodhpur: ಸರ್ಕಾರಿ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥ ರೋಗಿಗಳ ಕಾಲು ಕಚ್ಚುತ್ತಿವೆ ಇಲಿಗಳು
ಇಲಿ
Follow us
|

Updated on: Jul 04, 2023 | 11:16 AM

ಜೋಧ್​ಪುರ(Jodhpur)ದ ಎಂಡಿಎಂ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದಲ್ಲಿ ಇಲಿಗಳು ರೋಗಿಗಳ ಕಾಲುಗಳನ್ನು ಕಚ್ಚುತ್ತಿವೆ ಎನ್ನುವ ದೂರು ಕೇಳಿಬಂದಿದೆ. ಆಡಳಿತವು ಸೋಮವಾರ ಈ ವಿಷಯದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಿತು. ನಾಲ್ಕು ಮಾನಸಿಕ ರೋಗಿಗಳು ಕಳೆದ ವಾರ ದೂರು ನೀಡಿದ್ದರು, ಈಗ ಮತ್ತೆ ಅಂಥದ್ದೇ ಘಟನೆ ಮುನ್ನೆಲೆಗೆ ಬಂದಿದ್ದು ಆಡಳಿತವನ್ನು ಮಧ್ಯಪ್ರವೇಶಿಸುವಂತೆ ಕೇಳಿಕೊಳ್ಳಲಾಯಿತು.

ನಾವು ಸಮಿತಿಯನ್ನು ರಚಿಸಿದ್ದೇವೆ, ಮನೋವೈದ್ಯಕೀಯ ವಿಭಾಗದಲ್ಲಿ ರೋಗಿಗಳಿಗೆ ಉಂಟಾದ ಗಾಯಗಳು ಇಲಿಗಳಿಂದ ಉಂಟಾಗಿದೆಯೇ ಅಥವಾ ಇನ್ನಾವುದೇ ಕಾರಣದಿಂದ ಉಂಟಾಗಿದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳುತ್ತೇವೆ ಎಂದು ದು ಎಸ್‌ಎನ್ ವೈದ್ಯಕೀಯ ಕಾಲೇಜು ಮತ್ತು ಸಂಬಂಧಿತ ಆಸ್ಪತ್ರೆಗಳ ಪ್ರಾಂಶುಪಾಲರಾದ ದಿಲೀಪ್ ಕಚ್ವಾಹಾ ಹೇಳಿದರು.

ಮತ್ತಷ್ಟು ಓದಿ: Uttar Pradesh: ಆಸ್ಪತ್ರೆಯ ಲಿಫ್ಟ್​ನಲ್ಲಿ ಸಿಲುಕಿಕೊಂಡ 12 ರೋಗಿಗಳು, 20 ನಿಮಿಷಗಳ ಬಳಿಕ ರಕ್ಷಣೆ

ವರದಿಯ ಆಧಾರದ ಮೇಲೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು, ಆಸ್ಪತ್ರೆಯಲ್ಲಿ ಕೀಟ ನಿಯಂತ್ರಣದ ಜವಾಬ್ದಾರಿ ಹೊಂದಿರುವ ರಾಜಸ್ಥಾನ ಪೆಸ್ಟ್ ಕಂಟ್ರೋಲ್ ವಿರುದ್ಧ ಕ್ರಮ ಕೈಗೊಳ್ಳಲು ಆಸ್ಪತ್ರೆ ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಕಚ್ವಾಹಾ ಹೇಳಿದರು.

ರೋಗಿಗಳ ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸಿ ಮನೋವೈದ್ಯಕೀಯ ವಿಭಾಗದಲ್ಲಿ ಕೀಟನಾಶಕ ಸಿಂಪಡಣೆಯಿಂದ ಅಪಾಯವಿದೆ ಎಂದು ತಿಳಿಸಿದ ಆಡಳಿತವು ವಾರ್ಡ್ ಅನ್ನು ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ಹೇಳಿದರು.

ಜೋಧ್‌ಪುರ ವಿಭಾಗದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಎಂಡಿಎಂ ಆಸ್ಪತ್ರೆಯು ನಡೆಯುತ್ತಿರುವ ನಿರ್ಮಾಣ ಕಾರ್ಯ ಮತ್ತು ನೆಲದ ಮೇಲೆ ಬಿದ್ದಿರುವ ಆಹಾರ ತ್ಯಾಜ್ಯಗಳಿಂದ ಇಲಿಗಳಿಗೆ ನೆಲೆಯಾಗಿದೆ, ಇದು ಇಲಿಗಳಿಗೆ ಅನುಕೂಲಕರ ಆವಾಸಸ್ಥಾನವಾಗಿದೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ